For Quick Alerts
ALLOW NOTIFICATIONS  
For Daily Alerts

6 ತಿಂಗಳ ಕನಿಷ್ಠ ಮಟ್ಟದಲ್ಲಿರುವ ಚಿನ್ನದ ಬೆಲೆ: ಬೆಳ್ಳಿ ಬೆಲೆಯು ಇಳಿಕೆ

|

ಭಾರತದ ಆಭರಣ ಪ್ರಿಯರಿಗೆ ಸಾಕಷ್ಟು ಖುಷಿಯಾಗುವ ಸುದ್ದಿ ಇದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಆರು ತಿಂಗಳ ಕನಿಷ್ಠ ಮಟ್ಟದಲ್ಲಿಯೇ ಉಳಿದಿದೆ. ಎಂಸಿಎಕ್ಸ್‌ನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್‌ ಶೇಕಡಾ 0.38ರಷ್ಟು ಹೆಚ್ಚಾದರೂ ಕೂಡ ಆರು ತಿಂಗಳ ಕನಿಷ್ಠ ಮಟ್ಟವಾದ 10 ಗ್ರಾಂಗೆ 45,942 ರೂಪಾಯಿನಷ್ಟಿದೆ.

ಮತ್ತೆ 105 ರೂಪಾಯಿ ಗಡಿದಾಟಿದ ಪೆಟ್ರೋಲ್: ಡೀಸೆಲ್ ರೇಟ್‌ ಕೂಡ ಹೆಚ್ಚಳಮತ್ತೆ 105 ರೂಪಾಯಿ ಗಡಿದಾಟಿದ ಪೆಟ್ರೋಲ್: ಡೀಸೆಲ್ ರೇಟ್‌ ಕೂಡ ಹೆಚ್ಚಳ

ಚಿನ್ನದ ಬೆಲೆ ಒಂದೆಡೆಯಾದ್ರೆ ಬೆಳ್ಳಿ ದರಗಳು ಶೇಕಡಾ 0.18ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 58,490 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.4ರಷ್ಟು ಇಳಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇಕಡಾ 3.5ರಷ್ಟು ಅಥವಾ 2,000 ರೂಪಾಯಿಗೆ ಕುಸಿದಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಹೆಚ್ಚಾಗಿದ್ರೂ ಸಹ, ಏಳು ವಾರಗಳ ಕನಿಷ್ಠ ಮಟ್ಟದಲ್ಲಿದೆ. ಬಲವಾದ ಯುಎಸ್ ಡಾಲರ್‌ನಿಂದ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,729.83 ಅಮೆರಿಕನ್ ಡಾಲರ್‌ಗೆ ತಲುಪಿದೆ. ಡಾಲರ್ ಸೂಚ್ಯಂಕ ಇಂದು ಸ್ವಲ್ಪಮಟ್ಟಿಗೆ ಕುಸಿದಿದೆ ಆದರೆ ಬುಧವಾರ ಒಂದು ವರ್ಷದ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಇತರ ಕರೆನ್ಸಿಗಳಲ್ಲಿ ಖರೀದಿದಾರರಿಗೆ ಚಿನ್ನದ ಬೆಲೆಯನ್ನು ಹೆಚ್ಚಿಸಿತು. ಡಾಲರ್ ಸೂಚ್ಯಂಕ 94.278 ಕ್ಕೆ ಸ್ವಲ್ಪ ಇಳಿಕೆಯಾಗಿದೆ.

6 ತಿಂಗಳ ಕನಿಷ್ಠ ಮಟ್ಟದಲ್ಲಿರುವ ಚಿನ್ನದ ಬೆಲೆ: ಬೆಳ್ಳಿ ಬೆಲೆಯು ಇಳಿಕೆ

''ಫೆಡ್ ತನ್ನ ಉತ್ತೇಜಕ ಕ್ರಮಗಳನ್ನು ಕಡಿತಗೊಳಿಸಬಹುದೆಂಬ ಭಯವು ಡಾಲರ್ ಅನ್ನು ಬಲವಾಗಿರಿಸಿತು, ಇತರ ಕರೆನ್ಸಿಗಳನ್ನು ಹೊಂದಿರುವ ಖರೀದಿದಾರರಿಗೆ ಚಿನ್ನದ ಆಕರ್ಷಣೆಯನ್ನು ದುರ್ಬಲಗೊಳಿಸುತ್ತದೆ'' ಎಂದು ಮೈಗೋಲ್ಡ್ ಕ್ರಾಫ್ಟ್ ನ ನಿರ್ದೇಶಕ ವಿದಿತ್ ಗರ್ಗ್ ಹೇಳಿದರು.

"ಅಪ್‌ಟ್ರೆಂಡ್ ಅನ್ನು ಪುನರಾರಂಭಿಸಲು ಚಿನ್ನವು 1756 ಡಾಲರ್ ಅನ್ನು ಮುರಿಯಬೇಕು, ಇಲ್ಲದಿದ್ದರೆ ಈ ಏರಿಕೆಯು ಸಾಕಷ್ಟು ವ್ಯತ್ಯಸ ಕಂಡುಬರುತ್ತದೆ. ಚಿನ್ನವು 1730 ಡಾಲರ್ ಮುರಿದರೆ ನಾವು ಹಳದಿ ಲೋಹದ ಬೆಲೆಯು ಡಾಲರ್ ಲೆಕ್ಕದಲ್ಲಿ 1717- 1722 ಕ್ಕೆ ಇಳಿಯುವುದನ್ನು ನೋಡಬಹುದು. ಒಂದು ವೇಳೆ ಮುರಿಯಲು ವಿಫಲವಾದರೆ ಚಿನ್ನವು ಹೊಸ ಮಾಸಿಕ ಕನಿಷ್ಠ ಮಟ್ಟವನ್ನು 45,500 ಕ್ಕೆ ತಲುಪುವಂತೆ ಮಾಡುತ್ತದೆ ಎಂದು ದಿತ್ ಗರ್ಗ್ ಹೇಳಿದ್ದಾರೆ.

ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,350 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 49,480 ರೂಪಾಯಿಗೆ ತಲುಪಿದೆ.

English summary

Gold Rate In India Holds 6 Month Low: Silver Rate Big Fall

Gold prices in the Indian market remained at a six-month low. The December gold futures at the MCX rose by 0.38 per cent to Rs 45,942 at the six-month low of 10 grams
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X