For Quick Alerts
ALLOW NOTIFICATIONS  
For Daily Alerts

Gold, Silver Rate: ಗರಿಷ್ಠ ಮಟ್ಟದಿಂದ 6 ಸಾವಿರ ರು. ಕೆಳಗೆ ಚಿನ್ನ, ತತ್ತರಿಸಿದ ಬೆಳ್ಳಿ

By ಅನಿಲ್ ಆಚಾರ್
|

ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರವು ಬುಧವಾರ (ಸೆಪ್ಟೆಂಬರ್ 30, 2020) ತೀವ್ರ ಕುಸಿತ ಕಂಡಿದೆ. ಅಂತರರಾಷ್ಟೀಯ ಮಾರುಕಟ್ಟೆ ಬೆಲೆಯ ಪರಿಣಾಮ ಚಿನ್ನದ ದರದ ಮೇಲೆ ಆಗಿದೆ. ಎಂಸಿಎಕ್ಸ್, ಡಿಸೆಂಬರ್ ಚಿನ್ನದ ಫ್ಯೂಚರ್ಸ್ 0.5% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,386 ರುಪಾಯಿಯಂತೆ ವಹಿವಾಟು ನಡೆಸಿತು. ಕಳೆದ ಮೂರು ದಿನದಲ್ಲಿ ಎರಡನೇ ಕುಸಿತ ಇದು.

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಇತ್ತ ಬೆಳ್ಳಿ ಬೆಲೆಯು ಎಂಸಿಎಕ್ಸ್ ನಲ್ಲಿ 2% ಇಳಿಕೆ ಕಂಡು, ಪ್ರತಿ ಕೇಜಿಗೆ 61,267 ರುಪಾಯಿಯಂತೆ ವಹಿವಾಟು ನಡೆಸಿತು. ಕಳೆದ ಸೆಷನ್ ನಲ್ಲಿ ಚಿನ್ನದ ಬೆಲೆಯಲ್ಲಿ 1% ಅಥವಾ 500 ರುಪಾಯಿ ಏರಿಕೆ ಕಂಡಿತ್ತು. ಇನ್ನು ಬೆಳ್ಳಿ ಬೆಲೆಯಲ್ಲಿ ಕೇಜಿಗೆ 1900 ರುಪಾಯಿ ಏರಿಕೆಯಾಗಿತ್ತು. ಆಗಸ್ಟ್ 7, 2020ರಂದು ದಾಖಲೆಯ 56,200 ರುಪಾಯಿ ತಲುಪಿದ ಮೇಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಬೆಲೆ ಚೇತರಿಕೆಗೂ ಮುನ್ನ ಈ ವಾರದ ಆರಂಭದಲ್ಲಿ 49,500 ರುಪಾಯಿಗೂ ಕೆಳಗೆ ಇಳಿದಿತ್ತು.

ಕೊರೊನಾ ಅನುದಾನದ ಒಪ್ಪಂದ ಚಿನ್ನದ ಬೆಂಬಲಕ್ಕೆ ಬಂದಿತ್ತು
 

ಕೊರೊನಾ ಅನುದಾನದ ಒಪ್ಪಂದ ಚಿನ್ನದ ಬೆಂಬಲಕ್ಕೆ ಬಂದಿತ್ತು

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಇಲ್ಲ. ಸ್ಪಾಟ್ ಚಿನ್ನದ ಬೆಲೆಯಲ್ಲಿ 1% ಇಳಿಕೆ ಆಗಿದ್ದು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,896.03 ಆಗಿದೆ. ಯುಎಸ್ ಕೊರೊನಾ ಅನುದಾನ ಒಪ್ಪಂದವು ಕೆಳ ಮಟ್ಟದಲ್ಲಿದ್ದ ಚಿನ್ನದ ಬೆಂಬಲಕ್ಕೆ ಬಂದಿತ್ತು. ಇನ್ನು ಬೆಳ್ಳಿ ಬೆಲೆಯಲ್ಲಿ 0.2% ಏರಿಕೆ ಕಂಡಿದ್ದು ಔನ್ಸ್ ಗೆ $ 24.22ಗೆ ಮುಟ್ಟಿದೆ. ಇನ್ನು ಪ್ಲಾಟಿನಂ 0.1% ಏರಿಕೆ ಕಂಡು, $ 883.25 ವ್ಯವಹಾರ ನಡೆಸಿದೆ. ಇನ್ನು ಪಲ್ಲಾಡಿಯಂ 0.5% ಹೆಚ್ಚಳ ಕಂಡು, $ 2,319.59ರಲ್ಲಿ ವಹಿವಾಟನ್ನು ನಡೆಸಿದೆ.

ಚಿನ್ನದ ದರ ಔನ್ಸ್ ಗೆ $ 1900 ತಡೆಯಾಗಿ ನಿಂತಿದೆ

ಚಿನ್ನದ ದರ ಔನ್ಸ್ ಗೆ $ 1900 ತಡೆಯಾಗಿ ನಿಂತಿದೆ

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಕೊರೊನಾ ಅನುದಾನದ ಒಪ್ಪಂದ ಅಂತಿಮವಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಖಜಾನೆ ಕಾರ್ಯದರ್ಶಿ ಜೊತೆಗೆ ಜನಪ್ರತಿನಿಧಿಗಳು ಎರಡನೇ ದಿನವೂ ಮಾತುಕತೆ ನಡೆಸಿದ್ದು, ಮಾತುಕತೆ ಮುಂದುವರಿಸಲು ಒಪ್ಪಿದ್ದಾರೆ. ಆದ್ದರಿಂದ ತಿಂಗಳಿಂದ ಬಾಕಿ ಇರುವ ಬಿಲ್ ಅಂತಿಮವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಯುಎಸ್ ಡಾಲರ್ ಬೆಲೆಯಲ್ಲಿ ಇಳಿಕೆ ಕಾಣಿಸಿಕೊಂಡಿದ್ದರಿಂದ ಚಿನ್ನದ ದರ ವಿಸ್ತರಣೆ ಆಯಿತು. ಆದರೆ ಔನ್ಸ್ ಗೆ $ 1900 ಎಂಬುದು ತಡೆಯಾಗಿ ಎದುರು ನಿಂತಿದೆ. ಆ ಹಂತ ದಾಟಿದ ಮೇಲೆ ಹೂಡಿಕೆದಾರರು ಇನ್ನಷ್ಟು ಚೈತನ್ಯದಿಂದ ಪ್ರವೇಶ ಮಾಡಬಹುದು ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ.

ಹೂಡಿಕೆದಾರರ ತೀರ್ಮಾನದ ಅವಲಂಬನೆ

ಹೂಡಿಕೆದಾರರ ತೀರ್ಮಾನದ ಅವಲಂಬನೆ

ನವೆಂಬರ್ 3ನೇ ತಾರೀಕಿನಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಇದೆ. ಅದರ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಬಿಡೆನ್ ಮಧ್ಯೆ ಮೂರು ಸುತ್ತಿನ ಸಂವಾದದಲ್ಲಿ ಮೊದಲನೆಯದು ಆಗಿದೆ. ಸಂವಾದದ ಕೊನೆಗೆ ಈಕ್ವಿಟಿ ಮಾರ್ಕೆಟ್ ಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿಕ್ರಿಯೆ ಕಂಡುಬಂತು. "ಸುರಕ್ಷಿತ ಹೂಡಿಕೆ ಬಯಸುವವರ ತೀರ್ಮಾನವು ಪ್ರಾಥಮಿಕವಾಗಿ ಚಿನ್ನದ ಬೆಲೆಯನ್ನು ನಿರ್ಧರಿಸಲಿದೆ. ಈ ಮಧ್ಯೆ ಬೆಳ್ಳಿ ಬೆಲೆಯಲ್ಲಿ ಚಿನ್ನದ ರೀತಿಯಲ್ಲಿ ಇಳಿಕೆ ಹಾದಿಯಲ್ಲಿ ಸಾಗಬಹುದು," ಎಂದು ಜೂಲಿಯಸ್ ಬೇರ್ ನ ಕಾರ್ಸ್ಟೆನ್ ಮೆಂಕೆ ಹೇಳಿದ್ದಾರೆ.

English summary

Gold Rate: Gold Price Trade Below 6000 From High On September 30, 2020

Gold rate trade below 6,000 from it's high on September 30, 2020. Here is the analysis of gold and silver.
Company Search
COVID-19