ಚಿನ್ನದ ಬೆಲೆ ಹಾವು ಏಣಿ ಆಟವನ್ನು ಆಡುತ್ತಿದೆ. ನಿನ್ನೆ ಇಳಿಕೆ ಕಂಡಿದ ಚಿನ್ನ ಇಂದು ದಿಡೀರನೇ ಏರಿಕೆಯಾಗಿದ್ದು, ಬಂಗಾರ ಪ್ರಿಯರಿಗೆ ನಿರಾಸೆಯಾಗಿದೆ. ಅದರೆ ಬೆಳ್ಳಿಯ ದರ ಮಾತ್ರ ಯಥಾಸ್ಥಿತಿಯಲ್ಲಿ ಇದೆ.ಹಾಗಿದ್ರೆ, ಭಾರತದಲ್ಲಿ ಗುರುವಾರ ( ಫೆ.13) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು,ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನ ಇಂದು ಏರಿಕೆ ಕಂಡಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 79,800 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 87,050 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಹತ್ತು ಗ್ರಾಂ ಚಿನ್ನ ಬೆಲೆ 380 ರೂ.ಗಳ ಏರಿಕೆ ಕಂಡಿದೆ.

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,980 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,705 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 79,800 ರೂ.ಗಳು ಇದೆ. 10 ಗ್ರಾಂನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 87,050 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,98,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,70,500 ರೂಪಾಯಿ ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 3,800 ರೂ.ಗಳ ಏರಿಕೆ ಕಂಡಿದೆ. 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 65,290 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆ ಏರಿಕೆ ಮಾಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಸ್ಥಿರವಾಗಿದೆ.ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 99,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 99.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 995 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,950ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
MCX ಗೋಲ್ಡ್ ಹೆಚ್ಚಿನ ಮಟ್ಟದಲ್ಲಿ ಲಾಭದ ಬುಕಿಂಗ್ ಅನ್ನು ಎದುರಿಸಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಬೇರಿಶ್ ಕ್ಯಾಂಡಲ್ ಅನ್ನು ರೂಪಿಸಿತು. ಇತ್ತೀಚಿನ ಬೆಲೆ ಕ್ರಮವು MCX ಗೋಲ್ಡ್ ಒಂದು ದಿನದಲ್ಲಿ ದೌರ್ಬಲ್ಯವನ್ನು ತೋರಿಸುವ ಮಾದರಿಯನ್ನು ಸೂಚಿಸುತ್ತದೆ ಆದರೆ ಮುಂದಿನ ಅವಧಿಗಳಲ್ಲಿ ಅದರ ಗರಿಷ್ಠ ಮಟ್ಟವನ್ನು ಮೀರುತ್ತದೆ, ಇದು ಕಡಿಮೆ ಹಂತಗಳಲ್ಲಿ ಬಲವಾದ ಖರೀದಿ ಆಸಕ್ತಿಯನ್ನು ಸೂಚಿಸುತ್ತದೆ. MCX ಗೋಲ್ಡ್ 85550 ಕ್ಕಿಂತ ಹೆಚ್ಚು ಉಳಿಸಿಕೊಂಡರೆ, ಅದು 86000/86300 ಮಟ್ಟಗಳ ಕಡೆಗೆ ಮುನ್ನಡೆಯಬಹುದು. ಇದಕ್ಕೆ ವಿರುದ್ಧವಾಗಿ, 85000/87800 ಮಟ್ಟಗಳಲ್ಲಿ ಬೆಂಬಲ ಕಂಡುಬರುತ್ತದೆ. ಸೂಚ್ಯಂಕವು ಹೆಚ್ಚಿನ ಚಂಚಲತೆಗೆ ಸಾಕ್ಷಿಯಾಗಬಹುದಾದ ನಿರ್ಣಾಯಕ ವಲಯದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ವ್ಯಾಪಾರಿಗಳಿಗೆ ಬಿಗಿಯಾದ ಸ್ಟಾಪ್ ನಷ್ಟಗಳನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ" ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈ. ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ,ಯುಎಸ್ ಚಿನ್ನದ ಫ್ಯೂಚರ್‌ಗಳು ಶೇ. 0.4 ಇಳಿಕೆಯಾಗಿ $2,922.40 ಕ್ಕೆ ತಲುಪಿದ್ದರೆ, ಸ್ಪಾಟ್ ಚಿನ್ನವು ಮಂಗಳವಾರ $2,942.70 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿದ ನಂತರ 0232 GMT ವೇಳೆಗೆ ಶೇ.0.1 ಇಳಿಕೆಯಾಗಿ $2,895.38 ಕ್ಕೆ ತಲುಪಿದೆ. ಪಲ್ಲಾಡಿಯಮ್ ಶೇ.0.3 ರಷ್ಟು ಬಲಗೊಂಡು $978.75 ಕ್ಕೆ ತಲುಪಿದೆ, ಪ್ಲಾಟಿನಂ $983.15 ಕ್ಕೆ ಸ್ಥಿರವಾಗಿದೆ, ಆದರೆ ಸ್ಪಾಟ್ ಬೆಳ್ಳಿ ಔನ್ಸ್‌ಗೆ $31.83 ಕ್ಕೆ ಸ್ಥಿರವಾಗಿದೆ.
ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ನಗರ 22ಕ್ಯಾರೆಟ್ 24K ಕ್ಯಾರೆಟ್
ಬೆಂಗಳೂರು 7,980 8,705
ಚೆನ್ನೈ 7,980 8,705
ಮುಂಬೈ 7,980 8,705
ದೆಹಲಿ 7,995 8,720
ಕೋಲ್ಕತಾ 7,980 8,705
ಹೈದರಾಬಾದ್ 7,980 8,705
ಪುಣೆ 7,980 8,705
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 9,950 ರೂ
ಚೆನ್ನೈ: 10,700 ರೂ
ಮುಂಬೈ: 9,950 ರೂ
ದೆಹಲಿ: 9,950 ರೂ
ಕೋಲ್ಕತಾ: 9,950 ರೂ
ಹೈದರಾಬಾದ್: 10,700 ರೂ
ಪುಣೆ : 9,950 ರೂ
ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ.
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.


Click it and Unblock the Notifications