For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಕುಸಿತ: ಗರಿಷ್ಠ ಮಟ್ಟಕ್ಕಿಂತ 12,000 ರೂ. ಕಡಿಮೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಿದ್ದು, ದುರ್ಬಲ ಜಾಗತಿಕ ಸೂಚನೆಗಳ ಹೊರತಾಗಿ ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.3ರಷ್ಟು ಇಳಿಕೆಯಾಗಿ 44,400 ರೂಪಾಯಿಗೆ ತಲುಪಿದೆ. ಈ ಮೂಲಕ ಕಳೆದ 9 ವಹಿವಾಟುಗಳಲ್ಲಿ 8ನೇ ದಿನ ಕುಸಿತಗೊಂಡಿದೆ.

ಚಿನ್ನದ ಬೆಲೆ ಕುಸಿತ: ಗರಿಷ್ಠ ಮಟ್ಟಕ್ಕಿಂತ 12,000 ರೂ. ಕಡಿಮೆ

 

ಚಿನ್ನದ ಜೊತೆಗೆ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.6ರಷ್ಟು ಇಳಿದು 65,523 ರೂಪಾಯಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿದು 1,693.79 ಡಾಲರ್‌ಗೆ ತಲುಪಿದೆ. ಹಾಗೆಯೇ ಬೆಳ್ಳಿ ಔನ್ಸ್‌ಗೆ ಶೇಕಡಾ 0.2ರಷ್ಟು ಕಡಿಮೆಯಾಗಿ 25.35 ಡಾಲರ್‌ಗೆ ತಲುಪಿದ್ದು, ವಾರದಲ್ಲಿ ಶೇಕಡಾ 5ರಷ್ಟು ಇಳಿಕೆಯಾಗಿದೆ.

ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್‌ 04ರ ಬೆಲೆ ಇಲ್ಲಿದೆ

ಒಟ್ಟಾರೆಯಾಗಿ ಚಿನ್ನವು ಆಗಸ್ಟ್ ಗರಿಷ್ಠ 56,200 ರೂಪಾಯಿನಿಂದ 12,000 ರೂಪಾಯಿ ಕಡಿಮೆಯಾಗಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.4ರಷ್ಟು ಇಳಿದು 10 ತಿಂಗಳ ಕನಿಷ್ಠ 44,768 ರೂಪಾಯಿಗೆ ತಲುಪಿತ್ತು.

English summary

Gold Prices Today Suffer More Losses: Down Rs 12,000 From Record Highs

Gold suffered further losses today amid weak global cues. On MCX, gold futures were down 0.3% to Rs 44,400 per 10 gram
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X