ನಾರಿಯರಿಗೆ ಬಿಗ್ ಶಾಕ್... ಚಿನ್ನದ ಬೆಲೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಚಿನ್ನದ ಬೆಲೆ ಹಾವು ಏಣಿ ಆಟವನ್ನು ಆಡುತ್ತಿದೆ.ಬೆಳ್ಳಿಯ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ.ಹಾಗಿದ್ರೆ, ಭಾರತದಲ್ಲಿ ಬುಧವಾರ (ಫೆ.19) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು, ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನ ಇಂದು ಏರಿಕೆ ಕಂಡಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 80,350 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 87,650 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಹತ್ತು ಗ್ರಾಂ ಚಿನ್ನ ಬೆಲೆ 700ರೂ.ಗಳ ಏರಿಕೆ ಕಂಡಿದೆ.

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,035 ರೂಪಯಿ ಆಗಿದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,765 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 80,350 ರೂ.ಗಳು ಇದೆ.10 ಗ್ರಾಂನ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 87,650 ರೂ.ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 8,03,500 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,76,500 ರೂಪಾಯಿ ಇದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 7,000 ರೂ.ಗಳ ಏರಿಕೆ ಕಂಡಿದೆ.18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 65,740 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆ ಏರಿಕೆಯಾಗಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಏರಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,00,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 100.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ1,005 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,050 ರೂ.ಗಳು ವ್ಯಾಪಾರವಿದೆ.
MCX ಗೋಲ್ಡ್ ರೇಟ್ ಹೇಗಿದೆ?
ಇಂದು MCX (ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್) ನಲ್ಲಿ ಚಿನ್ನದ ಬೆಲೆಗಳು ಸ್ವಲ್ಪ ಕುಸಿದವು. ಏಪ್ರಿಲ್ 4, 2025 ರಂದು ಪಕ್ವವಾಗಬೇಕಿದ್ದ ಚಿನ್ನದ ಫ್ಯೂಚರ್‌ಗಳು ಶೇ.0.10ರಷ್ಟು ಕುಸಿದು ರೂ.86,027 ಕ್ಕೆ ತಲುಪಿದೆ. ಮಾರ್ಚ್ 5, 2025 ರ ಮುಕ್ತಾಯ ದಿನಾಂಕವಿರುವ ಬೆಳ್ಳಿ ಫ್ಯೂಚರ್‌ಗಳು ಸಹ ಇಂದು ಬೆಳಿಗ್ಗೆ ಕುಸಿತ ಕಂಡವು, ಹಿಂದಿನ ಮುಕ್ತಾಯಕ್ಕಿಂತ ಶೇ.0.13 ಕಡಿಮೆಯಾಗಿ 96,725ರೂ ಕ್ಕೆ ವಹಿವಾಟು ನಡೆಸಿತು.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ 03:38 GMT ರಂತೆ ಸ್ಪಾಟ್ ಚಿನ್ನವು ಶೇ. 0.2 ರಷ್ಟು ಕುಸಿದು, ಪ್ರತಿ ಔನ್ಸ್‌ಗೆ USD 2,928.52 ಕ್ಕೆ ವಹಿವಾಟು ನಡೆಸಿತು. ಯುಎಸ್ ಚಿನ್ನದ ಭವಿಷ್ಯವು ಶೇ.0.1 ರಷ್ಟು ಕುಸಿದು $2,945.90 ಕ್ಕೆ ತಲುಪಿದೆ. ಸ್ಪಾಟ್ ಬೆಳ್ಳಿ ಕೂಡ ಕುಸಿತ ಕಂಡಿದ್ದು, ಪ್ರತಿ ಔನ್ಸ್‌ಗೆ ಶೇ.0.9 ರಷ್ಟು ಕುಸಿದು $32.57ಕ್ಕೆ ತಲುಪಿದೆ.
ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ನಗರ 22ಕ್ಯಾರೆಟ್ 24K ಕ್ಯಾರೆಟ್
ಬೆಂಗಳೂರು 8,035 8,765
ಚೆನ್ನೈ 8,035 8,765
ಮುಂಬೈ 8,035 8,765
ದೆಹಲಿ 8,045 8,780
ಕೋಲ್ಕತಾ 8,035 8,765
ಹೈದರಾಬಾದ್ 8,035 8,765
ಪುಣೆ 8,035 8,765
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 10,050 ರೂ
ಚೆನ್ನೈ: 10,800 ರೂ
ಮುಂಬೈ:10,050 ರೂ
ದೆಹಲಿ: 1,005ರೂ
ಕೋಲ್ಕತಾ: 10,050 ರೂ
ಹೈದರಾಬಾದ್: 10,800 ರೂ
ಪುಣೆ : 10,050 ರೂ
ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ.
ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.


Click it and Unblock the Notifications