ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳ ನಡುವೆ ಭಾರತೀಯ ಮಾರುಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ 10 ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಗೊಂಡು 49,049 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಬೆಲೆಯು ಶೇಕಡಾ 0.7ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ 72,622 ರೂಪಾಯಿಗೆ ಮುಟ್ಟಿದೆ.
ಕಳೆದ ವಹಿವಾಟಿನಲ್ಲಿ ಚಿನ್ನವು 0.62ರಷ್ಟು ಮತ್ತು ಬೆಳ್ಳಿ 0.51ರಷ್ಟು ಗಳಿಸಿದೆ. ಮಾರ್ಚ್‌ನಲ್ಲಿ ಭಾರತದ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 44,000 ರೂಪಾಯಿಗೆ ತಲುಪಿದೆ. ಇತ್ತೀಚಿನ ಬೆಲೆಗಳ ಚೇತರಿಕೆಯ ಹೊರತಾಗಿಯೂ, ಚಿನ್ನದ ದರಗಳು ಕಳೆದ ವರ್ಷದ ಗರಿಷ್ಠ 56,200 ರೂಪಾಯಿಗಳಿಂದ ಗಮನಾರ್ಹವಾಗಿ ಕಡಿಮೆಯಾಗಿದೆ.

ಚಿನ್ನವು ಔನ್ಸ್‌ಗೆ ಶೇಕಡಾ 0.4ರಷ್ಟು ಏರಿಕೆಗೊಂಡು 1,906.16 ಡಾಲರ್‌ಗೆ ತಲುಪಿದ್ದರೆ, ಬೆಳ್ಳಿ ಸ್ಥಿರವಾಗಿ 27.99 ಡಾಲರ್ ಮತ್ತು ಪ್ಲಾಟಿನಂ ಶೇಕಡಾ 0.8ರಷ್ಟು ಏರಿಕೆ ಕಂಡು 1,200.69 ಡಾಲರ್‌ಗೆ ತಲುಪಿದೆ. ಚಿನ್ನದ ಬೆಲೆಗಳು 1,890 ಡಾಲರ್‌ಗಿಂತ ಹೆಚ್ಚಿದ್ದರೆ, ದಿನದ ಚೇತರಿಕೆ ಮುಂದುವರಿಕೆಗೆ ಅವಕಾಶಗಳಿವೆ.
ಏಷ್ಯನ್ ಇಕ್ವಿಟಿ ಮಾರುಕಟ್ಟೆಗಳು ಇಂದು ಹೆಚ್ಚಾಗಿದ್ದು, ಕಳೆದ ವಾರ ಕುಸಿತದಿಂದ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ $ 40,000 ಕ್ಕೆ ಏರಿಕೆಗೊಂಡು ಚೇತರಿಕೆ ಕಾಣುತ್ತಿದೆ.


Click it and Unblock the Notifications