ಭಾರತದಲ್ಲಿ ಚಿನ್ನದ ದರ, ಡಿಸೆಂಬರ್‌ 28: ಮತ್ತೆ ಚಿನ್ನದ ಬೆಲೆ ಇಳಿಕೆ; ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ

Gold Price Today: ಡಿಸೆಂಬರ್‌ 28 ರಂದು, ಭಾರತದಲ್ಲಿ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಚಿನ್ನದ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳಿಂದ ಏರಿಕೆ ಕಾಣುತ್ತಲೇ ಇದ್ದ ಚಿನ್ನದ ಬೆಲೆ ಇಂದು ಕಡಿಮೆಯಾಗಿದ್ದು, ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ..

ಹೌದು, ಬೆಲೆ ಏರಿಕೆಯಿಂದಾಗಿ ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಲು ಬೆಲೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಂದು ಬೆಲೆ ಇಳಿಕೆಯಾಗಿರುವುದಕ್ಕೆ ಅವರು ಖುಷಿ ದುಪ್ಪಾಟಾಗಿದೆ. ಸದ್ಯ ಭಾರತದಲ್ಲಿ ಶನಿವಾರ ( ಡಿ.28) 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 150 ರೂಪಾಯಿ ಇಳಿಕೆಯಾಗಿದೆ.

ಮತ್ತೆ ಚಿನ್ನದ ಬೆಲೆ ಇಳಿಕೆ; ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ

ಭಾರತದಲ್ಲಿ ಇಂದಿನ ಚಿನ್ನದ ದರಗಳು

ಭಾರತದಲ್ಲಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,135 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,784 ರೂಪಯಿಗಳ ಮಾರಾಟ ನಡೆಯುತ್ತಿದೆ. ಇನ್ನೂ ಪ್ರತಿ 22 ಕ್ಯಾರೆಟ್‌ನ 10 ಗ್ರಾಂಗೆ 150 ರೂಪಾಯಿ ಇಳಿಕೆಯಾಗಿದ್ದು ಇಂದು 71,350 ರೂಪಾಯಿ ಇದೆ. ನಿನ್ನೆ ಶುಕ್ರವಾರ ಕೂಡ 250 ರೂಪಾಯಿ ಏರಿಕೆಯಾಗಿತ್ತು.

24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆಯಲ್ಲೂ ಸತತವಾಗಿ ಏರಿಕೆ ಕಂಡಿದೆ. ಇಂದು ಶುಕ್ರವಾರ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆಯಾಗಿದ್ದು 77,840 ರೂ ವಹಿವಾಟು ನಡೆಸುತ್ತಿದೆ.

100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ ನಿನ್ನೆ 7,15,000 ರೂಪಾಯಿ ಇತ್ತು. ಅದೇ ಚಿನ್ನ ಇಂದು 7,13,500 ಆಗಿದೆ. 1,500 ರೂಗಳಷ್ಟು ಬೆಲೆ ಇಳಿಕೆಯನ್ನು ಕಂಡಿದೆ. 100 ಗ್ರಾಂ ಚಿನ್ನದ 24 ಕೆ ಬೆಲೆ ಶುಕ್ರವಾರ 7,80,000 ಇತ್ತು. ಇಂದು7,78,400 ರೂ.ಗಳ ವಹಿವಾಟು ನಡೆಸುತ್ತಿದೆ ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನ 1,600 ಇಳಿಕೆ ಕಂಡಿದೆ.

ರಾಯಿಟರ್ಸ್ ಪ್ರಕಾರ, 0221 GMT ನಂತೆ ಸ್ಪಾಟ್ ಚಿನ್ನವು ಶೇ. 0.2 ರಷ್ಟು ಕುಸಿದು $ 2,630.28 ಕ್ಕೆ ತಲುಪಿದೆ. $2,649.10 ನಲ್ಲಿ, U.S. ಚಿನ್ನದ ಭವಿಷ್ಯವು ಶೇ.0.2 ಕುಸಿಯಿತು. ಪಲ್ಲಾಡಿಯಮ್ ಶೇ.0.3 ಕುಸಿದು $922.58, ಸ್ಪಾಟ್ ಬೆಳ್ಳಿ ಶೇ.0.2ಇಳಿದು $29.75 ಔನ್ಸ್ ಇದೆ.ಆದರೆ ಪ್ಲಾಟಿನಂ ಶೇ.0.1 ಏರಿಕೆಯಾಗಿ $936.85 ಇದೆ.

ಇಂದು ಭಾರತದಲ್ಲಿ ಬೆಳ್ಳಿ ದರಗಳು

ಭಾರತದಲ್ಲಿ, ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,600 ರೂ ಮತ್ತು ಪ್ರತಿ ಗ್ರಾಂಗೆ ರೂ 92.60 ಆಗಿದೆ. ನಿನ್ನೆ 10 ಗ್ರಾಂ ಬೆಳ್ಳಿ 925 ರೂಗಳ ವ್ಯಾಪಾರವಿತ್ತು ಆದರೆ ಇದು ಅದೇ ಬೆಳ್ಳಿ 926 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,260 ರುಪಾಯಿ ಇದೆ. ಒಂದು ಕಿಲೋಗ್ರಾಂ ಬೆಳ್ಳಿಯಲ್ಲೂ ಸಹ ಏರಿಕೆ ಕಂಡಿದು ಪ್ರಸ್ತುತ 92,600 ರೂಗಳ ವಹಿವಾಟುವಿದೆ.ಡಿಸೆಂಬರ್ ಆರಂಭದಿಂದಲೂ ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಆದರೆ, ನಿನ್ನೆ ಬೆಳ್ಳಿ ಬೆಲೆ ಏರಿಕೆಯಾಗಿತ್ತು.ಇಂದು ಸಹ ಅದೇ ಬೆಲೆ ಏರಿಕೆಯ ಬೆಳವಣಿಗೆ ಮುಂದುವರಿದಿದೆ.

MCX ಗೋಲ್ಡ್ ರೇಟ್ ಹೇಗಿದೆ?

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.01%ನಷ್ಟು ಇಳಿಕೆಯಾಗುವ ಮೂಲಕ 10 ಗ್ರಾಂಗೆ 77,322 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.01%ರಷ್ಟು ಕಡಿಮೆಯಾಗಿ, 88,882.ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.

ಇಂದು ಸ್ಪಾಟ್ ಗೋಲ್ಡ್ ರೇಟ್ ಹೇಗಿದೆ?

ಸ್ಪಾಟ್‌ ಚಿನ್ನದ ಭವಿಷ್ಯ ಸ್ಪಾಟ್‌ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್‌ ಡಾಲರ್‌ ಏರಿಕೆಯಿಂದಾಗಿ ಇದು ಸ್ಪಾಟ್‌ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ರಾಯಿಟರ್ಸ್‌ ವರದಿ ಪ್ರಕಾರ 1:41 pm ET (1841 GMT) ಯಲ್ಲಿ ಸ್ಪಾಟ್‌ ಚಿನ್ನ ಶೇ.0.6 ನಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 2,635.29 ಡಾಲರ್‌ ತಲುಪಲಿದೆ. ಯುಎಸ್‌ ಚಿನ್ನದ ಭವಿಷ್ಯವು ಶೇ.0.7ನಷ್ಟು ಇಳಿಕೆಯಾಗಿ 2,619.33 ನಲ್ಲಿ ಇದೆ. ಬುಲಿಯನ್‌ ಈ ವಾರ ಶೇ.0.1 ಕಡಿಮೆಯಾಗಿದೆ. ಇತ್ತ ಸ್ಪಾಟ್ ಬೆಳ್ಳಿ ಬದಲಾಗದೆ ಪ್ರತಿ ಔನ್ಸ್‌ಗೆ 29.6 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ಅಲ್ಲದೆ US ಚಿನ್ನದ ಮೌಲ್ಯವು ಶೇ.0.8 ಕಡಿಮೆ $2,631.90 ಕ್ಕೆ ಸ್ಥಿರವಾಯಿತು. ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ. ಸ್ಪಾಟ್ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ ಶೇ.1.3ಇಳಿಕೆಯಾಗಿ 29.41 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಂ ಶೇ.2.1ಇಳಿಕೆಯಾಗಿ 916.30 ಡಾಲರ್‌ ತುಪಿದೆ. ಪಲ್ಲಾಡಿಯಮ್ ಶೇ.1.2 ಗೆ ತಲುಪಿ 913.71 ಡಾಲರ್‌ ಆಗಿದೆ.

ಹೂಡಿಕೆದಾರರು 2025 ರ ಫೆಡರಲ್ ರಿಸರ್ವ್‌ನ ದರ ಕಾರ್ಯತಂತ್ರ ಹಾಗೆ ಸುಂಕದ ನೀತಿಗಳ ಬಗ್ಗೆ ನಿರೀಕ್ಷೆ ಮಾುತ್ತಿದ್ದಾರೆ. ಇನ್ನು ಇಂದು ಚಿನ್ನದ ಬೆಲೆಗಳು ರಜೆದಿನಗಳು ಇರುವುದರಿಂದ ಹೆಚ್ಚಿನ ವಹಿವಾಟನ್ನ ನಿರೀಕ್ಷಿಸಲಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಯುಎಸ್ ಡಾಲರ್‌ನಲ್ಲಿ ಸ್ವಲ್ಪ ಕುಸಿತ ಕಾಣುವಂತಾಗಿದೆ ಎಂದು ಏಂಜೆಲ್ ಒನ್ ಸಂಶೋಧನಾ ತಂಡ ತಿಳಿಸಿದೆ.

ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸ್ವಲ್ಪ ಮಟ್ಟಿಗೆ ವಹಿವಾಟುಗಳನ್ನ ನಡೆಸುತ್ತಿವೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ.

ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು

ನಗರಇಂದಿನ ಚಿನ್ನದ ಬೆಲೆ 22K​
​ಚೆನ್ನೈ7,135 ರೂ
​ಮುಂಬೈ7,135 ರೂ
ದೆಹಲಿ ​7,150 ರೂ
​ಕೋಲ್ಕತ್ತಾ7,135 ರೂ
​ಬೆಂಗಳೂರು7,135 ರೂ
​ಹೈದರಾಬಾದ್7,135ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+