ಭಾರತೀಯ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗೊಂಡಿದ್ದು, ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಎರಡು ವಾರಗಳ ಗರಿಷ್ಠ 10 ಗ್ರಾಂಗೆ 47,445 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ಶೇಕಡಾ 0.3ರಷ್ಟು ಏರಿಕೆಗೊಂಡು 70,254 ರೂಪಾಯಿಗೆ ತಲುಪಿದೆ.
ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.11ರಷ್ಟು ಮತ್ತು ಬೆಳ್ಳಿ ಶೇಕಡಾ 0.18ರಷ್ಟು ಕುಸಿದಿದೆ. ಎಂಸಿಎಕ್ಸ್ ಚಿನ್ನದ ಭವಿಷ್ಯವು ಏರಿಕೆಯನ್ನ ಕಾಣಬಹುದು ಎಂದು ಕ್ಯಾಪಿಟಲ್ವಿಯಾ ಹೂಡಿಕೆ ಸಲಹಾ ಸಂಸ್ಥೆ ಹೇಳಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದ್ದು, 1,800 ಡಾಲರ್‌ಗೆ ಏರಿಕೆಗೊಂಡಿದೆ. ಸ್ಪಾಟ್ ಚಿನ್ನವು ಎರಡು ವಾರಗಳ ಗರಿಷ್ಠ ಔನ್ಸ್‌ಗೆ 1,792.34 ಡಾಲರ್‌ರಷ್ಟಿದೆ. ಮತ್ತೊಂದೆಡೆ, ಬೆಳ್ಳಿ ಔನ್ಸ್‌ಗೆ ಶೇಕಡಾ 0.1ರಷ್ಟು ಕಡಿಮೆಯಾಗಿ 26.44 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.5ರಷ್ಟು ಏರಿಕೆಗೊಂಡು 1,102.56 ಡಾಲರ್‌ಗೆ ತಲುಪಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,400 ರೂಪಾಯಿಗೆ ತಲುಪಿದ್ದರೆ, ಶುದ್ಧ ಚಿನ್ನವು 10 ಗ್ರಾಂ 48,440 ರೂಪಾಯಿ ತಲುಪಿದೆ.


Click it and Unblock the Notifications