ಚಿನ್ನದ ಬೆಲೆ ಹೆಚ್ಚಳ: ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ

ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಏರಿಕೆ ಕಂಡಿದ್ದು, ದಾಖಲೆಯ ಮಟ್ಟದಲ್ಲಿದೆ. ಎಂಸಿಕ್ಸ್‌ನಲ್ಲಿ ಜೂನ್ ಚಿನ್ನದ ಭವಿಷ್ಯವು ಶೇಕಡಾ 0.35ರಷ್ಟು ಹೆಚ್ಚಾಗಿದ್ದು, ಒಂದು ತಿಂಗಳ ಗರಿಷ್ಠ 10 ಗ್ರಾಂಗೆ 45,503 ರಷ್ಟಿದ್ದರೆ, ಬೆಳ್ಳಿ ಶೇಕಡಾ 0.6ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ, 64,943 ರೂಪಾಯಿಗೆ ತಲುಪಿದೆ.

ಕಳೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಶೇಕಡಾ 0.15ರಷ್ಟು ಮತ್ತು 0.9ರಷ್ಟು ಇಳಿದಿದೆ. ಕಳೆದ ಒಂದು ತಿಂಗಳಲ್ಲಿ ಚಿನ್ನವು 45,700 ರೂಪಾಯಿಗಳಿಂದ 44,100 ರುಪಾಯಿವರೆಗೆ ವಹಿವಾಟು ನಡೆಸುತ್ತಿದೆ.

ಚಿನ್ನದ ಬೆಲೆ ಹೆಚ್ಚಳ: ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ

ಚಿನ್ನದ ಬೆಲೆಯಲ್ಲಿ ಇತ್ತೀಚಿನ ಏರಿಕೆಯ ಹೊರತಾಗಿಯೂ, ಹಳದಿ ಲೋಹವು ಆಗಸ್ಟ್ ಗರಿಷ್ಠ 56,200 ರೂಪಾಯಿಗಳಿಂದ 11,000 ರೂಪಾಯಿ ಕಡಿಮೆಯಾಗಿದೆ. ಮತ್ತು ಈ ವರ್ಷದ ಪ್ರಾರಂಭದಿಂದ, ಇದು ಸುಮಾರು 5,000 ರೂಪಾಯಿನಷ್ಟಿದೆ. ಕೋವಿಡ್ ವ್ಯಾಕ್ಸಿನ್ ನಡುವೆಯು ಜಾಗತಿಕ ಚೇತರಿಕೆಯ ನಿರೀಕ್ಷೆಗಳು ಅಮೂಲ್ಯವಾದ ಲೋಹದ ಮೇಲೆ ಒತ್ತಡವನ್ನುಂಟು ಮಾಡಿದೆ. ಕಳೆದ ವಾರ, ಚಿನ್ನದ ಬೆಲೆ 44,100 ರೂಪಾಯಿಗೆ ಇಳಿದಿದ್ದು, ಇದು 2020 ರ ಏಪ್ರಿಲ್ ನಂತರದ ಕನಿಷ್ಠ ಮಟ್ಟವಾಗಿದೆ.

ಇನ್ನು ಸ್ಪಾಟ್‌ ಗೋಲ್ಡ್‌ ಶೇಕಡಾ 0.3ರಷ್ಟು ಏರಿಕೆಗೊಂಡು 1,733.31 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಶೇಕಡಾ 0.3ರಷ್ಟು ಏರಿಕೆಯಾಗಿ 24.96 ಡಾಲರ್‌ಗೆ ತಲುಪಿದ್ದರೆ, ಪಲ್ಲಾಡಿಯಮ್ ಶೇಕಡಾ 0.3ರಷ್ಟು ಇಳಿಕೆಯಾಗಿ ಔನ್ಸ್‌ಗೆ 2,657.66 ಡಾಲರ್‌ಗೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+