ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರತೊಡಗಿದ್ದು, ಕಳೆದ ಐದು ದಿನಗಳಲ್ಲಿ 1500 ರೂಪಾಯಿ ಹೆಚ್ಚಳಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಶೇಕಡಾ 0.15ರಷ್ಟು ಏರಿಕೆಗೊಂಡು 47,800 ರೂಪಾಯಿಗೆ ತಲುಪಿದೆ. ಇನ್ನು ಬೆಳ್ಳಿ ಭವಿಷ್ಯವು ಪ್ರತಿ ಜೆಜಿಗೆ 69505 ರಷ್ಟಿದೆ.
ಕಳೆದ ದಿನದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.9ರಷ್ಟು ಮತ್ತು ಬೆಳ್ಳಿ 0.6ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಸತತ ವಹಿವಾಟುಗಳಲ್ಲಿ ಚಿನ್ನವು ಮೂರು ವಾರಗಳ ಗರಿಷ್ಠ ಮಟ್ಟದಲ್ಲಿದೆ. ಸ್ಪಾಟ್ ಚಿನ್ನವು ಸುಮಾರು 1,815 ಡಾಲರ್ ಅನ್ನು ಮುಟ್ಟಿದ ನಂತರ ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,800.42 ಡಾಲರ್‌ಗೆ ತಲುಪಿದೆ. ಅಮೆರಿಕಾ ಡಾಲರ್ ದೌರ್ಬಲ್ಯವು ಚಿನ್ನದ ಬೆಲೆ ಏರಿಕೆಗೆ ಸಹಾಯ ಮಾಡಿದೆ.

ಇನ್ನು ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,560 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,560 ರೂಪಾಯಿಗೆ ಮುಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 & 24ಕ್ಯಾರೆಟ್ ಚಿನ್ನ 44,650 ರೂ. ಮತ್ತು 48,710 ರೂಪಾಯಿಗೆ ಮುಟ್ಟಿದೆ.
ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ 26.14 ಡಾಲರ್‌ರಂತೆ ಸ್ಥಿರವಾಗಿದೆ. ಇತರ ಸರಕುಗಳ ಪೈಕಿ, ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 74.35 ಡಾಲರ್‌ಗೆ ಕುಸಿದಿದೆ.


Click it and Unblock the Notifications