For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ಗರಿಷ್ಠ ಮಟ್ಟಕ್ಕಿಂತ 9,500 ರೂಪಾಯಿ ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗೊಳ್ಳುತ್ತಿದ್ದು, ಗುರುವಾರ ಚಿನ್ನದ ಬೆಲೆ ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.28ರಷ್ಟು ಏರಿಕೆ ಕಂಡು 46,737 ರೂಪಾಯಿಗೆ ತಲುಪಿದೆ.

ಇನ್ಫೋಸಿಸ್ ಷೇರುದಾರರಿಗೆ ಬಂಪರ್ ಅವಕಾಶ: ಕೆಲವೇ ದಿನಗಳಲ್ಲಿ ಉತ್ತಮ ಲಾಭ!ಇನ್ಫೋಸಿಸ್ ಷೇರುದಾರರಿಗೆ ಬಂಪರ್ ಅವಕಾಶ: ಕೆಲವೇ ದಿನಗಳಲ್ಲಿ ಉತ್ತಮ ಲಾಭ!

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ಶೇಕಡಾ 0.17ರಷ್ಟು ಹೆಚ್ಚಾಗಿ 67,752 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.75ರಷ್ಟು ಮತ್ತು ಬೆಳ್ಳಿ ಶೇಕಡಾ 0.14ರಷ್ಟು ಕಡಿಮೆಯಾಗಿದೆ.

ಚಿನ್ನದ ಬೆಲೆ ಏರಿಕೆ: ಗರಿಷ್ಠ ಮಟ್ಟಕ್ಕಿಂತ 9,500 ರೂಪಾಯಿ ಕಡಿಮೆ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,738.96 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಶೇಕಡಾ 0.5ರಷ್ಟು ಏರಿಕೆಯಾಗಿ 25.53 ರೂಪಾಯಿ ಮತ್ತು ಪ್ಲಾಟಿನಂ ಶೇಕಡಾ 0.5ರಷ್ಟು ಏರಿಕೆ ಕಂಡು 1,176 ಡಾಲರ್‌ಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ ಕಡಿಮೆ ಮಟ್ಟದಲ್ಲಿದ್ದು, ಅಮೆರಿಕಾ ಡಾಲರ್ ಕೂಡ ದುರ್ಬಲವಾಗಿದೆ. ಭಾರತದಲ್ಲಿ ಚಿನ್ನವು ಈ ತಿಂಗಳ ಆರಂಭದಲ್ಲಿ ಸುಮಾರು 44,000 ರೂಪಾಯಿವರೆಗೆ ಇಳಿದಿತ್ತು, ಆದರೆ ಈಗ ಮತ್ತೆ ಏರಿಕೆಯಾಗತೊಡಗಿದೆ.

English summary

Gold Prices Up Today: Rs 9,500 From Record High

Gold and silver today edged higher in Indian markets, tracking positive global cues. Gold up 0.28% to Rs 46,737 per 10 gram
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X