ಚಿನ್ನ ಕೊಳ್ಳುವವರಿಗೆ ಜಾಕ್ ಪಾಟ್; ಬಂಗಾರದ ಬೆಲೆ ಇಳಿಕೆ ಎಷ್ಟು?

ಚಿನ್ನ ಕೊಳ್ಳುವರಿಗೆ ಶುಭ ಸುದ್ದಿ...ಬಂಗಾರದ ಬೆಲೆ ಇಂದು ಇಳಿಕೆಯಾಗಿದೆ. ಹೌದು,ಬಂಗಾರ ಮಾರುಕಟ್ಟೆಯಲ್ಲಿ ಸತತವಾಗಿ ಏರಿಕೆ ಕಂಡಿದ ಚಿನ್ನ ನಿನ್ನೆಯಿಂದ ಇಳಿಕೆಯಾಗಿದೆ.ಬೆಳ್ಳಿಯ ಬೆಲೆಯಲ್ಲಿ ಇಂದು ಸ್ಥಿರವಾಗಿದೆ. ಬಹುದಿನಗಳಿಂದ ಚಿನ್ನದ ಬೆಲೆ ಏರಿಕೆಯಿಂದ ನಿರಸೆಗೊಂಡಿದ್ದ ಜನರಿಗೆ ಖುಷಿ ದುಪ್ಪಾಟ್ಟಗಿದೆ. ಇಂದು ಚಿನ್ನದ ಇಳಿಕೆಯಾಗಿರುವುದರಿಮದ ಚಿನ್ನದ ಖರೀದಿಗೆ ಇಂದೇ ಸೂಕ್ತ ದಿನವೆಂದೇ ಹೇಳಬಹುದು. ಯುಎಸ್‌ ಡಾಲರ್‌ ಬಲವರ್ಧನೆಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಇಂದು ಡಾಲರ್‌ ದರದಲ್ಲಿ ಏರಿಳಿತಗಳನ್ನ ಕಂಡ ನಂತರ ಇದು ಚಿನ್ನದ ದರದ ಮೇಲೂ ಕೂಡ ಪರಿಣಾಮ ಬೀರಿದೆ. ಹಾಗಿದ್ರೆ ಭಾರತದಲ್ಲಿ ಮಂಗಳವಾರದಂದು( ಜ.28) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು, ಚಿನ್ನದ ಮಾರುಕಟ್ಟೆ ಇಂದು ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 75,100 ರೂಪಾಯಿ ಇದೆ.ಅಪರಂಜಿ 24 ಕ್ಯಾರಟ್​ನ ಚಿನ್ನದ ಬೆಲೆ ರೂಪಾಯಿ 81,930 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಚಿನ್ನದಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದೇ ಹೇಳಬಹುದು.

ಚಿನ್ನದ ಬೆಲೆ ಇಳಿಕೆ ಎಷ್ಟಿದೆ ಇಂದಿನ ದರ?

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?

ಭಾರತದಲ್ಲಿ ಚಿನ್ನದ ದರ ಇಂದು ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,510 ರೂಪಯಿ ಆಗಿದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,193 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 75,100 ರೂ.ಗಳ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 81,930 ರೂ.ಗಳ ವ್ಯಾಪಾರವಿದೆ.

ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,51,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,19,300 ರೂ.ಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ3,200 ರೂ.ಗಳ ಏರಿಕೆ ಕಂಡಿದೆ. 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 61,450 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ.

ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?

ಬೆಳ್ಳಿಯ ಬೆಲೆಯಲ್ಲಿ ಇಂದು ಸ್ಥಿರವಾಗಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 96,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 96.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 965 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,650 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾಣೆ ಕಂಡಿಲ್ಲ.

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?

MCX ಚಿನ್ನದ ಬೆಲೆಗಳು ಮತ್ತು ಬೆಳ್ಳಿ ಬೆಲೆಗಳು ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.26% ನಷ್ಟು ಇಳಿಕೆಯಾಗಿ 79,820 ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 1.01% ನಷ್ಟು ಇಳಿಕೆಯಾಗಿ 90,678 ರೂಪಾಯಿ ವಹಿವಾಟು ನಡೆಸುತ್ತಿದೆ. ಬೌಗೋಳಿಕ ಜಾಗತಿಕ ಉದ್ವಿಗ್ನತೆಗಳು, ಕರೆನ್ಸಿ ವಿನಿಮಯ ದರಗಳು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಈ ತಿಂಗಳಿನಲ್ಲಿ ಏರಿಳಿತಗಳನ್ನ ಗಮನಿಸುವಂತಾಯಿತು. ಹಳದಿ ಲೋಹಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗ್ತಿದೆ.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ?

ಸ್ಪಾಟ್‌ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಇಳಿಕೆಯಾಗಿವೆ. ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.54% ಇಳಿಕೆಯಾಗಿ 2,756.45 ಡಾಲರ್‌ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 1.05% ಇಳಿಕೆಯಾಗಿ 30.29 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.11% ಇಳಿಕೆಯಾಗಿ 946.75 ಡಾಲರ್‌ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 1.22% ಇಳಿಕೆಯಾಗಿ 973.00 ಡಾಲರ್‌ ತಲುಪಿದೆ. ರಾಯಿಟರ್ಸ್‌ ವರದಿ ಪ್ರಕಾರ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ನೀತಿಗಳು ಮತ್ತು ಯುಎಸ್‌ ಡಾಲರ್‌ ಅನಿಶ್ಚಿತತೆಗಳ ನಡುವೆ ಚಿನ್ನದ ದರಗಳು ನಿನ್ನೆ ಸಾಕಷ್ಟು ಎರಿಕೆಯನ್ನು ಕಂಡಿವೆ.

ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ

ಕ್ರಮ
ಸಂಖ್ಯೆ
ನಗರಗಳು22 ಕ್ಯಾರೆಟ್24 ಕ್ಯಾರೆಟ್
1ಬೆಂಗಳೂರುರೂ.7,510ರೂ.8,193
2ಚೆನ್ನೈರೂ.7,510ರೂ.8,193
3ಮುಂಬೈರೂ.7,510ರೂ.8,193
4ದೆಹಲಿರೂ.7,525ರೂ.8,126
5ಕೋಲ್ಕತ್ತಾರೂ.7,510ರೂ.8,208
6ಪುಣೆರೂ.7,510ರೂ.8,193

ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಜನವರಿ 25: 22k ಮತ್ತು 24k ಚಿನ್ನದ ಬೆಲೆ ತಟಸ್ಥ!

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 9,650ರೂ

ಚೆನ್ನೈ: 10,400ರೂ

ಮುಂಬೈ: 9,650ರೂ

ದೆಹಲಿ: 9,650 ರೂ

ಕೋಲ್ಕತಾ: 9,650ರೂ

ಹೈದರಾಬಾದ್: 10,400 ರೂ

ಪುಣೆ : 9,650 ರೂ

ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+