ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಗೊಂಡಿದ್ದು ಸತತ ನಾಲ್ಕನೇ ದಿನ ಕುಸಿತಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 47,456 ರೂಪಾಯಿಗೆ ಇಳಿದಿದೆ. ಬೆಳ್ಳಿ ಕೂಡ ಪ್ರತಿ ಕೆಜಿಗೆ 68,709 ರಂತೆ ತಲುಪಿದೆ.
ಕಳೆದ ವಾರ ಎರಡು ತಿಂಗಳ ಗರಿಷ್ಠ 48,400 ರೂಪಾಯಿಗೆ ತಲುಪಿದ ನಂತರ ಚಿನ್ನದ ಬೆಲೆ ಇಳಿಕೆಯತ್ತ ಮುಖಮಾಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನದ ದರಗಳು ಕಡಿಮೆ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿರುವುದು ಚಿನ್ನದ ಮೇಲೆ ಪರಿಣಾಮ ಬೀರುತ್ತಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಇಳಿಕೆಯಾಗಿ 1,777.93 ಡಾಲರ್‌ಗೆ ತಲುಪಿದೆ.

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.3ರಷ್ಟು ಕುಸಿದು 26.12 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.4ರಷ್ಟು ಇಳಿಕೆಯಾಗಿ 1,238.57 ಡಾಲರ್‌ಗೆ ತಲುಪಿದೆ.
ಸೋಮವಾರ ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ, 47,561 ರೂಪಾಯಿಗೆ ತಲುಪಿದ್ದು, ಬೆಳ್ಳಿ ಪ್ರತಿ ಕೆಜಿಗೆ 68,675 ರೂಪಾಯಿನಷ್ಟಿತ್ತು. ಕಳೆದ ಎರಡು ವಹಿವಾಟಿನಲ್ಲಿ ಗರಿಷ್ಠ 48,400 ರೂಪಾಯಿಗೆ ತಲುಪಿದ ನಂತರ ಚಿನ್ನ ತೀವ್ರವಾಗಿ ಕುಸಿದಿತ್ತು.


Click it and Unblock the Notifications