ಚಿನ್ನದ ಬೆಲೆ ದಿನೇದಿನೆ ಗಗನಕ್ಕೇರುತ್ತಿದೆ. ಅದರೆ ಬೆಳ್ಳಿಯ ದರ ಮಾತ್ರ ಯಥಾಸ್ಥಿತಿಯಲ್ಲಿ ಇದೆ.ಬಹು ದಿನಗಳಿಂದ ಆಭರಣ ಖರೀದಿಗಾಗಿ ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಟ್ರಂಪ್ ಅವರ ಇತ್ತೀಚಿನ ಲೋಹದ ಉತ್ಪನ್ನಗಳ ಮೇಲಿನ ಸುಂಕಗಳನ್ನು ಹೆಚ್ಚಿಸಿದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಏರಿಕೆ ಕಂಡಿದೆ. ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಗಳ ನಂತರ ಸುರಕ್ಷಿತ ಸ್ವತ್ತುಗಳಿಗೆ ಬೇಡಿಕೆ ಹೆಚ್ಚಾದ ಕಾರಣ, ಬಲವಾದ ಡಾಲರ್ ಮತ್ತು ಯುಎಸ್ ಉದ್ಯೋಗ ದತ್ತಾಂಶದ ನಂತರ ಯುಎಸ್ ಖಜಾನೆ ಇಳುವರಿಯಲ್ಲಿನ ಏರಿಕೆಯಿಂದಾಗಿ ಚಿನ್ನದ ಬೆಲೆ ಮೌಲ್ಯದಲ್ಲಿ ಏರಲು ಸಾಧ್ಯವಾಗಿತು. ಹಾಗಿದ್ರೆ, ಭಾರತದಲ್ಲಿ ಮಂಗಳವಾರ ( ಫೆ.11) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು,ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 80,600 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 87,930 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಹತ್ತು ಗ್ರಾಂ ಚಿನ್ನ ಬೆಲೆ 870 ರೂ.ಗಳ ಏರಿಕೆ ಕಂಡಿದೆ.

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,060 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,793 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 80,600 ರೂ.ಗಳು ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 87,930 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 8,06,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,79,300 ರೂಪಾಯಿ ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 8,700 ರೂ.ಗಳ ಏರಿಕೆ ಕಂಡಿದೆ. 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 65,950 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಸ್ಥಿರವಾಗಿದೆ.ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 99,500 ರೂಪಾಯಿಗಳು ವಾಹಿವಾಟುವಿದ್ದು, ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಸಾವಿರ ರೂಪಾಯಿಗಳ ಏರಿಕೆ ಕಂಡಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 99.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 995 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,950ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
MCX ಗೋಲ್ಡ್ ಸತತ ಎರಡನೇ ಅವಧಿಗೆ ತನ್ನ ಸಕಾರಾತ್ಮಕವಾಗಿ ಏರಿಕೆ ಕಾಯ್ದುಕೊಂಡಿದೆ ಮತ್ತು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ಅನ್ನು ರೂಪಿಸಿದೆ. ಇತ್ತೀಚಿನ ಬೆಲೆ ಕ್ರಮವು ಖರೀದಿ ಆಸಕ್ತಿಯನ್ನು ಸ್ಪಷ್ಟವಾಗಿ ತೋರಿಸಿದೆ. ಏಕೆಂದರೆ ಸರಕು ನಿರಂತರವಾಗಿ ದೈನಂದಿನ ಚಾರ್ಟ್‌ನಲ್ಲಿ ಹೆಚ್ಚಿನ ಗರಿಷ್ಠ ಮತ್ತು ಹೆಚ್ಚಿನ ಕನಿಷ್ಠಗಳನ್ನು ರೂಪಿಸುತ್ತಿದೆ.
MCX ಗೋಲ್ಡ್ 85820 ಗಿಂತ ಹೆಚ್ಚಾದರೆ, ಅದು 86200/86500 ಮಟ್ಟಗಳತ್ತ ಮುನ್ನಡೆಯಬಹುದು. ಇದಕ್ಕೆ ವಿರುದ್ಧವಾಗಿ, 85300/85000 ಮಟ್ಟಗಳಲ್ಲಿ ಬೆಂಬಲ ಕಂಡುಬರುತ್ತದೆ. ಸೂಚ್ಯಂಕವು ನಿರ್ಣಾಯಕ ವಲಯದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ವ್ಯಾಪಾರಿಗಳಿಗೆ ಬಿಗಿಯಾದ ಸ್ಟಾಪ್ ನಷ್ಟಗಳನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈ. ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ಮಂಗಳವಾರ ಚಿನ್ನದ ಬೆಲೆಯ ಮಟ್ಟದ ಏರಿಕೆ ಕಂಡಿದೆ. ರಾಯಿಟರ್ಸ್ ವರದಿ ಪ್ರಕಾರ ಯುಎಸ್ ಚಿನ್ನದ ಫ್ಯೂಚರ್‌ಗಳು ಶೇ.1.1 ಏರಿಕೆಯಾಗಿ $2,966.00 ಕ್ಕೆ ತಲುಪಿದ್ದರೆ, ಸ್ಪಾಟ್ ಚಿನ್ನವು 0229 GMT ಯ ಹೊತ್ತಿಗೆ ಪ್ರತಿ ಔನ್ಸ್‌ಗೆ ಶೇ.1.1 ಏರಿಕೆಯಾಗಿ $2,939.80 ಕ್ಕೆ ತಲುಪಿದೆ. ನಂತರ ದಿನದ ಆರಂಭದಲ್ಲಿ ದಾಖಲೆಯ ಗರಿಷ್ಠ $2,942.70 ತಲುಪಿದೆ. ಪಲ್ಲಾಡಿಯಮ್ ಶೇ.0.4 ಏರಿಕೆಯಾಗಿ $986.97 ಕ್ಕೆ ತಲುಪಿದೆ. ಪ್ಲಾಟಿನಂ ಶೇ.0.4 ಇಳಿಕೆಯಾಗಿ $989.50ಕ್ಕೆ ತಲುಪಿದೆ ಆದರೆ ಸ್ಪಾಟ್ ಬೆಳ್ಳಿ ಶೇ.0.4 ಏರಿಕೆಯಾಗಿ ಔನ್ಸ್‌ಗೆ $32.16ಕ್ಕೆ ತಲುಪಿದೆ.
ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ನಗರ 22ಕ್ಯಾರೆಟ್ 24K ಕ್ಯಾರೆಟ್
ಬೆಂಗಳೂರು 8,060 8,793
ಚೆನ್ನೈ 8,060 8,793
ಮುಂಬೈ8,060 8,793
ದೆಹಲಿ8,075 8,808
ಕೋಲ್ಕತಾ 8,060 8,793
ಹೈದರಾಬಾದ್ 8,060 8,793
ಪುಣೆ 8,060 8,793
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 9,950 ರೂ
ಚೆನ್ನೈ: 10,700 ರೂ
ಮುಂಬೈ: 9,950 ರೂ
ದೆಹಲಿ: 9,950 ರೂ
ಕೋಲ್ಕತಾ: 9,950 ರೂ
ಹೈದರಾಬಾದ್: 10,700 ರೂ
ಪುಣೆ : 9,950 ರೂ
ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ.
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.


Click it and Unblock the Notifications