For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ದಾಖಲೆಯ ಮಟ್ಟಕ್ಕಿಂತ 9,000 ರೂ. ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರ ತೀವ್ರ ಕುಸಿತದ ಬಳಿಕ ಇಂದು ಹಳದಿ ಲೋಹದ ಬೆಲೆ ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಶೇಕಡಾ 0.6ರಷ್ಟು ಏರಿಕೆಗೊಂಡು 47,004 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಬೆಲೆಯು ಶೇಕಡಾ 0.6ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ 68,789 ರೂಪಾಯಿಗೆ ತಲುಪಿದೆ.

 

ಕೊರೊನಾ ಎಫೆಕ್ಟ್‌: ಈ ವರ್ಷ ಮೊದಲ ಬಾರಿಗೆ ರಿಯಾಯಿತಿ ಬೆಲೆಯಲ್ಲಿ ಚಿನ್ನ ಮಾರಾಟ!ಕೊರೊನಾ ಎಫೆಕ್ಟ್‌: ಈ ವರ್ಷ ಮೊದಲ ಬಾರಿಗೆ ರಿಯಾಯಿತಿ ಬೆಲೆಯಲ್ಲಿ ಚಿನ್ನ ಮಾರಾಟ!

ಸ್ಪಾಟ್ ಚಿನ್ನವು ಔನ್ಸ್‌ಗೆ 1,770.66 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 25.90 ಡಾಲರ್‌ ಸ್ಥಿರವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ದಾಖಲೆಯ ಗರಿಷ್ಠ 56,200 ರೂಪಾಯಿಗೆ ತಲುಪಿದ ನಂತರ ಭಾರತದಲ್ಲಿ ಚಿನ್ನದ ಬೆಲೆಗಳು ಗರಿಷ್ಠ ಮಟ್ಟದಿಂದ ತೀವ್ರ ಕುಸಿತ ಕಂಡಿದೆ.

 
ಚಿನ್ನದ ಬೆಲೆ ಏರಿಕೆ: ದಾಖಲೆಯ ಮಟ್ಟಕ್ಕಿಂತ 9,000 ರೂ. ಕಡಿಮೆ

ಇತರ ಅಮೂಲ್ಯ ಲೋಹಗಳ ಪೈಕಿ ಪಲ್ಲಾಡಿಯಮ್ ಪ್ರತಿ ಔನ್ಸ್‌ಗೆ ಶೇಕಡಾ 0.3ರಷ್ಟು ಏರಿಕೆಯಾಗಿ 2,944.19 ಡಾಲರ್‌ ತಲುಪಿದೆ. ಶುಕ್ರವಾರ ಪಲ್ಲಾಡಿಯಮ್ ಸಾರ್ವಕಾಲಿಕ ದಾಖಲೆಯ ಮಟ್ಟ 3,007.73 ಡಾಲರ್‌ ತಲುಪಿತ್ತು.

ಸದ್ಯ ಕೋವಿಡ್-19 ನಿರ್ಬಂಧಗಳಿಂದಾಗಿ ಅನೇಕ ರಾಜ್ಯಗಳು ಲಾಕ್‌ಡೌನ್‌ನಲ್ಲಿದ್ದು, ಚಿನ್ನದ ಬೇಡಿಕೆ ಹಾಗೂ ಮಾರಾಟ ಪ್ರಮಾಣ ಇಳಿಕೆಗೊಂಡಿದೆ. ಭಾರತದಲ್ಲಿ ಚಿನ್ನದ ಬೆಲೆಗಳಲ್ಲಿ ಶೇಕಡಾ 10.75ರಷ್ಟು ಆಮದು ಸುಂಕ ಮತ್ತು ಶೇಕಡಾ 3ರಷ್ಟು ಜಿಎಸ್‌ಟಿ ಸೇರಿದೆ.

English summary

Gold Prices Today Up But Still Down Rs 9000 From Record High

Gold and silver prices edged higher today in Indian markets after a sharp fall last week.
Story first published: Monday, May 3, 2021, 11:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X