ಮಹಿಳಾಮಣಿಯರಿಗೆ ಸಿಹಿ ಸುದ್ದಿ... ಸತತ ಮೂರು ದಿನಗಳಿಂದ ಬಂಗಾರದ ಭಾರೀ ಇಳಿಕೆಯನ್ನು ಕಂಡಿದೆ. ದಿನೇ ದಿನ ಆಕಾಶಕ್ಕೇರಿದ ಬಂಗಾರ ದೀಡಿರನೇ ಕುಸಿತ ಕಂಡಿದ್ದು,ಆಭರಣ ಪ್ರಿಯರಿಗೆ ಸಂತಸವನ್ನು ದುಪ್ಪಟ್ಟು ಮಾಡಿದೆ.ಚಿನ್ನ ಇಳಿಕೆ ಕಂಡಿದ್ದು,ಬೆಳ್ಳಿ ಸ್ಥಿರವಾಗಿ ಉಳಿದುಕೊಂಡಿದೆ.ಇಂದು ಚಿನ್ನ ಬೆಳ್ಳಿ ಕೊಳ್ಳಲು ಸಕಾಲವೆಂದೇ ಹೇಳಬಹುದು.ಯಾಕೆಂದರೆ ವಾರದ ಎರಡನೇ ದಿನವೇ ಚಿನ್ನ ತನ್ನ ಓಟವನ್ನು ನಿಲ್ಲಿಸಿದೆ.ಹಾಗಿದ್ರೆ ಏಪ್ರಿಲ್ 8ರಂದು ಮಂಗಳವಾರ ಬೆಂಗಳೂರಿನಲ್ಲಿ ಗೋಲ್ಡ್ ರೇಟ್ ಹೇಗಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಬೆಂಗಳೂರಿನಲ್ಲಿ ಚಿನ್ನ ಬೆಲೆಗಳು ಕುಸಿತ ಕಂಡಿವೆ. ಸದ್ಯ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ82,250ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 89,730ರೂ.ಗಳು ಇದ್ದು,ನಿನ್ನೆಗೆ ಹೋಲಿಕೆ ಮಾಡಿದ್ರೆ 650ರೂ. ಗಳ ಇಳಿಕೆ ಕಂಡಿದೆ.ಅದರಲ್ಲೂ 100 ಗ್ರಾಂ ಅಪರಂಜಿ ಚಿನ್ನ ಇಂದು ಆರು ಸಾವಿರದ ಐನೂರು ರೂ.ಗಳ ಭಾರೀ ಇಳಿಕೆಯನ್ನು ಕಂಡಿದೆ

ಏಪ್ರಿಲ್ 8ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 8,225 ರೂ.ಗಳ ಇದೆ. ಇನ್ನೂ 10 ಗ್ರಾಂ 22 ಕ್ಯಾರೆಟ್ ಚಿನ್ನ 82,250
ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 600 ರೂಪಾಯಿಗಳ ಇಳಿಕೆಯನ್ನು ಕಂಡಿದೆ.ಹಾಗೇ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6000 ರೂ.ಗಳ ಇಳಿಕೆಯಾಗಿ 8,22,500 ರೂ.ಗಳು ತಲುಪಿದೆ.ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
24 ಕ್ಯಾರೆಟ್ ಗೋಲ್ಡ್ ರೇಟ್
ಅಪರಂಜಿ 24 ಕ್ಯಾರೆಟ್ ಚಿನ್ನ ಒನ್ ಗ್ರಾಂಗೆ 8,973 ರೂ.ಗಳ ವ್ಯಾಪಾರವಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 89,730ರೂ. ಇದ್ದು, ನಿನ್ನೆಗೆ ಹೋಲಿಕೆ ಮಾಡಿದ್ದರೆ ರೂಪಾಯಿಗಳ 650ರೂ.ಗಳ ಇಳಿಕೆ ಕಂಡಿದೆ. ಇದಲ್ಲದೆ,100 ಗ್ರಾಂ 24 ಕ್ಯಾರೆಟ್ ಚಿನ್ನ 8,97,300 ರೂ.ಗಳ ವಾಹಿವಾಟುವಿದೆ.ಇದೇ ಚಿನ್ನವನ್ನು ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ ಆರು ಸಾವಿರದ ಐನೂರು ರೂ.ಗಳ ಇಳಿಕೆಯನ್ನು ಕಂಡಿದೆ.
18 ಕ್ಯಾರೆಟ್ ಗೋಲ್ಡ್ ರೇಟ್
18 ಕ್ಯಾರೆಟ್ ಚಿನ್ನ ಸಹ ಇಂದು ಇಳಿಕೆ ಕಂಡಿದೆ. 1ಗ್ರಾಂ 6,730 ರೂ.ಇದೆ. 18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 67,300 ರೂ.ಗಳು ಇದೆ ಹಾಗೂ 100 ಗ್ರಾಂ18 ಕ್ಯಾರೆಟ್ ಚಿನ್ನಕ್ಕೆ6,73,000 ರೂ ಇದೆ. ಇಂದು ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ.
ಏಪ್ರಿಲ್ 8ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಇಂದು ಇಳಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 94,000 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ ನಾಲ್ಕು ಸಾವಿರ ರೂಪಾಯಿಗಳ ಏರಿಕೆಯನ್ನು ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 94 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 940 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,400 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಸ್ಥಿರವಾಗಿ ಇದೆ.
ಬೆಂಗಳೂರಿನಲ್ಲಿ 10 ದಿನಗಳಲ್ಲಿ ಚಿನ್ನದ ಬೆಲೆಗಳು
24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು ಮಾರ್ಚ್ 27 ರಿಂದ ಏಪ್ರಿಲ್ 1 ರವರೆಗೆ ಏರಿಕೆ ಕಂಡಿದ್ದು, ಮಾರ್ಚ್ 30 ಮತ್ತು ಏಪ್ರಿಲ್ 2 ರಂದು ಮಾತ್ರ ಯಥಾಸ್ಥಿತಿಯಲ್ಲಿ ಇತ್ತು.ನಿನ್ನೆಯಿಂದ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.10 ದಿನಗಳ ಸರಾಸರಿ ಚಿನ್ನದ ದರವು 22 ಕ್ಯಾರೆಟ್ 8,285 ರೂ. ಮತ್ತು 1 ಗ್ರಾಂ 24 ಕ್ಯಾರೆಟ್ ಚಿನ್ನ 9,038 ರೂ. ದರವಿದೆ.
ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ
ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,730 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,225 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,973 ರೂ ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,730 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,225 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,973 ರೂ ಆಗಿದೆ.
ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,730 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,225 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,973 ರೂ ಆಗಿದೆ.
ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,730 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,225 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,973 ರೂ ಆಗಿದೆ.
ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,730 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,225 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,973 ರೂ ಆಗಿದೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?
ರಾಯಿಟರ್ಸ್ ವರದಿ ಪ್ರಕಾರ ಇಂದು (ಏಪ್ರಿಲ್ 8) ಬೆಳಿಗ್ಗೆ 3:31 ವೇಳೆಗೆ ಸ್ಪಾಟ್ ಚಿನ್ನದ ಬೆಲೆ $3,027.90 ಪ್ರತಿ ಔನ್ಸ್ ಆಗಿದ್ದು, ಅದು 0.3% ಇಳಿಕೆಯನ್ನು ದಾಖಲಿಸಿದೆ. ಮೊದಲುದಿನದ ವಹಿವಾಟಿನ ಆರಂಭದಲ್ಲಿ ಚಿನ್ನದ ಬೆಲೆ 1% ಕ್ಕಿಂತ ಹೆಚ್ಚು ಇಳಿದು ಮಾರ್ಚ್ 13 ನಂತರದ ಕನಿಷ್ಠ ಮಟ್ಟ ತಲುಪಿತ್ತು.
ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ.ಯಾಕೆಂದರೆ ಭಾರತೀಯ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮಚ್ಚುದಂತಹ ವಸ್ತುವಾಗಿದೆ. ಹಬ್ಬ ಹರಿದಿನ, ಜಾತ್ರೆ, ಮದುವೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಾಗಿ ಬಂಗಾರ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವರದಕ್ಷಣೆ ಕೊಡಲು ಮಧು ಕಡೆಯವರು ಹೆಚ್ಚಿನ ಆಭರಣಗಳನ್ನು ಖರೀದಿಮಾಡುತ್ತಾರೆ. ಇನ್ನೂ ಹಲವಾರು ಮಂದಿ ಚಿನ್ನವನ್ನು ಹೊಡಿಕೆ ಮಾಡುವುದಕ್ಕಾಗಿ ತಗೆದುಕೊಳ್ಳುತ್ತಾರೆ. ಬಂಗಾರ ಶತಮಾನಗಳಿಂದ ಭಾರತದಲ್ಲಿ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ.
ಲೋಹವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತವಾಗಿದೆ. ಸಾಂಪ್ರದಾಯಿಕ ಆಭರಣಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನದ ಬಳಕೆಯಿಂದ ಭಾರತೀಯ ಸಂಸ್ಕೃತಿಯ ಭಾಗವಾಗವೆಂದೇ ಹೇಳಬಹುದು. ಯಾವುದೇ ಒಳ್ಳೆಯ ಸಂದರ್ಭದಲ್ಲೂ ಸಹ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮನೆಯಲ್ಲಿ ಇದ್ದರೆ ಕಷ್ಟದ ಸಮಯಕ್ಕೆ ಸಹಾಯವಾಗುತ್ತದೆ ಎಂಬುದು ಅವರ ನಂಬಿಕೆ.
ಚಿನ್ನ ಬೆಲೆ ಇಳಿಕೆಗೆ ಕಾರಣ
ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ಅಭಿಪ್ರಾಯ, ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ತರಿಗೆ ಹೆಚ್ಚಳ, ಯುದ್ದದ ಪ್ರಭಾವ,ಡಾಲರ್ ಏರಿಕೆ, ಜಾಗತಿಕ ಪರಿಸ್ಥಿತಿಗಳು ಕಾರಣವಾಗಬಹುದು.
More From GoodReturns

Gold Rate: ಚಿನ್ನದ ಬೆಲೆ ಇಂದು ಇಳಿಕೆ- ಬೆಂಗಳೂರಿನಲ್ಲಿ 24K, 22K, 18K ಬಂಗಾರದ ಬೆಲೆ ತಿಳಿಯಿರಿ

Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Bengaluru Gold Rate: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ದಿಢೀರ್ 10,900 ರೂ. ಕುಸಿತ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?



Click it and Unblock the Notifications