ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ ಇಮದು ದುಬಾರಿಯಾಗಿದೆ. ಮತ್ತೆ ಸಿಲಿಕಾನದ್ ಸಿಟಿ ಮಂದಿಗೆ ನಿರಾಸೆಯಾಗಿದೆ. ಮತ್ತೆ ಚಿನ್ನ ತನ್ನ ಓಟವನ್ನ ಮುಂದುವರೆಸಿದೆ. ಬಹುದಿಬಗಳಿಂದ ಆಬರಣ ಕರೀದಿಗಾಗಿ ಕಾಯುತ್ತಿದ್ದವರಿಗೆ ಮತ್ತೆ ನಿರಾಸೆಯಾಗಿದೆ. ಜಾಗತಿಕವಾಗಿ ಚಿನ್ನದ ಬೇಡಿಕೆ ಹೆಚ್ಛಾಗುತ್ತಿದ್ದು, ಈ ಹಿನ್ನೆಲೆ ಚಿನ್ನದ ದರ ಏರಿಕೆಯಾಗಿದೆ. ಯುಎಸ್ ಡಾಲರ್ ಏರಿಕೆ ಮತ್ತು ರೂಪಾಯಿ ಇಳಿಕೆಯಿಂದಾಗಿ ಚಿನ್ನದ ದರ ಏರಿಕೆಯಾಗ್ತಿದೆ.
ಜನವರಿ 29 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 850 ಏರಿಕೆಯಾಗಿ 75,950 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 920 ರೂ. ಏರಿಕೆಯಾಗಿ 82,850 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 690 ರೂ. ಏರಿಕೆಯಾಗಿ 62,140 ರೂ. ಆಗಿದೆ.

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 8,500 ರೂ. ಏರಿಕೆಯಾಗಿ 7,59,500 ರೂ. ಆಗಿದೆ. 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 9,200 ರೂ. ಏರಿಕೆಯಾಗಿ 8,28,500 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 6,900ರೂ. ಏರಿಕೆಯಾಗಿ 6,21,400 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 96.50ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 96,500 ರೂ. ಆಗಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ಥಿರವಾಗಿದೆ . 22k ಮತ್ತು 24k ಚಿನ್ನದ ಬೆಲೆಗಳು ಎಷ್ಟಿವೆ ಎಂದು ತಿಳಿಯಿರಿ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ಕ್ರಮ ಸಂಖ್ಯೆ | ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| 1 | ದೆಹಲಿ | ರೂ.83,000 | ರೂ.76,100 |
| 2 | ಮುಂಬೈ | ರೂ.82,850 | ರೂ.75,950 |
| 3 | ಚೆನ್ನೈ | ರೂ.82,850 | ರೂ.75,950 |
| 5 | ಕೋಲ್ಕತ್ತಾ | ರೂ.82,850 | ರೂ.75,950 |
ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಜನವರಿ 27: 22k/100g ಚಿನ್ನದ ಬೆಲೆ 1,500 ರೂ. ಇಳಿಕೆ!
MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್ ಔಟ್‌ಲುಕ್
MCX ಚಿನ್ನದ ಬೆಲೆಗಳು ಹಾಗು ಬೆಳ್ಳಿ ಬೆಲೆಗಳು ಇಂದು ಏರಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.14% ನಷ್ಟು ಇಳಿಕೆಯಾಗಿ 80,403 ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.07% ನಷ್ಟು ಏರಿಕೆಯಾಗಿ 91,115 ರೂಪಾಯಿ ವಹಿವಾಟು ನಡೆಸುತ್ತಿದೆ.
ಬೌಗೋಳಿಕ ಜಾಗತಿಕ ಉದ್ವಿಗ್ನತೆಗಳು, ಕರೆನ್ಸಿ ವಿನಿಮಯ ದರಗಳು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಈ ತಿಂಗಳಿನಲ್ಲಿ ಏರಿಳಿತಗಳನ್ನ ಗಮನಿಸುವಂತಾಯಿತು. ಹಳದಿ ಲೋಹಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗ್ತಿದೆ. ರಾಯಿಟರ್ಸ್ ವರದಿ ಪ್ರಕಾರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಗಳು ಮತ್ತು ಯುಎಸ್ ಡಾಲರ್ ಅನಿಶ್ಚಿತತೆಗಳ ನಡುವೆ ಚಿನ್ನದ ದರಗಳು ನಿನ್ನೆ ಸಾಕಷ್ಟು ಎರಿಕೆಯನ್ನ ಕಂಡಿವೆ.
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಇಳಿಕೆಯಾಗಿವೆ. ವರದಿ ಪ್ರಕಾರ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.01% ಇಳಿಕೆಯಾಗಿ 2,763.56 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.10% ಏರಿಕೆಯಾಗಿ 30.45 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 0.21% ಇಳಿಕೆಯಾಗಿ 944.25 ಡಾಲರ್ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.10% ಇಳಿಕೆಯಾಗಿ 952.50 ಡಾಲರ್ ತಲುಪಿದೆ.


Click it and Unblock the Notifications