For Quick Alerts
ALLOW NOTIFICATIONS  
For Daily Alerts

ಐದು ದಿನಗಳ ಕುಸಿತದ ಬಳಿಕ ಇಂದು ಚಿನ್ನದ ಬೆಲೆ ಏರಿಕೆ

|

ಐದು ದಿನಗಳ ಕುಸಿತದ ನಂತರ ಇಂದು ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಗೊಂಡು 47,265 ರೂಪಾಯಿಗೆ ತಲುಪಿದೆ.

 

ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಏಪ್ರಿಲ್ 28ರ ಬೆಲೆ ಹೀಗಿದೆಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಏಪ್ರಿಲ್ 28ರ ಬೆಲೆ ಹೀಗಿದೆ

ಚಿನ್ನದ ಜೊತೆಗೆ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 1.1ರಷ್ಟು ಏರಿಕೆಗೊಂಡು 68,534 ರೂಪಾಯಿ ದಾಖಲಾಗಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.42ರಷ್ಟು ಏರಿಕೆಗೊಂಡರೆ, ಬೆಳ್ಳಿ ಬೆಲೆ ಶೇಕಡಾ 1.75ರಷ್ಟು ಕುಸಿದಿದೆ. ಕಳೆದ ವಾರ ಚಿನ್ನವು ಎರಡು ತಿಂಗಳ ಗರಿಷ್ಠ 48,400 ರೂಪಾಯಿಗೆ ತಲುಪಿತು.

 
ಐದು ದಿನಗಳ ಕುಸಿತದ ಬಳಿಕ ಇಂದು ಚಿನ್ನದ ಬೆಲೆ ಏರಿಕೆ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,784.94 ಡಾಲರ್‌ಗೆ ತಲುಪಿದೆ. ಡಾಲರ್ ಸೂಚ್ಯಂಕವು ಇತರ ಕರೆನ್ಸಿಗಳ ವಿರುದ್ಧ ಶೇಕಡಾ 0.05ರಷ್ಟು ಕಡಿಮೆಯಾಗಿದೆ.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.6ರಷ್ಟು ಏರಿಕೆ ಕಂಡು 26.34 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.3ರಷ್ಟು ಏರಿಕೆಯಾಗಿ 1,222.93 ಡಾಲರ್‌ಗೆ ತಲುಪಿದೆ.

ಇಂದು ಚಿನ್ನದ ಬೆಲೆ ಏರಿಕೆಗೊಂಡರೂ ಆಗಸ್ಟ್‌ನ ಗರಿಷ್ಠ 56,200 ರೂಪಾಯಿಗಿಂತ 9,000 ರೂಪಾಯಿ ಕಡಿಮೆಯಿದೆ.

English summary

Gold Prices Today Up After 5 Day Fall:Know More

Gold prices today edged higher in Indian markets after a five-day decline.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X