For Quick Alerts
ALLOW NOTIFICATIONS  
For Daily Alerts

4 ವರ್ಷದಲ್ಲೇ ಅತ್ಯಂತ ಕೆಟ್ಟ ತಿಂಗಳು ಕಂಡ ಚಿನ್ನ; ಗರಿಷ್ಠದಿಂದ 8000 ರು. ಇಳಿಕೆ

By ಅನಿಲ್ ಆಚಾರ್
|

ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ (ನವೆಂಬರ್ 30, 2020) ಚಿನ್ನದ ದರವು ಇಳಿಕೆ ಕಂಡಿದೆ. ಆ ಮೂಲಕ ಕಳೆದ ನಾಲ್ಕು ವರ್ಷದಲ್ಲೇ ಚಿನ್ನ ಕಂಡಂಥ ಅತ್ಯಂತ ಕೆಟ್ಟ ತಿಂಗಳು ನವೆಂಬರ್ ಆದಂತಾಗಿದೆ. ಇನ್ನೇನು ಕೊರೊನಾ ಲಸಿಕೆ ಬರಲಿದೆ ಎಂಬ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತ ಎಂಬ ಭಾವನೆಯಲ್ಲಿ ಇದ್ದವರು ಅದರಿಂದ ಹಿಂದಕ್ಕೆ ಸರಿಯುತ್ತಿದ್ದಾರೆ.

ಸ್ಪಾಟ್ ಗೋಲ್ಡ್ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್) 1.2 ಪರ್ಸೆಂಟ್ ಇಳಿಕೆ ಕಂಡು, $ 1766.26 ತಲುಪಿತು. ಈ ತಿಂಗಳಲ್ಲೇ ಅಂದರೆ, ನವೆಂಬರ್ ನಲ್ಲಿ 6% ಬೆಲೆ ಕುಸಿತ ಕಂಡಂತಾಗಿದೆ ಚಿನ್ನ. 2016ರ ನವೆಂಬರ್ ನಂತರ ಒಂದು ತಿಂಗಳಲ್ಲಿ ಚಿನ್ನವು ಕಂಡಂಥ ಗರಿಷ್ಠ ಕುಸಿತ ಇದಾಗಿದೆ.

ಗುರು ನಾನಕ್ ಜಯಂತಿ: ಷೇರು ಮಾರುಕಟ್ಟೆ ವಹಿವಾಟು ಇಲ್ಲಗುರು ನಾನಕ್ ಜಯಂತಿ: ಷೇರು ಮಾರುಕಟ್ಟೆ ವಹಿವಾಟು ಇಲ್ಲ

ಇನ್ನು ಬೆಳ್ಳಿ ಬೆಲೆಯು 3.2% ಕುಸಿದು, ಪ್ರತಿ ಔನ್ಸ್ ಗೆ $ 21.96 ತಲುಪಿದೆ. ಪ್ಲಾಟಿನಂ 0.9% ಇಳಿಕೆ ಕಂಡು, $ 954.64 ಹಾಗೂ ಪಲಾಡಿಯಂ 0.4% ಇಳಿದು, $ 2416.22ರಲ್ಲಿ ವಹಿವಾಟು ನಡೆಸಿದೆ. ಭಾರತದಲ್ಲಿ ಸೋಮವಾರ ಗುರುನಾನಕ್ ಜಯಂತಿ ಪ್ರಯುಕ್ತ ಸಾರ್ವಜನಿಕ ರಜಾ ದಿನ ಇದ್ದು, ಬೆಳಗ್ಗೆ 9ರಿಂದ ಸಂಜೆ 5ರ ತನಕ ಎಂಸಿಎಕ್ಸ್ ಕಾರ್ಯ ನಿರ್ವಹಿಸುವುದಿಲ್ಲ. ಸಂಜೆ 5ರ ಮೇಲೆ ವಹಿವಾಟು ಶುರುವಾಗುತ್ತದೆ.

4 ವರ್ಷದಲ್ಲಿ ಕೆಟ್ಟ ತಿಂಗಳು ಕಂಡ ಚಿನ್ನ ಗರಿಷ್ಠದಿಂದ 8000 ರು. ಇಳಿಕೆ

ಜಾಗತಿಕ ಮಾರ್ಕೆಟ್ ದುರ್ಬಲತೆ ಅನುಸರಿಸಿ ಕಳೆದ ವಾರ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿತ ಮುಂದುವರಿದಿತ್ತು. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ ಶುಕ್ರವಾರ 0.85% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ ರು. 48,106 ತಲುಪಿತು. ಬೆಳ್ಳಿ ಫ್ಯೂಚರ್ಸ್ 1.3% ಇಳಿಕೆ ಕಂಡು, ಪ್ರತಿ ಕೇಜಿಗೆ 59,100 ರುಪಾಯಿ ಮುಟ್ಟಿತು. ಕಳೆದ ಆಗಸ್ಟ್ ನಲ್ಲಿ ಗರಿಷ್ಠ ಮಟ್ಟವಾದ 56,200 ರುಪಾಯಿ ತಲುಪಿದ್ದ ಚಿನ್ನ, ಅಲ್ಲಿಂದ 8000 ರುಪಾಯಿ ಇಳಿಕೆ ಕಂಡಿದೆ.

English summary

Gold Prices Today Set Biggest Monthly Fall In 4 Years

Yellow metal gold set biggest monthly fall in 4 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X