Gold Price On Bengaluru: ಬಂಗಾರದ ಪ್ರಿಯರಿಗೆ ಶಾಕ್! ಚಿನ್ನದ ಬೆಲೆ ಇಂದು ದಿಡೀರನೇ ಏರಿಕೆ ಕಂಡಿದೆ.ಬೆಳ್ಳಿ ಬೆಲೆಯಲ್ಲಿ ಅಷ್ಟೇನೂ ಏರಿಕೆ ಕಂಡಿಲ್ಲ.ಸಂಕ್ರಾಂತಿ ವೇಳೆ ಬೆಂಗಳೂರಿಗರಿಗೆ ನಿರಾಸೆಯಾಗಿದೆ.ಸಾಕಷ್ಟು ಏರಿಳಿತಗಳ ನಂತರ ಚಿನ್ನ ತನ್ನ ಓಟವನ್ನ ಮತ್ತೆ ಮುಂದುವರೆಸಿದೆ. ಹಾಗಿದ್ರೆ ಬೆಂಗಳೂರಿನಲ್ಲಿ ಗುರುವಾರ( ಜ. 9) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ
ಹೌದು, ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಏರಿಕೆಯಾಗಿರುವುದರಿಂದ ಆಭರಣ ಪ್ರಿಯರಿಗೆ ನಿರಾಸೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ಕ್ಕೆ 72,600 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್ನ ಚಿನ್ನದ ಬೆಲೆ 78,200 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಬಂಗಾರದ ಬೆಲೆ ಇಂದು ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ದರ ಇಂದು ಏರಿಕೆಯಾಗಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,260 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,920 ರೂ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 72,600 ಇಂದು ರೂಪಾಯಿ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 79,200 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,26,000 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 7,92,000 ರೂಪಾಯಿಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ 3,800 ರೂಗಳ ಭಾರೀ ಏರಿಕೆ ಕಂಡಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 59,400 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.
ಬೆಳ್ಳಿಯ ಬೆಲೆ ಬೆಂಗಳೂರಿನಲ್ಲಿ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,500 ರೂಪಾಯಿಗಳ ವಹಿವಾಟುವಿದೆ.ಒಂದು ಗ್ರಾಂ ಗೆ ಬೆಳ್ಳಿಗೆ 92.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 925 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,250ರೂ ಗಳು ಇದೆ. ಇಂದು ಬೆಳ್ಳಿಯ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸವಿಲ್ಲ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX)ಚಿನ್ನದ ಭವಿಷ್ಯ ನೋಡೋದಾದ್ರೆ, ಬುಧವಾರದಂದು 78,000 ರೂ.ಗಳ ಗಡಿಯನ್ನು ಮುಟ್ಟಿದ್ದರೂ ಸಹ, MCX ನಲ್ಲಿ ಮುಕ್ತಾಯದ ಗಂಟೆಯಲ್ಲಿ ಬುಲಿಯನ್ ಕೂಡ ಕರಡಿಯಾಗಿದೆ. ಫೆಬ್ರವರಿ 2025 ರ ಮುಕ್ತಾಯದೊಂದಿಗೆ MCX ಚಿನ್ನದ ಬೆಲೆಗಳು, ಪ್ರತಿ 10 ಗ್ರಾಂಗೆ ರೂ 78,089 ರ ಇಂಟ್ರಾಡೇ ಗರಿಷ್ಠವನ್ನು ಮುಟ್ಟುವ ಮೊದಲು ರೂ 21 ರಷ್ಟು ಕುಸಿದು 10 ಗ್ರಾಂಗೆ ರೂ 77,726 ಕ್ಕೆ ಕೊನೆಗೊಂಡಿತು.
ಸ್ಪಾಟ್ ಗೋಲ್ಡ್ ರೇಟ್ ?
ರಾಯಿಟರ್ಸ್ನ ವರದಿ ಪ್ರಕಾರ ಹಿಂದಿನ ಅಧಿವೇಶನದಲ್ಲಿ ಸುಮಾರು ನಾಲ್ಕು ವಾರಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಒಂದು ಸುತ್ತಿನ ಲಾಭ-ತೆಗೆದುಕೊಳ್ಳುವಿಕೆಯ ನಂತರ ಚಿನ್ನದ ಬೆಲೆಗಳು ಗುರುವಾರ ಸ್ವಲ್ಪ ಹಿಮ್ಮಟ ತಲುಪಿವೆ. 0353 GMT ನಂತೆ, ಸ್ಪಾಟ್ ಚಿನ್ನವು ಶೇ.0.1ರಷ್ಟು ಕಡಿಮೆಯಾಗಿದೆ, ಪ್ರತಿ ಔನ್ಸ್‌ಗೆ USD 2,659.62 ನಲ್ಲಿ ವಹಿವಾಟು ನಡೆಸುತ್ತಿದೆ.
ಯುಎಸ್ ಚಿನ್ನದ ಭವಿಷ್ಯವು ಶೇ.0.2ನಷ್ಟು ಸಾಧಾರಣ ಹೆಚ್ಚಳವನ್ನು ಕಂಡಿತು, ಯುಎಸ್‌ಡಿ 2,678.30 ಕ್ಕೆ ಏರಿತು. ಬೆಳ್ಳಿಯ ಮುಂಭಾಗದಲ್ಲಿ, ಸ್ಪಾಟ್ ಬೆಲೆಗಳು ಸ್ಥಿರವಾಗಿ ಉಳಿದೆ. ಪ್ರತಿ ಔನ್ಸ್ಗೆ USD 30.12 ಅನ್ನು ಹಿಡಿದಿಟ್ಟುಕೊಂಡಿದೆ. ಆದರೆ ಪ್ಲಾಟಿನಂ ಶೇ.0.3 ನಷ್ಟು ಕುಸಿತ ಕಂಡಿದೆ.ಪಲ್ಲಾಡಿಯಮ್ ಕೂಡ ಶೇ.0.2ರಷ್ಟು ಸ್ವಲ್ಪ ಇಳಿಕೆಯನ್ನು ಕಂಡಿತು.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟಿದೆ?
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
ನಗರ 22 ಕ್ಯಾರೆಟ್ 24K ಕ್ಯಾರೆಟ್
- ಬೆಂಗಳೂರು 7,260 7,920
- ಚೆನ್ನೈ 7,260 7,920
- ಮುಂಬೈ 7,260 7,920
- ದೆಹಲಿ 7,275 7,935
- ಕೋಲ್ಕತಾ 7,260 7,920
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,250 ರೂ.
- ಚೆನ್ನೈ: 10,000 ರೂ.
- ಮುಂಬೈ: 9,150 ರೂ.
- ದೆಹಲಿ: 9,250 ರೂ.
- ಕೋಲ್ಕತಾ: 9,250 ರೂ.


Click it and Unblock the Notifications