Bengaluru Gold Rate Today: ಗೋಲ್ಡ್ ರೇಟ್(gold rate) ಕೇಳಿದ್ರೆ ತಲೆ ಸುಸ್ತೋದು ಅಂತೂ ಗ್ಯಾರಂಟಿ..ಗ್ಯಾರಂಟಿ.. ಹೌದು, ಚಿನ್ನ,ಬೆಳ್ಳಿ (gold price and Silver price)ಇಂದು ಗಗನಕ್ಕೇರಿದ್ದು, ಆಭರಣ ಪ್ರಿಯರಿಗೆ ಬಿಗ್ ಶಾಕ್‌ನ್ನು ಚಿನ್ನದ ಮಾರುಕಟ್ಟೆ ನೀಡಿದೆ. ಬಸವ ಜಯಂತಿ ಹಾಗೂ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡುವವರಿಗೆ ಬೆಲೆ ಏರಿಕೆ ನಿರಾಸೆ ಮೂಡಿಸಿದೆ. ಚಿನ್ನ ತನ್ನ ದಾಖಲೆಯ ಓಟವನ್ನು ಮತ್ತೆ ಮುಂದುವರಿಸಿದೆ. ಬಂಗಾರ ಕೊಳ್ಳಲು ಪ್ಲಾನ್ ಮಾಡಕೊಂಡಿದ್ದವರಿಗೆ ಗಾಯದ ಮೇಲೆ ಬರೆ ಎಳೆದಿದೆ. ಇತ್ತ ಚಿನ್ನದ ದರ ಹೊಸ ದಾಖಲೆ ಬರೆದರೆ ಬೆಳ್ಳಿ ಕೂಡ ಲಕ್ಷದ ಗಡಿ ದಾಟಿದೆ.ಈ ಮೂಲಕ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ಧಾರೆ. ಹಾಗಿದ್ರೆ ಏಪ್ರಿಲ್ 22 ರಂದು ಮಂಗಳವಾರ ಬೆಂಗಳೂರಿನಲ್ಲಿ ಗೋಲ್ಡ್ ರೇಟ್ ಹೇಗಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಬೆಂಗಳೂರಿನಲ್ಲಿ ಚಿನ್ನ,ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಸದ್ಯ ಬೆಂಗಳೂರಿನಲ್ಲಿ10 ಗ್ರಾಂ 22 ಕ್ಯಾರೆಟ್ ಚಿನ್ನ 92,900 ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,01,350 ರೂ.ಇದೆ. ಅದರಲ್ಲೂ 100 ಗ್ರಾಂ ಅಪರಂಜಿ ಚಿನ್ನ ಇಂದು 30,000 ರೂ,ಗಳಷ್ಟು ಜಿಗಿತ ಕಂಡಿದೆ.

ಏಪ್ರಿಲ್ 22ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 9,290 ರೂ. ಇದೆ. ಇನ್ನೂ 10 ಗ್ರಾಂ 22 ಕ್ಯಾರೆಟ್ ಚಿನ್ನ 92,900 ರೂ.ಗಳು ಇದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ 2,750 ರೂ.ಗಳ ಏರಿಕೆ ಕಂಡಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 27,500ರೂ.ಗಳಷ್ಟು ಏರಿಕೆಯಾಗಿ 9,29,000 ತಲುಪಿದೆ
24 ಕ್ಯಾರೆಟ್ ಗೋಲ್ಡ್ ರೇಟ್
ಅಪರಂಜಿ 24 ಕ್ಯಾರೆಟ್ ಚಿನ್ನ ಒನ್ ಗ್ರಾಂಗೆ 10,135 ರೂ.ಗಳ ವ್ಯಾಪಾರವಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,01,350 ರೂ.ಇದೆ. ಇದೇ ಚಿನ್ನವನ್ನು ನಿನ್ನೆ ಹೋಲಿಕೆ ಮಾಡಿದ್ದರೆ 3,000 ರೂ.ಗಳಷ್ಟು ಏರಿಕೆಯಾಗಿದೆ. ಇದಲ್ಲದೆ,100 ಗ್ರಾಂ 24 ಕ್ಯಾರೆಟ್ ಚಿನ್ನ10,13,500 ರೂ.ಗಳ ವಾಹಿವಾಟುವಿದೆ.ನಿನ್ನೆ ಹೋಲಿಕೆ ಮಾಡಿದ್ರೆ 30,000 ರೂ.ಗಳಷ್ಟು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
18 ಕ್ಯಾರೆಟ್ ಗೋಲ್ಡ್ ರೇಟ್
18 ಕ್ಯಾರೆಟ್ ಚಿನ್ನದ ಏರಿಕೆ ಕಂಡಿದೆ.1ಗ್ರಾಂ7,601ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 76,010 ರೂ.ಗಳು ಇದೆ ಹಾಗೂ 100 ಗ್ರಾಂ18 ಕ್ಯಾರೆಟ್ ಚಿನ್ನಕ್ಕೆ7,60,100 ರೂ. ತಲುಪಿದೆ. ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಏಪ್ರಿಲ್ 22 ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,01,100 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ ನೂರು ರೂಪಾಯಿಗಳ ಏರಿಕೆ ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 101.10 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,011ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,110 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 10 ದಿನಗಳಲ್ಲಿ ಚಿನ್ನದ ಬೆಲೆಗಳು
24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು ಮಾರ್ಚ್ 27 ರಿಂದ ಏಪ್ರಿಲ್ 1 ರವರೆಗೆ ಏರಿಕೆ ಕಂಡಿದ್ದು, ಮಾರ್ಚ್ 30 ಮತ್ತು ಏಪ್ರಿಲ್ 2 ರಂದು ಮಾತ್ರ ಯಥಾಸ್ಥಿತಿಯಲ್ಲಿ ಇತ್ತು. ಮೂರು ದಿನಗಳಿಂದ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇಂದು ಚಿನ್ನದ ಬೆಲೆ ಇಂದು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ.10 ದಿನಗಳ ಸರಾಸರಿ ಚಿನ್ನದ ದರವು 22 ಕ್ಯಾರೆಟ್ 9,290 ರೂ. ಮತ್ತು 1 ಗ್ರಾಂ 24 ಕ್ಯಾರೆಟ್ ಚಿನ್ನ10,135 ರೂ. ದರವಿದೆ.
ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ
ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,601ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,290 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ10,135 ರೂ ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,601ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,290 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ10,135 ರೂ ಆಗಿದೆ.
ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,601ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,290 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ10,135 ರೂ ಆಗಿದೆ.
ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,601ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,290 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ10,135 ರೂ ಆಗಿದೆ.
ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,601ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,290 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ10,135 ರೂ ಆಗಿದೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?
ಟ್ರೇಡಿಂಗ್ ಎಕನಾಮಿಕ್ಸ್ ಪ್ರಕಾರ, ಇಂದು ( ಏಪ್ರಿಲ್ 22) ಸ್ಪಾಟ್ ಚಿನ್ನವು ಹೂಡಿಕೆದಾರರು ಹೆಚ್ಚುತ್ತಿರುವ ಅನಿಶ್ಚಿತತೆಯ ನಡುವೆ ಸುರಕ್ಷತೆಯನ್ನು ಬಯಸಿದ್ದರಿಂದ ಚಿನ್ನವು ಪ್ರತಿ ಔನ್ಸ್‌ಗೆ ಶೇ.2.5 ಕ್ಕಿಂತ ಹೆಚ್ಚು ಜಿಗಿದು $3,420 ಕ್ಕಿಂತ ಹೆಚ್ಚಾಗಿ ದಾಖಲೆಯ ಮಟ್ಟವನ್ನು ತಲುಪಿದೆ.
ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ.ಯಾಕೆಂದರೆ ಭಾರತೀಯ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮಚ್ಚುದಂತಹ ವಸ್ತುವಾಗಿದೆ. ಹಬ್ಬ ಹರಿದಿನ, ಜಾತ್ರೆ, ಮದುವೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಾಗಿ ಬಂಗಾರ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವರದಕ್ಷಣೆ ಕೊಡಲು ಮಧು ಕಡೆಯವರು ಹೆಚ್ಚಿನ ಆಭರಣಗಳನ್ನು ಖರೀದಿಮಾಡುತ್ತಾರೆ. ಇನ್ನೂ ಹಲವಾರು ಮಂದಿ ಚಿನ್ನವನ್ನು ಹೊಡಿಕೆ ಮಾಡುವುದಕ್ಕಾಗಿ ತಗೆದುಕೊಳ್ಳುತ್ತಾರೆ. ಬಂಗಾರ ಶತಮಾನಗಳಿಂದ ಭಾರತದಲ್ಲಿ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಲೋಹವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತವಾಗಿದೆ. ಸಾಂಪ್ರದಾಯಿಕ ಆಭರಣಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನದ ಬಳಕೆಯಿಂದ ಭಾರತೀಯ ಸಂಸ್ಕೃತಿಯ ಭಾಗವಾಗವೆಂದೇ ಹೇಳಬಹುದು. ಯಾವುದೇ ಒಳ್ಳೆಯ ಸಂದರ್ಭದಲ್ಲೂ ಸಹ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮನೆಯಲ್ಲಿ ಇದ್ದರೆ ಕಷ್ಟದ ಸಮಯಕ್ಕೆ ಸಹಾಯವಾಗುತ್ತದೆ ಎಂಬುದು ಅವರ ನಂಬಿಕೆ.
ಚಿನ್ನ ಬೆಲೆ ಏರಿಕೆಗೆ ಕಾರಣ
ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ,ಡೊನಾಲ್ಡ್ ಟ್ರಂಪ್ ಸುಂಕ ಯುದ್ದ, ಹೂಡಿಕೆದಾರರ ಅಭಿಪ್ರಾಯ, ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ತರಿಗೆ ಹೆಚ್ಚಳ, ಯುದ್ದದ ಪ್ರಭಾವ,ಡಾಲರ್ ಏರಿಕೆ, ಜಾಗತಿಕ ಪರಿಸ್ಥಿತಿಗಳು ಕಾರಣವಾಗಬಹುದು. ಹಬ್ಬದ ಸೀಸನ್‌ನಿಂದ ಏರಿಕೆ ಕಂಡಿದೆ. ಚಿನ್ನ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿ ತನ್ನ ಓಟವನ್ನು ಮುಂದುವರಿಸಿದೆ. ಮುಂದಿನ ದಿನದಲ್ಲಿ ಚಿನ್ನ ಏರಿಕೆಯಾಗುತ್ತಾ?ಇಳಿಕೆಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications