Gold Price Today: ಹೊಸ ವರ್ಷಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ಬಂಗಾರದ ಮಾರುಕಟ್ಟೆ ಕೊಟ್ಟಿದೆ. ಹೌದು, ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಸ್ವಲ್ಪ ಇಳಿಕೆಯಾಗಿರುವುದು ಆಭರಣ ಖರೀದಿದಾರರಿಗೆ ರಿಲೀಫ್ ಸಿಕ್ಕಿದೆ. ಡಿಸೆಂಬರ್ 29 ರಂದು ಭಾನುವಾರ ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ.
ಬೆಲೆ ಏರಿಕೆಯಿಂದಾಗಿ ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಲು ಚಿನ್ನದ ಪ್ರಿಯರು ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ಬೆಲೆ ಇಳಿಕೆಯಾಗಿರುವುದಕ್ಕೆ ಅವರು ಖುಷಿ ದುಪ್ಪಾಟಾಗಿದೆ. ಸದ್ಯ ಬೆಂಗಳೂರಿನಲ್ಲಿ ಭಾನುವಾರ ( ಡಿ. 29) 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 150 ರೂಪಾಯಿ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,135 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,784 ರೂಪಯಿಗಳ ಮಾರಾಟ ನಡೆಯುತ್ತಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ ಇಂದು 71,350 ರೂಪಾಯಿ ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 77,840 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,13,500 ಇದೆ. 100 ಗ್ರಾಂ ಚಿನ್ನದ 24 ಕೆ ಬೆಲೆ 7,78,400 ರೂ.ಗಳ ವಹಿವಾಟು ನಡೆಸುತ್ತಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,400 ರೂಪಾಯಿ ಇದೆ.ನಿನ್ನೆಗೆ ಹೋಲಿಕೆ ಮಾಡಿದ್ದರೆ ಒಂದು ಕೆಜಿಯ ಬೆಳ್ಳಿಯ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ. ಮತ್ತು ಪ್ರತಿ ಗ್ರಾಂಗೆ ರೂ 92.40 ಆಗಿದೆ. 10 ಗ್ರಾಂ ಬೆಳ್ಳಿಯ ಬೆಲೆ 924 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,240 ರುಪಾಯಿಯ ವಹಿವಾಟುವಿದೆ.ಡಿಸೆಂಬರ್ ಆರಂಭದಿಂದಲೂ ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಆದರೆ, ನಿನ್ನೆ ಬೆಳ್ಳಿ ಬೆಲೆ ಏರಿಕೆಯಾಗಿತ್ತು.ಆದರೆ ಇಂದು ಬೆಳ್ಳಿಯ ಬೆಲೆ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೊಂದಿಗೆ ಬೆಳ್ಳಿಯ ದರವೂ ಸ್ವಲ್ಪ ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಸತತ ಮೂರು ದಿನಗಳಿಂದ ಏರಿಕೆ ಕಂಡಿದ್ದು, ಇಂದು 50 ಡಾಲರ್ ಗಿಂತ ಹೆಚ್ಚು ಕುಸಿದಿದೆ. ಪ್ರಸ್ತುತ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 2621 ಡಾಲರ್‌ಗಳಲ್ಲಿ ಮುಂದುವರಿಯುತ್ತಿದೆ. ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್ ಗೆ 29.42 ಡಾಲರ್ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ (10 ಗ್ರಾಮ್ಗೆ) ಚಿನ್ನದ ಬೆಲೆ
| ಬೆಂಗಳೂರು | 71,350 ರೂ |
| ಚೆನ್ನೈ | 71,350 ರೂ |
| ಮುಂಬೈ | 71,350 ರೂ |
| ದೆಹಲಿ | 71,500 ರೂ |
| ಕೋಲ್ಕತಾ | 71,350 ರೂ |
ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಆಭರಣ ಪ್ರಿಯರಿಗೆ ಈ ದಿನ ಚಿನ್ನ ಖರೀದಿಗೆ ಉತ್ತಮ ಅವಕಾಶ ಎಂದೇ ಹೇಳಬಹುದು.


Click it and Unblock the Notifications