ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ ಏರಿಕೆಯತ್ತ ಮುಖಮಾಡಿದೆ. ಅಮೆರಿಕಾದ ಫೆಡರಲ್ ರಿಸರ್ವ್ ತನ್ನ ಸುಲಭ ಹಣಕಾಸು ನೀತಿ ನಿಲುವನ್ನು ಉಳಿಸಿಕೊಂಡ ನಂತರ ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಏರಿಕೆಗೊಂಡಿದೆ.
ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.8ರಷ್ಟು ಏರಿಕೆ ಕಂಡು, 45,189 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ದರವು ಶೇಕಡಾ 1.2ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ, 68,021 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನವು ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ ಮತ್ತು ಬೆಳ್ಳಿ ಶೇಕಡಾ 0.5ರಷ್ಟು ಏರಿಕೆಯಾಗಿದೆ.

ಇನ್ನು ಸ್ಪಾಟ್ ಚಿನ್ನ ಇಂದು ಔನ್ಸ್‌ಗೆ ಶೇಕಡಾ 0.5ರಷ್ಟು ಏರಿಕೆಯಾಗಿ 1,752.41 ಡಾಲರ್‌ಗೆ ತಲುಪಿದೆ.
ಬಹುತೇಕ ಏಷ್ಯಾದ ಆರ್ಥಿಕತೆಗಳು ವೇಗದ ವಿಸ್ತರಣೆಯ ಟ್ರ್ಯಾಕ್‌ಗೆ ಮರಳಿದೆ ಎಂದು ಅಮೆರಿಕಾ ಸೆಂಟ್ರಲ್ ಬ್ಯಾಂಕ್ ಬುಧವಾರ ಹೇಳಿದ ಬಳಿಕ ಇಂದು ಏಷ್ಯಾದ ಷೇರು ಮಾರುಕಟ್ಟೆಗಳು ಹೆಚ್ಚಿವೆ.
ಇದರ ಜೊತೆಗೆ ಬ್ಯಾಂಕ್ ಆಫ್ ಜಪಾನ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಹಣಕಾಸು ನೀತಿ ನಿರ್ಧಾರವನ್ನು ಚಿನ್ನದ ವ್ಯಾಪಾರಿಗಳು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದಾರೆ.


Click it and Unblock the Notifications