ಕಳೆದ ಮೂರು ದಿನದಲ್ಲಿ ಎರಡು ಬಾರಿ ಚಿನ್ನದ ದರ ಇಳಿಕೆ, ಬೆಳ್ಳಿ ದರವೂ ಇಳಿಜಾರು

ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಗುರುವಾರ ಭಾರತದ ಮಾರುಕಟ್ಟೆಯಲ್ಲಿ ಇಳಿಕೆ ಆಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಇರುವ ನವೆಂಬರ್ ಗೂ ಮುಂಚೆ ಕೊರೊನಾ ಉತ್ತೇಜನಾ ಪ್ಯಾಕೇಜ್ ಜಾರಿಗೆ ಬರುವ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಕಡಿಮೆ ಆಗಿದೆ.

ಎಂಸಿಎಕ್ಸ್ ನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ 0.4% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 50,360 ವಹಿವಾಟು ನಡೆಸಿತು. ಆ ಮೂಲಕ ಕಳೆದ ಮೂರು ದಿನಗಳಲ್ಲಿ ಎರಡು ದಿನ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಇನ್ನು ಡಿಸೆಂಬರ್ ಬೆಳ್ಳಿ ಫ್ಯೂಚರ್ಸ್ ದರದಲ್ಲಿ 0.9% ಇಳಿಕೆ ಕಂಡು, ಪ್ರತಿ ಕೇಜಿಗೆ 61,064 ರುಪಾಯಿಯಲ್ಲಿ ವಹಿವಾಟು ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರ 0.5% ಹಾಗೂ ಬೆಳ್ಳಿ ಬೆಲೆ 1.6% ಹೆಚ್ಚಳವಾಗಿತ್ತು.

ಜಾಗತಿಕ ಈಕ್ವಿಟಿ ಮೇಲೆ ಪ್ರಭಾವ

ಜಾಗತಿಕ ಈಕ್ವಿಟಿ ಮೇಲೆ ಪ್ರಭಾವ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಯುಎಸ್ ಡಾಲರ್ ಸ್ಥಿರವಾಗಿದ್ದರ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಇಳಿದಿದೆ. ಸ್ಪಾಟ್ ಚಿನ್ನದ ದರವು 0.4% ಇಳಿಕೆಯಾಗಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1893.17ರಂತೆ ವಹಿವಾಟು ನಡೆಸಿತು. ಡಾಲರ್ ಸೂಚ್ಯಂಕವು 93.435 ತಲುಪಿತು. ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣ, ಯುಎಸ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಪ್ರಗತಿಯಲ್ಲಿ ಹಿನ್ನಡೆ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆ. ಯುಎಸ್ ಖಜಾನೆ ಕಾರ್ಯದರ್ಶಿ ಮಾತನಾಡಿ, ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆಗೆ ಮುಂಚೆ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಕಷ್ಟ ಎಂದಿದ್ದಾರೆ. ಇದರಿಂದಾಗಿ ಜಾಗತಿಕ ಈಕ್ವಿಟಿ ಮೇಲೆ ಪ್ರಭಾವ ಆಗಲಿದೆ.

ಚಿನ್ನದ ದರದಲ್ಲಿ ವಿಪರೀತ ಏರಿಳಿತ

ಚಿನ್ನದ ದರದಲ್ಲಿ ವಿಪರೀತ ಏರಿಳಿತ

ಇತರ ಬೆಲೆ ಬಾಳುವ ಲೋಹಗಳಲ್ಲಿ ಬೆಳ್ಳಿ ದರ 1% ಇಳಿಕೆಯಾಗಿ, ಪ್ರತಿ ಔನ್ಸ್ ಗೆ $ 24.05 ಹಾಗೂ ಪ್ಲಾಟಿನಂ 0.3% ಕುಸಿದು, $ 854.59ರಲ್ಲಿ ವಹಿವಾಟು ನಡೆಸಿತು. ಇನ್ನು ಚಿನ್ನದ ದರದಲ್ಲಿ ವಿಪರೀತ ಏರಿಳಿತ ಇರುವುದರಿಂದ ಇಟಿಎಫ್ ಹೂಡಿಕೆದಾರರು ದೂರ ಉಳಿದಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. "ಯುಎಸ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಬಗ್ಗೆ ಸ್ಪಷ್ಟತೆ ಸಿಗುವ ತನಕ ಚಿನ್ನದ ವಹಿವಾಟಿನಲ್ಲಿ ಏರಿಳಿತ ಇರುತ್ತದೆ. ಬೆಲೆ ಇಳಿದಾಗ ಚಿನ್ನ ಖರೀದಿ ಮಾಡುವಂತೆ ನಮ್ಮ ಸಲಹೆ. ಯುಎಸ್ ಆರ್ಥಿಕತೆಯ ಆರೋಗ್ಯ ಹಾಗೂ ಇದರಿಂದ ಯುಎಸ್ ಡಾಲರ್ ಮೇಲಿನ ಪ್ರಭಾವದಿಂದಾಗಿ ಚಿನ್ನದ ಮೇಲಿನ ಹೂಡಿಕೆಗೆ ಆದ್ಯತೆ ಮುಂದುವರಿಯಲಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಗಮನ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಗಮನ

ಚಿನ್ನದ ಹೂಡಿಕೆದಾರರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಗಮನ ನೆಟ್ಟಿದ್ದಾರೆ. ಸದ್ಯಕ್ಕೆ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರು ಸ್ಪರ್ಧೆಯಲ್ಲಿ ಮುಂದಿದ್ದಾರೆ. ಇನ್ನು ಯುರೋಪ್, ಫ್ರಾನ್ಸ್ ನ ಪ್ರಮುಖ ನಗರಗಳಲ್ಲಿ ಹೊಸದಾಗಿ ನಿರ್ಬಂಧ ಹೇರಲಾಗುತ್ತಿದೆ. ಜರ್ಮನಿಯಿಂದ ಆರ್ಥಿಕ ಸಮಸ್ಯೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಲು ಯುರೋಪ್ ನ ನಾಯಕರು ಪ್ರಯತ್ನ ತೀವ್ರಗೊಳಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಘೋಷಿಸಿದ ಆರ್ಥಿಕ ಉತ್ತೇಜನ ಕ್ರಮಗಳಿಂದಾಗಿ ಈ ವರ್ಷ ಚಿನ್ನದ ಬೆಲೆಯಲ್ಲಿ ಶೇಕಡಾ 25ರಷ್ಟು ಏರಿಕೆಯಾಗಿದೆ.

ಕಳೆದ ವರ್ಷಕ್ಕಿಂತ ಕಡಿಮೆ ಚಿನ್ನ ಉತ್ಪಾದನೆ

ಕಳೆದ ವರ್ಷಕ್ಕಿಂತ ಕಡಿಮೆ ಚಿನ್ನ ಉತ್ಪಾದನೆ

ಈ ಮಧ್ಯೆ ಮೆಟಲ್ಸ್ ಫೋಕಸ್ ಎಂಬ ಕನ್ಸಲ್ಟೆನ್ಸಿ ಮಾಡಿರುವ ಅಂದಾಜಿನ ಪ್ರಕಾರ, ಈ ವರ್ಷ ವಿಶ್ವದ ನಿಕ್ಷೇಪಗಳಲ್ಲಿ 3,368 ಟನ್ ನಷ್ಟು ಚಿನ್ನದ ಉತ್ಪಾದನೆ ಮಾಡಬಹುದು. ಕಳೆದ ವರ್ಷ ಅಂದರೆ, 2019ಕ್ಕೆ ಹೋಲಿಸಿದಲ್ಲಿ ಈ ಪ್ರಮಾಣ 4.6% ಕಡಿಮೆ. ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಪ್ರಮಾಣ ಇದು ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ ಚಿನ್ನದ ಗಟ್ಟಿಯಲ್ಲಿನ ದರದಲ್ಲಿ ಏರಿಕೆ ಆಗಿರುವುದರಿಂದ 2021ನೇ ಇಸವಿಯಲ್ಲಿ ಉತ್ಪಾದನೆಯಲ್ಲಿ 8.8% ಏರಿಕೆಯಾಗಿ, 3,664 ಟನ್ ತಲುಪಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+