Gold Price: ಮಹಿಳೆಯರಿಗೆ ನಿರಾಸೆ.. ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಮೂರನೇ ದಿನವೂ ಬೆಲೆ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಹೆಚ್ಚಳವಾಗಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಚಿನ್ನದ ಬೆಲೆ ಶುಕ್ರವಾರ (ಜ.3) ರಂದು ಸ್ವಲ್ಪ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಚಿನ್ನದ ಮಾರುಕಟ್ಟೆ ಬಂಗಾರದ ಪ್ರಿಯರಿಗೆ ಶಾಕ್ ಕೊಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ರೂ 72,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 79,200 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನದ ಬೆಲೆಯಲ್ಲಿ 870 ರೂಪಾಯಿಯ ಏರಿಕೆ ಕಂಡಿವೆ. ಇನ್ನೂ 100 ಗ್ರಾಂ ಅಪರಂಜಿ ಚಿನ್ನ ಬೆಲೆದ ಬೆಲೆ 8,700 ರೂ ಏರಿಕೆ ಕಂಡಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಇಂದು ಭಾರತದಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ.ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,260 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,833 ರೂ ಇದ್ದದ್ದು 7,920 ರೂ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ ಇಂದು 72,600 ರೂಪಾಯಿ ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 79,200 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,18,000 ಇದ್ದದ್ದು 7,26,000 ಆಗಿದೆ.ಇದೇ ಚಿನ್ನ ನಿನ್ನೆಗೆ ಹೋಲಿಕೆ ಮಾಡಿದ್ದರೆ 800 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಪ್ರಸ್ತುತ 7,26,000 ರೂಗಳ ವಾಹಿವಾಟು ಇದೆ. 100 ಗ್ರಾಂ ಚಿನ್ನದ 24 ಕೆ ಬೆಲೆ 7,92,000 ರೂ.ಗಳ ವಹಿವಾಟು ನಡೆಸುತ್ತಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 59,400ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,500 ರೂಪಾಯಿಗಳ ವಹಿವಾಟುವಿದ್ದು,ಒಂದು ಕಿಲೋಗ್ರಾಂ ಬೆಳ್ಳಿ 2,000 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಪ್ರಸತ್ತು ಪ್ರತಿ ಗ್ರಾಂ ಗೆ ರೂ 92.50 ರೂಗಳ ವ್ಯಾಪಾರವಿದೆ. 10 ಗ್ರಾಂ ಬೆಳ್ಳಿಯ ಬೆಲೆ 925 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,250ರೂ ಗಳು ಇದೆ.
ಚಿನ್ನದ ಬೆಲೆ ವ್ಯತ್ಯಾಸಕ್ಕೆ ಕಾರಣವೇನು?
ಚಿನ್ನದ ಬೆಲೆಗಳು ಜಾಗತಿಕ ಮಟ್ಟದಲ್ಲಿ ಇನ್ನೂ ಸಹ ರಾಜಕೀಯ ಅಶಾಂತಿ ವಾತಾವರಣ ಮುಂದುವರೆದಿದೆ. ಇದ್ರ ಜೊತೆಗೆ ಯುಎಸ್ ಫೆಡರಲ್ ರಿಸರ್ವ್ 25 ಬಿಪಿಎಸ್‌ನಷ್ಟು ಬಡ್ಡಿ ದರ ತಗ್ಗಿಸಿದ ಬಳಿಕ ಹೂಡಿಕೆದಾರರ ಗಮನ ಮತ್ತು ಹೂಡಿಕೆಯ ಆಯ್ಕೆಯು ಸಹ ಬದಲಾಗಿದೆ. ವಿಪರೀತ ಹಣದುಬ್ಬರ ಏರಿಕೆಗೊಳ್ಳುತ್ತಿರುವುದು ಸಹ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ರೂಪಾಯಿ ದುರ್ಬಲಗೊಂಡು ಡಾಲರ್ ಬಲಗೊಂಡಿರುವುದು ಹಳದಿ ಲೋಹದ ಬೆಲೆ ಮೇಲೆ ನಕಾರಾತ್ಕಕ ಪರಿಣಾಮ ಬೀರುತ್ತಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ನಲ್ಲಿ ಚಿನ್ನ ಪ್ರಮುಖ ಮಟ್ಟವಾದ 77700 ಅನ್ನು ಮುಚ್ಚಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ಅನ್ನು ರೂಪಿಸಿತು. ಚಿನ್ನದ ಬೆಲೆ ಬೆಂಬಲಿತವಾದ ಮೇಲ್ಮುಖವಾದ ಪ್ರವೃತ್ತಿಯಿಂದ ಮರುಕಳಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ. MCX ಗೋಲ್ಡ್ 77850/78200 ಮಟ್ಟಗಳಲ್ಲಿ ಪ್ರತಿರೋಧವನ್ನು ವೀಕ್ಷಿಸಬಹುದು 78200 ಕ್ಕಿಂತ ಹೆಚ್ಚಿನ ವಿರಾಮದೊಂದಿಗೆ ಹೆಚ್ಚಿನ ಲಾಭಗಳಿಗೆ ಬಾಗಿಲು ತೆರೆದಿದೆ. 78700/79000 ಮಟ್ಟಗಳಿಗೆ ವ್ಯತಿರಿಕ್ತವಾಗಿ, 77420/77000 ಮಟ್ಟಗಳಲ್ಲಿ ವ್ಯಾಪಾರದ ಬೆಂಬಲವನ್ನು ಗಮನಿಸಲಾಗಿದೆ ಏಕೆಂದರೆ ನಡೆಯುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಯಿಂದಾಗಿ ಚಂಚಲತೆಯು ಹೆಚ್ಚಾಗಬಹುದು ಬ್ರೋಕರ್ಸ್ ಪ್ರೈ. ಲಿಮಿಟೆಡ ಸಂಸ್ಥೆ ಹೇಳಿದೆ.
ಸ್ಪಾಟ್ ಗೋಲ್ಡ್ ರೇಟ್ ?
ರಾಯಿಟರ್ಸ್ ಪ್ರಕಾರ, 0257 GMT ಯಲ್ಲಿ ಸ್ಪಾಟ್ ಚಿನ್ನವು ಶೇ. 0.2 ರಷ್ಟು ಔನ್ಸ್‌ಗೆ $ 2,661.19 ಕ್ಕೆ ಏರಿತು, ಡಿಸೆಂಬರ್ 13 ರಿಂದ ಅದರ ಅತ್ಯುನ್ನತ ಮಟ್ಟವನ್ನು ತಲುಪಿದೆ. ಈ ವಾರ ಇಲ್ಲಿಯವರೆಗೆ ಬುಲಿಯನ್ ಸುಮಾರು ಶೇ.1.6 ಗಳಿಸಿದೆ. $2,675.40 ನಲ್ಲಿ, US ಚಿನ್ನದ ಭವಿಷ್ಯವು ಶೇ.0.2 ಹೆಚ್ಚಾಗಿದೆ. ಪಲ್ಲಾಡಿಯಮ್ ಶೇ.0.2 ಏರಿಕೆಯಾಗಿ $913.18, ಪ್ಲಾಟಿನಮ್ ಶೇ.0.4 ರಷ್ಟು ಏರಿಕೆಯಾಗಿ $926.95 ಇದೆ. ಸ್ಪಾಟ್ ಸಿಲ್ವರ್ ಪ್ರತಿ ಔನ್ಸ್‌ಗೆ $29.58 ನಲ್ಲಿ ಸ್ಥಿರವಾಗಿದೆ
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22 ಕ್ಯಾರೆಟ್ | 24k ಕ್ಯಾರೆಟ್ |
| ಬೆಂಗಳೂರು | 7,260 | 7,920 |
| ಚೆನ್ನೈ | 7,260 | 7,920 |
| ಮುಂಬೈ | 7,260 | 7,920 |
| ದೆಹಲಿ | 7,275 | 7,935 |
| ಕೋಲ್ಕತಾ | 7,260 | 7,920 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,250 ರೂ |
| ಚೆನ್ನೈ | 10,000 ರೂ |
| ಮುಂಬೈ | 9,250 ರೂ |
| ದೆಹಲಿ | 9,250 ರೂ |
| ಕೋಲ್ಕತಾ | 9,250 ರೂ |
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications