For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಂದು ಸ್ಥಿರವಾಗಿದೆ: 8 ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪಿಸಿದೆ

|

ಐದು ದಿನಗಳ ಸತತ ಕುಸಿತದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿತ್ತು, ಅದು ಬೆಲೆಗಳನ್ನು ಸುಮಾರು 8 ತಿಂಗಳ ಕನಿಷ್ಠಕ್ಕೆ ತಳ್ಳಿದೆ. ಎಂಸಿಕ್ಸ್‌ನಲ್ಲಿ, ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಯಾಗಿ, 46,407 ಕ್ಕೆ ತಲುಪಿದ್ದರೆ, ಬೆಳ್ಳಿ ಶೇಕಡಾ 0.4ರಷ್ಟು ಹೆಚ್ಚಳದಿಂದ ಕೆಜಿಗೆ 69,500 ರೂಪಾಯಿಗೆ ತಲುಪಿದೆ. ಹಿಂದಿನ ಐದು ವಹಿವಾಟುಗಳಲ್ಲಿ, ಚಿನ್ನವು 10 ಗ್ರಾಂಗೆ ಸುಮಾರು 2,000 ರೂಪಾಯಿ ಕುಸಿತಗೊಂಡಿದೆ.

ಚಿನ್ನದ ಬೆಲೆ ಇಂದು ಸ್ಥಿರವಾಗಿದೆ: 8 ತಿಂಗಳ ಕನಿಷ್ಠ ಮಟ್ಟ

 

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ದರವು ಔನ್ಸ್‌ಗೆ 1,782.61 ಡಾಲರ್ ಸಮೀಪದಲ್ಲಿದೆ, ಇದು ಶೇಕಡಾ 0.4ರಷ್ಟು ಏರಿಕೆಯಾಗಿದೆ. ಬುಧವಾರ, ಚಿನ್ನವು 1,769 ಡಾಲರ್‌ಗೆ ಇಳಿದಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಸ್ಥಿರವಾಗಿದ್ದರೆ, ಪ್ಲಾಟಿನಂ ಮತ್ತು ಪಲ್ಲಾಡಿಯಮ್ ಎರಡೂ ಶೇಕಡಾ 1ಕ್ಕಿಂತ ಹೆಚ್ಚು ಮುಂದುವರೆದವು.

ಒಂದು ದಶಕದಲ್ಲಿ ತನ್ನ ಅತಿದೊಡ್ಡ ವಾರ್ಷಿಕ ಲಾಭದಲ್ಲಿ ಕಳೆದ ವರ್ಷ ಸುಮಾರು ಶೇಕಡಾ 25 ರಷ್ಟು ಜಿಗಿದಿದ್ದ ಚಿನ್ನವು ಈ ವರ್ಷ ಇಲ್ಲಿಯವರೆಗೆ ಶೇಕಡಾ 6ಕ್ಕಿಂತಲೂ ಹೆಚ್ಚು ಕುಸಿದಿದೆ.

English summary

Gold Prices Today Steady Near 8 Month Lows: Rs 10,000 Down From Record High

Gold was steady today in Indian markets after a five-day slide that pushed prices to nearly 8-month low
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X