Gold Rate: ಅಬ್ಬಾ..! ಚಿನ್ನದ ಬೆಲೆ(Gold Rate) ಇಂದು ಕೂಡ ಏರಿಕೆಯತ್ತ ಸಾಗಿದ್ದು, ಲಕ್ಷದ ಸಮೀಪಕ್ಕೆ ಬಂದು ತಲುಪಿದೆ. ಹೌದು, ಚಿನ್ನ ಮಾರುಕಟ್ಟೆಯಲ್ಲಿ ಬಂಗಾರ ಏರಿಕೆಯಾಗಿದೆ. ಇತ್ತ ಚಿನ್ನದ ಜೊತೆ ಬೆಳ್ಳಿ ಕೂಡ ಬರೋಬ್ಬರಿ 1 ಲಕ್ಷದ ಆಚೆಗೆ ಹೋಗಿದೆ. ಬಂಗಾರ ಕೊಳ್ಳಲು ಪ್ಲಾನ್ ಮಾಡಕೊಂಡಿದ್ದವರ ಜೇಬಿಗೆ ಕತ್ತರಿ ಬಿದ್ದಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಚಿನ್ನ ಏರಿಕೆಯತ್ತ(Gold pices Hike) ಮುಖ ಮಾಡಿದೆ. ಹಾಗಿದ್ರೆ, ಇಂದು (ಮೇ 22 ರಂದು ಗುರುವಾರ) ಬೆಂಗಳೂರಿನಲ್ಲಿ ಗೋಲ್ಡ್ ರೇಟ್ (Bengaluru Gold Rate Today)ಹೇಗಿದೆ? ಒಂದು ಕಿಲೋ ಬೆಳ್ಳಿಯ ಬೆಲೆ(Silver Rate) ಎಷ್ಟು? ಎಂಬ ಬಗ್ಗೆ ಎಲ್ಲಿ ಸಂಪೂರ್ಣ ಮಾಹಿತಿ.
ಹೌದು, ಬೆಂಗಳೂರಿನಲ್ಲಿ ಚಿನ್ನ,ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಸದ್ಯ ಬೆಂಗಳೂರಿನಲ್ಲಿ10 ಗ್ರಾಂ 22 ಕ್ಯಾರೆಟ್ ಚಿನ್ನ 89,750 ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 97,910 ರೂ.ಇದೆ. ಅದರಲ್ಲೂ 100 ಗ್ರಾಂ ಅಪರಂಜಿ ಚಿನ್ನ ಇಂದು 4,900 ರೂಪಾಯಿಗಳಷ್ಟು ಜಿಗಿತವನ್ನು ಕಂಡಿದೆ.

ಮೇ. 22ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 8,975 ರೂ. ಇದೆ. ಇನ್ನೂ 10 ಗ್ರಾಂ 22 ಕ್ಯಾರೆಟ್ ಚಿನ್ನ89,750 ರೂ.ಗಳು ಇದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ 450 ರೂ.ಗಳ ಏರಿಕೆ ಕಂಡಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,500 ರೂ.ಗಳಷ್ಟು ಏರಿಕೆಯಾಗಿ 8,97,500 ತಲುಪಿದ್ದು, ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
24 ಕ್ಯಾರೆಟ್ ಗೋಲ್ಡ್ ರೇಟ್
ಅಪರಂಜಿ 24 ಕ್ಯಾರೆಟ್ ಚಿನ್ನ ಒನ್ ಗ್ರಾಂಗೆ 9,791ರೂ.ಗಳ ವ್ಯಾಪಾರವಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 97,910 ರೂ.ಇದೆ. ಇದೇ ಚಿನ್ನವನ್ನು ನಿನ್ನೆ ಹೋಲಿಕೆ ಮಾಡಿದ್ದರೆ 4,90 ರೂ.ಗಳಷ್ಟು ಏರಿಕೆಯಾಗಿದೆ. ಇದಲ್ಲದೆ,100 ಗ್ರಾಂ 24 ಕ್ಯಾರೆಟ್ ಚಿನ್ನ9,79,100 ರೂ.ಗಳ ವಾಹಿವಾಟುವಿದೆ.ನಿನ್ನೆ ಹೋಲಿಕೆ ಮಾಡಿದ್ರೆ 4,900ರೂ.ಗಳಷ್ಟು ಏರಿಕೆ ಕಂಡಿದೆ.
18 ಕ್ಯಾರೆಟ್ ಗೋಲ್ಡ್ ರೇಟ್
18 ಕ್ಯಾರೆಟ್ ಚಿನ್ನದ ಏರಿಕೆ ಕಂಡಿದೆ.1ಗ್ರಾಂ 7,334 ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ73,440 ರೂ.ಗಳು ಇದೆ ಹಾಗೂ 100 ಗ್ರಾಂ18 ಕ್ಯಾರೆಟ್ ಚಿನ್ನಕ್ಕೆ7,34,400 ರೂ. ತಲುಪಿದೆ. ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಮೇ 22ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,01,000 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ ಸಾವಿರ ರೂಪಾಯಿಗಳ ಏರಿಕೆ ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 101 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,010 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ10,100 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಲಕ್ಷದ ಗಡಿ ದಾಟಿದೆ.
ಬೆಂಗಳೂರಿನಲ್ಲಿ 10 ದಿನಗಳಲ್ಲಿ ಚಿನ್ನದ ಬೆಲೆಗಳು
24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು ಏಪಿಲ್ 21 ಹಾಗೂ 22 ಏರಿಕೆ. 23, 24,26, 28 ರಂದು ಭಾರೀ ಪ್ರಮಾಣದಲ್ಲಿ ಏರಿಕೆ. 25,27 ರಂದು ಮಾತ್ರ ಯಥಾಸ್ಥಿತಿಯಲ್ಲಿ ಇತ್ತು.ಮೇ 1ರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಚಿನ್ನ ನಿನ್ನೆ ಹಾಗೂ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.10 ದಿನಗಳ ಸರಾಸರಿ ಚಿನ್ನದ ದರವು 22 ಕ್ಯಾರೆಟ್ 8,975 ರೂ. ಮತ್ತು1 ಗ್ರಾಂ 24 ಕ್ಯಾರೆಟ್ ಚಿನ್ನ 9,791 ರೂ. ದರವಿದೆ.
ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ
ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,334 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,975ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,791 ರೂ.ಗಳು ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,334 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,975ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,791 ರೂ.ಗಳು ಆಗಿದೆ.
ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,334 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,975ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,791 ರೂ.ಗಳು ಆಗಿದೆ.
ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,334 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,975ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,791 ರೂ.ಗಳು ಆಗಿದೆ.
ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,334 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,975ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,791 ರೂ.ಗಳು ಆಗಿದೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?
ರಾಯಿಟರ್ಸ್ ಪ್ರಕಾರ, ಯುಎಸ್ ಚಿನ್ನದ ಫ್ಯೂಚರ್ಸ್ 0408 GMT ಯಲ್ಲಿ ಶೇ.0.7 ಏರಿಕೆಯಾಗಿ $3,307.30 ಕ್ಕೆ ತಲುಪಿದೆ, ಆದರೆ ಸ್ಪಾಟ್ ಚಿನ್ನವು ಶೇ. 0.5 ಏರಿಕೆಯಾಗಿ $3,305.39 ಔನ್ಸ್‌ಗೆ ತಲುಪಿದೆ.
ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ.ಯಾಕೆಂದರೆ ಭಾರತೀಯ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮಚ್ಚುದಂತಹ ವಸ್ತುವಾಗಿದೆ. ಹಬ್ಬ ಹರಿದಿನ, ಜಾತ್ರೆ, ಮದುವೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಾಗಿ ಬಂಗಾರ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವರದಕ್ಷಣೆ ಕೊಡಲು ಮಧು ಕಡೆಯವರು ಹೆಚ್ಚಿನ ಆಭರಣಗಳನ್ನು ಖರೀದಿಮಾಡುತ್ತಾರೆ. ಇನ್ನೂ ಹಲವಾರು ಮಂದಿ ಚಿನ್ನವನ್ನು ಹೊಡಿಕೆ ಮಾಡುವುದಕ್ಕಾಗಿ ತಗೆದುಕೊಳ್ಳುತ್ತಾರೆ. ಬಂಗಾರ ಶತಮಾನಗಳಿಂದ ಭಾರತದಲ್ಲಿ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಲೋಹವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತವಾಗಿದೆ. ಸಾಂಪ್ರದಾಯಿಕ ಆಭರಣಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನದ ಬಳಕೆಯಿಂದ ಭಾರತೀಯ ಸಂಸ್ಕೃತಿಯ ಭಾಗವಾಗವೆಂದೇ ಹೇಳಬಹುದು. ಯಾವುದೇ ಒಳ್ಳೆಯ ಸಂದರ್ಭದಲ್ಲೂ ಸಹ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮನೆಯಲ್ಲಿ ಇದ್ದರೆ ಕಷ್ಟದ ಸಮಯಕ್ಕೆ ಸಹಾಯವಾಗುತ್ತದೆ ಎಂಬುದು ಅವರ ನಂಬಿಕೆ.
ಚಿನ್ನ ಬೆಲೆ ಏರಿಕೆಗೆ ಕಾರಣ
ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ,ಡೊನಾಲ್ಡ್ ಟ್ರಂಪ್ ಸುಂಕ ಯುದ್ದ, ಹೂಡಿಕೆದಾರರ ಅಭಿಪ್ರಾಯ, ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ತರಿಗೆ ಹೆಚ್ಚಳ, ಯುದ್ದದ ಪ್ರಭಾವ,ಡಾಲರ್ ಏರಿಕೆ, ಜಾಗತಿಕ ಪರಿಸ್ಥಿತಿಗಳು ಕಾರಣವಾಗಬಹುದು. ಹಬ್ಬದ ಸೀಸನ್‌ನಿಂದ ಏರಿಕೆ ಕಂಡಿದೆ. ಚಿನ್ನ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿ ತನ್ನ ಓಟವನ್ನು ಮುಂದುವರಿಸಿದೆ. ಮುಂದಿನ ದಿನದಲ್ಲಿ ಚಿನ್ನ ಏರಿಕೆಯಾಗುತ್ತಾ?ಇಳಿಕೆಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications