For Quick Alerts
ALLOW NOTIFICATIONS  
For Daily Alerts

ಆಗಸ್ಟ್ ತಿಂಗಳ ಗರಿಷ್ಠದಿಂದ 6 ಸಾವಿರ ರುಪಾಯಿ ಇಳಿಕೆ ಕಂಡ ಚಿನ್ನ

|

ಭಾರತದಲ್ಲಿ ಚಿನ್ನ, ಬೆಳ್ಳಿಯ ಮೇಲೆ ಒತ್ತಡ ಮುಂದುವರಿದಿದೆ. ಎಂಸಿಎಕ್ಸ್ ನಲ್ಲಿ ಶುಕ್ರವಾರ ಚಿನ್ನದ ಫ್ಯೂಚರ್ಸ್ 0.27% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 49,771 ರುಪಾಯಿಯಂತೆ ವಹಿವಾಟು ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಸ್ಬಲ್ಪ ಮಟ್ಟಿಗೆ ಚೇತರಿಕೆ ಕಂಡಿತ್ತು. ಆ ಮೂಲಕ ಕಳೆದ ಐದು ದಿನದಲ್ಲಿ ನಾಲ್ಕನೇ ಬಾರಿಗೆ ಇಳಿಕೆ ದಾಖಲಿಸಿದಂತಾಯಿತು.

 

ಚಿನ್ನವು 10 ಗ್ರಾಮ್ ಗೆ 65ರಿಂದ 68 ಸಾವಿರ ರುಪಾಯಿ ತಲುಪಬಹುದುಚಿನ್ನವು 10 ಗ್ರಾಮ್ ಗೆ 65ರಿಂದ 68 ಸಾವಿರ ರುಪಾಯಿ ತಲುಪಬಹುದು

ಇನ್ನು ಎಂಸಿಎಕ್ಸ್ ನಲ್ಲಿ ಬೆಳ್ಳಿಯ ದರವು ಕೇಜಿಗೆ 0.5% ಇಳಿಕೆ ಕಂಡು, 59,329 ರುಪಾಯಿಗೆ ವಹಿವಾಟು ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆಯಲ್ಲಿ 0.64% ಅಥವಾ 300 ರುಪಾಯಿ ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಕೇಜಿಗೆ 1.8% ಅಥವಾ 1060 ರುಪಾಯಿ ಏರಿಕೆ ಕಂಡಿತ್ತು.

ಚಿನ್ನದ ಬೆಲೆ ವಾರದಲ್ಲಿ 2000 ರುಪಾಯಿ ಇಳಿಕೆ

ಚಿನ್ನದ ಬೆಲೆ ವಾರದಲ್ಲಿ 2000 ರುಪಾಯಿ ಇಳಿಕೆ

ಈ ವಾರ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ತೀವ್ರ ಇಳಿಕೆಯಾಗಿದೆ. ಈ ವಾರದಲ್ಲಿ ಚಿನ್ನದ ಬೆಲೆ 10 ಗ್ರಾಮ್ ಗೆ 2000 ರುಪಾಯಿ ಹಾಗೂ ಬೆಳ್ಳಿ ದರವು ಪ್ರತಿ ಕೇಜಿಗೆ 9000 ರುಪಾಯಿ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಮೇಲೆ ಒತ್ತಡ ಇದೆ. ಪ್ರಬಲ ಡಾಲರ್ ಮೌಲ್ಯದ ಕಾರಣಕ್ಕೆ ಹೀಗಾಗಿದೆ. ಆದರೆ ಯು.ಎಸ್.ನಿಂದ ಇನ್ನಷ್ಟು ಉತ್ತೇಜನಾ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿ ನಷ್ಟವು ಮಿತಿಯಾಗಿದೆ. ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.2% ಇಳಿಕೆ ಕಂಡು, $ 1864.47 ತಲುಪಿತು. ಈ ವಾರದಲ್ಲೇ ನಷ್ಟದ ಪ್ರಮಾಣ 4%ಗೂ ಹೆಚ್ಚಾಯಿತು. ಬೆಳ್ಳಿ ದರವು ಪ್ರತಿ ಔನ್ಸ್ ಗೆ $ 22.95 ತಲುಪಿತು. ಪ್ಲಾಟಿನಂ $ 846.72 ಹಾಗೂ ಪಲಾಡಿಯಂ 2,226.44 ಡಾಲರ್ ಮುಟ್ಟಿತು.

ಮತ್ತೆ ಲಾಕ್ ಡೌನ್ ನ ಚಿಂತೆ
 

ಮತ್ತೆ ಲಾಕ್ ಡೌನ್ ನ ಚಿಂತೆ

ಈ ವಾರ ಡಾಲರ್ ಸೂಚ್ಯಂಕ 1.5% ಏರಿಕೆ ಕಂಡಿದೆ. ಏಪ್ರಿಲ್ ಆರಂಭದಿಂದ ಇಲ್ಲಿಯ ತನಕದ ಅತ್ಯುತ್ತಮ ಪ್ರದರ್ಶನ ಇದು. ಸ್ಥಿರವಾದ ಡಾಲರ್ ಕಾರಣಕ್ಕೆ ಇತರ ಕರೆನ್ಸಿಗಳು ಇರಿಸಿಕೊಂಡವರಿಗೆ ಬುಲಿಯನ್ ಹೆಚ್ಚು ದುಬಾರಿಯಾಗಿದೆ. ಯುಎಸ್ ಡಾಲರ್ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದರಿಂದ ಚಿನ್ನದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇನ್ನು ಜಾಗತಿಕ ಮಟ್ಟದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗಿದೆ. ಅದರಲ್ಲೂ ಯುರೋಪ್ ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿ, ಮತ್ತೆ ಲಾಕ್ ಡೌನ್ ಮಾಡುವ ಚಿಂತೆ ಕಾಣಿಸಿಕೊಂಡಿದೆ. ಆದರೆ ಈ ತನಕ ಯಾವುದೇ ಗಂಭೀರ ಕ್ರಮಗಳನ್ನು ಈ ಬಗ್ಗೆ ತೆಗೆದುಕೊಂಡಿಲ್ಲ.

ಚಿನ್ನದ ಮೇಲೆ ಒತ್ತಡ ಮುಂದುವರಿಯಲಿದೆ

ಚಿನ್ನದ ಮೇಲೆ ಒತ್ತಡ ಮುಂದುವರಿಯಲಿದೆ

ಯುಎಸ್ ಉತ್ತೇಜನಾ ಕ್ರಮಗಳು ತಡವಾಗುತ್ತಿರುವುದರಿಂದ ಮಾರ್ಕೆಟ್ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಯುಎಸ್ ರಾಜಕೀಯ ಬೆಳವಣಿಗೆಗಳು, ಪ್ರಮುಖ ಆರ್ಥಿಕತೆಗಳಲ್ಲಿನ ಪ್ರಸ್ತುತ ಸನ್ನಿವೇಶ, ಯುಎಸ್- ಚೀನಾ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಬ್ರೆಕ್ಸಿಟ್ ಅನಿಶ್ಚಿತತೆ ಈ ಎಲ್ಲ ಅಂಶಗಳು ಸಹ ಸೇರಿಕೊಂಡಿವೆ ಎನ್ನುತ್ತದೆ ಕೊಟಕ್ ಸೆಕ್ಯೂರಿಟೀಸ್. ಇಟಿಎಫ್ ಹೂಡಿಕೆದಾರರು ದೂರ ಸರಿದಿದ್ದರಿಂದ ಚಿನ್ನ ಕೂಡ ದುರ್ಬಲವಾಗಿದೆ. ಚಿನ್ನದ ಮುಖ್ಯ ಹಂತವಾದ ಔನ್ಸ್ ಗೆ $ 1900ರ ಹಂತದಿಂದ ಕೆಳಗೆ ಬಂದಿದೆ. ಯುಎಸ್ ಡಾಲರ್ ನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಬರಲಿಲ್ಲ ಅಂದರೆ ಚಿನ್ನದ ದರದಲ್ಲಿ ಒತ್ತಡ ಮುಂದುವರಿಯಲಿದೆ ಎಂದು ಕೊಟಕ್ ತಿಳಿಸಿದೆ.

ಈ ವರ್ಷದಲ್ಲೇ ಚಿನ್ನದ ದರ ಇಪ್ಪತ್ತು ಪರ್ಸೆಂಟ್ ಹೆಚ್ಚಳ

ಈ ವರ್ಷದಲ್ಲೇ ಚಿನ್ನದ ದರ ಇಪ್ಪತ್ತು ಪರ್ಸೆಂಟ್ ಹೆಚ್ಚಳ

ವಾಲ್ ಸ್ಟ್ರೀಟ್ ನಲ್ಲಿ ಷೇರು ಮಾರ್ಕೆಟ್ ಏರಿಕೆ ಕಂಡಿದ್ದರಿಂದ ಏಷ್ಯನ್ ಮಾರ್ಕೆಟ್ ಗಳು ಸಹ ಸ್ವಲ್ಪ ಮಟ್ಟಿಗೆ ಏರಿಕೆ ದಾಖಲಿಸಿದವು. ಯುಎಸ್ ನಲ್ಲಿ ಲಕ್ಷಾಂತರ ಕೋಟಿ ಡಾಲರ್ ಆರ್ಥಿಕ ಉತ್ತೇಜನಾ ಬಿಲ್ ಸಿದ್ಧಪಡಿಸಿದ್ದು, ಅದರ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ತಲೆದೋರಿರುವ ಆರ್ಥಿಕ ಸವಾಲನ್ನು ಎದುರಿಸಲು ಬಡ್ಡಿ ದರವನ್ನು ಶೂನ್ಯದ ಹತ್ತಿರಕ್ಕೆ ತರಲಾಗಿದೆ. ಈ ಕಾರಣಕ್ಕೆ ಇದೇ ವರ್ಷದಲ್ಲಿ ಚಿನ್ನದ ದರವು 20% ಹೆಚ್ಚಳವಾಗಿದೆ. 380 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ಯುಎಸ್ ಕಾಂಗ್ರೆಸ್ ನಿಂದ ಕಳೆದ ಬಾರಿಯ ಕೊರೊನಾ ನೆರವಿನ ಪ್ಯಾಕೇಜ್ ನಲ್ಲಿ ಬಳಸಿಲ್ಲ. ಇದಕ್ಕೆ ಜನಪ್ರತಿನಿಧಿಗಳು ಒಪ್ಪಿಗೆ ನೀಡಿದಲ್ಲಿ ಕುಟುಂಬಗಳಿಗೆ ಹಾಗೂ ಉದ್ಯಮ- ವ್ಯಾಪಾರಕ್ಕೆ ನೆರವಾಗಬಹುದು ಎಂದು ಫೆಡರಲ್ ರಿಸರ್ವ್ ನ ಜೆರೊಮ್ ಪೊವೆಲ್ ಹಾಗೂ ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯುಚಿನ್ ತಿಳಿಸಿದ್ದಾರೆ.

English summary

Gold Rate Down 6000 Rupees From Last Month High

Gold price in India fall 6000 rupees from it's last month high. Here is the gold and silver price details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X