ಬಂಗಾರ ಪ್ರಿಯರಿಗೆ ಖುಷಿ ಸುದ್ದಿ... ಭಾರೀ ಇಳಿಕೆಯಾಯ್ತು ಚಿನ್ನದ ದರ. ಹೌದು, ಸತತವಾಗಿ ಗಗನಕ್ಕೇರಿದ ಚಿನ್ನದ ಬೆಲೆ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ದರ ಇಳಿಕೆಯಿಂದ ಆಭರಣ ಪ್ರಿಯರಿಗೆ ಸಮಧಾನ ತಂದಿದೆ. ಇತ್ತ ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಕೂಡ ಇಳಿಕೆಯಾಗಿದೆ.ಬೆಳ್ಳಿ,ಚಿನ್ನ ಖರೀದಿ ಮಾಡುವವರಿಗೆ ಇಂದು ಸಕಾಲವೆಂದೇ ಹೇಳಬಹುದು.ಹೂಡಿಕೆ ಮಾಡುವವರಿಗೆ ನಿರಾಶೆಯಾಗಿದೆ. ಹಾಗಿದ್ರೆ
ಮೇ.12ರಂದು ಸೋಮವಾರ ಬೆಂಗಳೂರಿನಲ್ಲಿ ಗೋಲ್ಡ್ ರೇಟ್ ಹೇಗಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಬೆಂಗಳೂರಿನಲ್ಲಿ ಚಿನ್ನ,ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ. ಸದ್ಯ ಬೆಂಗಳೂರಿನಲ್ಲಿ10 ಗ್ರಾಂ 22 ಕ್ಯಾರೆಟ್ ಚಿನ್ನ88,800 ರೂ.ಗಳು ಇದೆ.ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 96,880 ರೂ.ಇದೆ.ಅದರಲ್ಲೂ100 ಗ್ರಾಂ ಅಪರಂಜಿ ಚಿನ್ನ ಇಂದು 18,000 ರೂ,ಗಳಷ್ಟು ಇಳಿಕೆ ಕಂಡಿದೆ.

ಮೇ.12 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 8,880 ರೂ.ಇದೆ. ಇನ್ನೂ 10 ಗ್ರಾಂ 22 ಕ್ಯಾರೆಟ್ ಚಿನ್ನ88,800 ರೂ.ಗಳು ಇದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ 1,650 ರೂ.ಗಳ ಇಳಿಕೆ ಕಂಡಿದೆ.100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 16,500ರೂ.ಗಳಷ್ಟು ಇಳಿಕೆಯಾಗಿ 8,88,000 ರೂ.ಗಳು ತಲುಪಿದೆ.
24 ಕ್ಯಾರೆಟ್ ಗೋಲ್ಡ್ ರೇಟ್
ಅಪರಂಜಿ 24 ಕ್ಯಾರೆಟ್ ಚಿನ್ನ ಒನ್ ಗ್ರಾಂಗೆ 9,688 ರೂ.ಗಳ ವ್ಯಾಪಾರವಿದೆ. 24 ಕ್ಯಾರೆಟ್ ಚಿನ್ನ10 ಗ್ರಾಂಗೆ 96,880 ರೂ.ಇದೆ. ಇದೇ ಚಿನ್ನವನ್ನು ನಿನ್ನೆ ಹೋಲಿಕೆ ಮಾಡಿದ್ದರೆ 1,800 ರೂ.ಗಳಷ್ಟು ಇಳಿಕೆಯಾಗಿದೆ. ಇದಲ್ಲದೆ,100 ಗ್ರಾಂ 24 ಕ್ಯಾರೆಟ್ ಚಿನ್ನ9,68,800 ರೂ.ಗಳ ವಾಹಿವಾಟುವಿದೆ.ನಿನ್ನೆ ಹೋಲಿಕೆ ಮಾಡಿದ್ರೆ 18,000ರೂ.ಗಳಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
18 ಕ್ಯಾರೆಟ್ ಗೋಲ್ಡ್ ರೇಟ್
18 ಕ್ಯಾರೆಟ್ ಚಿನ್ನದ ಇಳಿಕೆ ಕಂಡಿದೆ.1ಗ್ರಾಂ7,266 ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 72,660 ರೂ.ಗಳು ಇದೆ ಹಾಗೂ 100 ಗ್ರಾಂ18 ಕ್ಯಾರೆಟ್ ಚಿನ್ನಕ್ಕೆ7,26,600 ರೂ. ತಲುಪಿದೆ. ಇಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಮೇ.12ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 97,900 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ1,100 ರೂ.ಗಳ ಇಳಿಕೆ ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 97.90 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 979 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,790 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ 10 ದಿನಗಳಲ್ಲಿ ಚಿನ್ನದ ಬೆಲೆಗಳು
24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು ಏಪಿಲ್ 21 ಹಾಗೂ 22 ಏರಿಕೆ. 23, 24,26, 28 ರಂದು ಭಾರೀ ಪ್ರಮಾಣದಲ್ಲಿ ಏರಿಕೆ. 25,27 ರಂದು ಮಾತ್ರ ಯಥಾಸ್ಥಿತಿಯಲ್ಲಿ ಇತ್ತು.ಮೇ 1ರಿಂದ ಚಿನ್ನದ ಬೆಲೆ ಇಳಿಕೆಯಾಗಿ ನಂತರ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ.ಇಂದು ಇಳಿಕೆ ಕಂಡಿದೆ. 10 ದಿನಗಳ ಸರಾಸರಿ ಚಿನ್ನದ ದರವು 22 ಕ್ಯಾರೆಟ್ 8,880 ರೂ. ಮತ್ತು 1 ಗ್ರಾಂ 24 ಕ್ಯಾರೆಟ್ ಚಿನ್ನ 9,824 ರೂ. ದರವಿದೆ.
ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ
ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,266 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,880 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,688 ರೂ ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,266 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,880 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,688 ರೂ ಆಗಿದೆ.
ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,266 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,880 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,688 ರೂ ಆಗಿದೆ.
ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,266 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,880 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,688 ರೂ ಆಗಿದೆ.
ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,266 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,880 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,688 ರೂ ಆಗಿದೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?
ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ 0233 GMT ರಂತೆ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ.1.4 ರಷ್ಟು ಕುಸಿದು 3,277.68 USD ಗಳಿಗೆ ತಲುಪಿದೆ. US ಚಿನ್ನದ ಭವಿಷ್ಯವು ಶೇ.1.9 ರಷ್ಟು ಕುಸಿದು 3,281.40 $ ಕ್ಕೆ ಚಿನ್ನದ ಬೆಲೆ ತಲುಪಿದೆ.
ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ.ಯಾಕೆಂದರೆ ಭಾರತೀಯ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮಚ್ಚುದಂತಹ ವಸ್ತುವಾಗಿದೆ. ಹಬ್ಬ ಹರಿದಿನ, ಜಾತ್ರೆ, ಮದುವೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಾಗಿ ಬಂಗಾರ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವರದಕ್ಷಣೆ ಕೊಡಲು ಮಧು ಕಡೆಯವರು ಹೆಚ್ಚಿನ ಆಭರಣಗಳನ್ನು ಖರೀದಿಮಾಡುತ್ತಾರೆ. ಇನ್ನೂ ಹಲವಾರು ಮಂದಿ ಚಿನ್ನವನ್ನು ಹೊಡಿಕೆ ಮಾಡುವುದಕ್ಕಾಗಿ ತಗೆದುಕೊಳ್ಳುತ್ತಾರೆ. ಬಂಗಾರ ಶತಮಾನಗಳಿಂದ ಭಾರತದಲ್ಲಿ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಲೋಹವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತವಾಗಿದೆ. ಸಾಂಪ್ರದಾಯಿಕ ಆಭರಣಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನದ ಬಳಕೆಯಿಂದ ಭಾರತೀಯ ಸಂಸ್ಕೃತಿಯ ಭಾಗವಾಗವೆಂದೇ ಹೇಳಬಹುದು.
ಯಾವುದೇ ಒಳ್ಳೆಯ ಸಂದರ್ಭದಲ್ಲೂ ಸಹ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮನೆಯಲ್ಲಿ ಇದ್ದರೆ ಕಷ್ಟದ ಸಮಯಕ್ಕೆ ಸಹಾಯವಾಗುತ್ತದೆ ಎಂಬುದು ಅವರ ನಂಬಿಕೆ.
ಚಿನ್ನ ಬೆಲೆ ಇಳಿಕೆಗೆ ಕಾರಣ
ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ,ಡೊನಾಲ್ಡ್ ಟ್ರಂಪ್ ಸುಂಕ ಯುದ್ದ, ಹೂಡಿಕೆದಾರರ ಅಭಿಪ್ರಾಯ, ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ತರಿಗೆ ಹೆಚ್ಚಳ, ಯುದ್ದದ ಪ್ರಭಾವ,ಡಾಲರ್ ಏರಿಕೆ, ಜಾಗತಿಕ ಪರಿಸ್ಥಿತಿಗಳು ಭಾರತ-ಪಾಕ್ ಯುದ್ಧದ ಪ್ರಭಾವ ಕಾರಣವಾಗಬಹುದು ಇವೆಲ್ಲಾ ಕಾರಣದಿಂದ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.
ಚಿನ್ನ ಬೆಳ್ಳಿ ಕೊಳ್ಳಲು ಇಂದು ಸೂಕ್ತ ಸಮಯವಾಗಿದೆ.ಮುಂದಿನ ದಿನಮಾನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಲಿದಿಯೋ ಎಂವುವುದನ್ನು ಕಾದುನೋಡಬೇಕಿದೆ.


Click it and Unblock the Notifications