ಮಹಿಳೆಯರಿಗೆ ಕಹಿ ಸುದ್ದಿ... ಹೋಳಿ ಹಬ್ಬ ಮುನ್ನ ದಿನ ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಚಿನ್ನ ಜೊತೆಗೆ ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ. ಚಿನ್ನ ಖರೀದಿ ಮಾಡಬೇಕೆಂದುಕೊಂಡ ಬೆಂಗಳೂರಿಗರಿಗೆ(Gold Rate In Bengaluru) ಚಿನ್ನದ ಏರಿಕೆ ನಿರಾಸೆ ತಂದಿದೆ. ಚಿನ್ನ ತನ್ನ ಓಟವನ್ನು ಮುಂದುವರಿಸಿದ್ದು, ಚಿನ್ನ ಕೊಳ್ಳಲು ಹೀದೇಟು ಹಾಕುತ್ತಿದ್ದಾರೆ. ಹಾಗಿದ್ರೆ ಮಾರ್ಚ್ 13 ರಂದು ಗುರುವಾರ ಬೆಂಗಳೂರಿನಲ್ಲಿ ಗೋಲ್ಡ್ ರೇಟ್ ಹೇಗಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 81,200 ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 88,580 ರೂ.ಗಳು ಇದ್ದು,ನಿನ್ನೆಗೆ ಹೋಲಿಕೆ ಮಾಡಿದ್ರೆ 600 ಏರಿಕೆ ಕಂಡಿದೆ. ಅದರಲ್ಲೂ 100 ಗ್ರಾಂ ಅಪರಂಜಿ ಚಿನ್ನ 6,000 ರೂ ಗಳ ಏರಿಕೆ ಕಂಡಿದೆ.

ಮಾರ್ಚ್ 13 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 8,120 ರೂ ಏರಿಕೆ ಕಂಡಿದೆ. ಅಪರಂಜಿ 24 ಕ್ಯಾರೆಟ್ ಚಿನ್ನ 8,858 ರೂ.ಗಳ ವ್ಯಾಪಾರವಿದೆ. ಇನ್ನೂ 10 ಗ್ರಾಂ 22 ಕ್ಯಾರೆಟ್ ಚಿನ್ನ 81,200ರೂ.ಗಳು ಇದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 88,580 ರೂ. ಇದ್ದು, ನಿನ್ನೆಗೆ ಹೋಲಿಕೆ ಮಾಡಿದ್ದರೆ 600 ರೂಪಾಯಿಗಳ ಏರಿಕೆ ಕಂಡಿದೆ.
ಇದಲ್ಲದೆ, 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,500ರೂ. ಏರಿಕೆಯಾಗಿ 8,12,000ರೂ.ಗಳು ಇದೆ. 100 ಗ್ರಾಂ 24 ಕ್ಯಾರೆಟ್ ಚಿನ್ನ 8,85,800 ರೂ.ಗಳ ವಾಹಿವಾಟುವಿದೆ. ಇದೇ ಚಿನ್ನವನ್ನು ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 6,000 ರೂಗಳ ಏರಿಕೆ ಕಂಡಿದೆ. ಇನ್ನೂ 18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 66,440 ರೂ.ಗಳು ಇದೆ ಹಾಗೂ 100 ಗ್ರಾಂ18 ಕ್ಯಾರೆಟ್ ಚಿನ್ನಕ್ಕೆ 6,64,400 ರೂ ಇದೆ. ಇಂದು ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ
ಮಾರ್ಚ್ 13 ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಇಂದು ಏರಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,01,000 ರೂಪಾಯಿಗಳು ವಾಹಿವಾಟುವಿದೆ. ಸಾವಿರ ರೂಪಾಯಿಗಳ ಇಳಿಕೆ ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 101 ರೂ.ಗಳ ವ್ಯಾಪಾರದವಿದೆ.
10 ಗ್ರಾಂ ಬೆಳ್ಳಿಯ ಬೆಲೆ 1,010 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,100 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ
ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,644 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,120 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,858 ರೂ ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,644 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,120 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,858 ರೂ ಆಗಿದೆ.
ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,644 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,120 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,858 ರೂ ಆಗಿದೆ.
ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,644 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,120 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,858 ರೂ ಆಗಿದೆ.
ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 6,562 ರೂ, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,020 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 8,749 ರೂ ಆಗಿದೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?
ರಾಯಿಟರ್ಸ್ ವರದಿ ಪ್ರಕಾರ ಇಂದು (ಮಾರ್ಚ್ 13) 0300 GMT ವೇಳೆಗೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ ಶೇ.0.4 ಏರಿಕೆಯಾಗಿ $2,943.66 ಕ್ಕೆ ತಲುಪಿದೆ. ಆದರೆ ಯುಎಸ್ ಚಿನ್ನ ಪ್ರತಿ ಔನ್ಸ್‌ಗೆ ಶೇ.0.2 ಏರಿಕೆಯಾಗಿ $2,951.90 ಕ್ಕೆ ತಲುಪಿದೆ.ಸ್ಪಾಟ್ ಬೆಳ್ಳಿ ಕೂಡ ಪ್ರತಿ ಔನ್ಸ್‌ಗೆ ಶೇ. 0.1ಏರಿಕೆಯಾಗಿ $33.26 ಕ್ಕೆ ತಲುಪಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ (ಮಾರ್ಚ್ 12) ಕೆನಡಾದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ತೆರಿಗೆಯನ್ನು ಶೇ.50 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದರು. ಆದರೆ, ನಂತರ ತಮ್ಮ ವಾಣಿಜ್ಯ ಯುದ್ಧದ ಬೆದರಿಕೆಯನ್ನು ಹಿಂಪಡೆದು, ಅದರ ಪ್ರಮಾಣವನ್ನು ಕಡಿಮೆ ಮಾಡಿದರು.
ಅದೇ ಸಮಯದಲ್ಲಿ, ಒಂಟಾರಿಯೋ ಪ್ರೀಮಿಯರ್ ಡಗ್ ಫೋರ್ಡ್ ಅಮೇರಿಕಾದಿಂದ ವಿದ್ಯುತ್ ಆಮದು ಮೇಲೆ ಯೋಜಿಸಿದ್ದ 25% ಹೆಚ್ಚುವರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ಹೆಚ್ಚಿನ ಬೇಡಿಕೆಯಾದಾಗ ಬೆಲೆ ಏರುತ್ತದೆ ಮತ್ತು ಕಡಿಮೆಯಾಗಿದರೆ ಇಳಿಯಬಹುದು. ಹೀಗಾಗಿ, ಚಿನ್ನ ಖರೀದಿಸಲು ಅಥವಾ ಹೂಡಿಕೆ ಮಾಡಲು ನಿರ್ಧಾರ ತೆಗೆದುಕೊಳ್ಳುವ ಮುನ್ನ ದೈನಂದಿನ ಬೆಲೆಗಳ ಹೋಲಿಕೆ ಮಾಡುವುದು ಉತ್ತಮ.
ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ. ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ.


Click it and Unblock the Notifications