For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ: ಕಳೆದ 15 ದಿನಗಳಲ್ಲಿ ಶೇಕಡಾ 6ರಷ್ಟು ಹೆಚ್ಚಳ

|

ಜಾಗತಿಕ ಮಟ್ಟದಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ಕಳೆದ 15 ದಿನಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಕೋವಿಡ್-19 ಸಾಂಕ್ರಾಮಿಕ ಹೆಚ್ಚಳದ ಜೊತೆಗೆ ಚಿನ್ನದ ಬೆಲೆ ಕೂಡ ಏರಿಕೆಯತ್ತ ಮುಖ ಮಾಡಿದೆ.

ಕಳೆದ 15 ದಿನಗಳಲ್ಲಿ ಎಂಸಿಎಕ್ಸ್‌ ಸ್ಪಾಟ್‌ ಚಿನ್ನದ ಬೆಲೆ 10 ಗ್ರಾಂಗೆ ಶೇಕಡಾ 6ರಷ್ಟು ಏರಿಕೆಯಾಗಿ 46,648 ರೂಪಾಯಿಗೆ ತಲುಪಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಔನ್ಸ್‌ಗೆ ಶೇಕಡಾ 4ರಷ್ಟು ಏರಿಕೆಗೊಂಡು 1,781 ಅಮೆರಿಕನ್ ಡಾಲರ್‌ಗೆ ತಲುಪಿದೆ.

ಚಿನ್ನದ ಬೆಲೆ: ಕಳೆದ 15 ದಿನಗಳಲ್ಲಿ ಶೇಕಡಾ 6ರಷ್ಟು ಹೆಚ್ಚಳ

"ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆ, ಮುಂದಿನ ಕೋವಿಡ್ ತರಂಗದ ಭಯ ಮತ್ತು ಅಮೆರಿಕಾದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ದುರ್ಬಲ ಅಮೆರಿಕಾ ಡಾಲರ್ ಮತ್ತು ಯುಎಸ್ ಸರ್ಕಾರದ ಕಾರ್ಯಕ್ರಮವು ಚಿನ್ನದ ಬೆಲೆಗಳಿಗೆ ಬಲವನ್ನು ನೀಡಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮೊದಲ ತ್ರೈಮಾಸಿಕದಲ್ಲಿ(Q1) ಆರ್ಥಿಕ ಚೇತರಿಕೆಯನ್ನ ಹದಗೆಡಿಸುವ ಅಪಾಯವನ್ನುಂಟುಮಾಡುತ್ತದೆ, ಅಲ್ಲದೆ ಇದು ಅನಿಶ್ಚಿತತೆಗಳನ್ನು ಸೃಷ್ಟಿಸುತ್ತದೆ. ಪರಿಸ್ಥಿತಿ ಸ್ಥಿರವಾಗುವವರೆಗೆ ಅಲ್ಪಾವಧಿಯಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು "ಎಂದು ಹೂಡಿಕೆ ಸಲಹಾ ಸಂಸ್ಥೆ ಮಿಲ್‌ವುಡ್ ಕೇನ್ ಇಂಟರ್‌ನ್ಯಾಷನಲ್ ಸ್ಥಾಪಕ ಮತ್ತು ಸಿಇಒ ನಿಶ್ ಭಟ್ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಜೋರಾಗಿರುವುದರ ಪರಿಣಾಮ, ವಿಶ್ವದಾದ್ಯಂತ ಸೆಂಟ್ರಲ್‌ ಬ್ಯಾಂಕ್‌ಗಳು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಹೆಚ್ಚಿನ ಹಣವನ್ನು ವ್ಯಯ ಮಾಡುತ್ತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ (ಏ.16) ಚಿನ್ನದ ಬೆಲೆ ಜಿಗಿತ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,150 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,300 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಹೆಚ್ಚಾಗಿ 68,500 ರೂಪಾಯಿ ದಾಖಲಾಗಿದೆ.

English summary

Gold Prices Up 6 Percent In Last 15 Days: Details Here

After witnessing a correction gold prices have again started its upward trajectory. In the last 15 days The MCX spot gold prices have surged around 6% to Rs 46,648 per 10 grams.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X