ಶುಭ ಸುದ್ದಿ! ಬಂಗಾರ ಮತ್ತಷ್ಟು ಅಗ್ಗ.. 22k ಚಿನ್ನದ ಬೆಲೆ ಎಷ್ಟು ಗೊತ್ತಾ?

Gold Price today: ಬಂಗಾರದ ಬೆಲೆ ಬಂಗಾರದ ಬೆಲೆ ಇಂದು ಕಡಿಮೆಯಾಗಿದೆ. ಹೊಸ ವರ್ಷದ ಆರಂಭದಿಂದ ಚಿನ್ನ( Gold Rate) ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇತ್ತು. ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆಭರಣ ಪ್ರಿಯರು ಕಂಗಾಲಾಗಿದ್ದರು. ಇದೀಗ ಆಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ನಿನ್ನೆಯಿಂದ ಚಿನ್ನದ ಬೆಲೆ ಕಡಿವೆಯಾಗಿದ್ದು, ಇಂದು ಸಹ ಚಿನ್ನ, ಬೆಳ್ಳಿ( gold And Silver) ಬೆಲೆಗಳು ಕಡಿಮೆಯಾಗಿವೆ. ಹಾಗಿದ್ರೆ ಸೋಮವಾರ ( ಜ.6) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ

ಹೌದು, ಹೊಸ ವರ್ಷ 2025 ರಲ್ಲಿ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ.ಗೋಲ್ಡ್ ಪ್ರಿಯರ ಖುಷಿ ದುಪ್ಪಟ್ಟು ಮಾಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 72,150 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್​ನ ಚಿನ್ನದ ಬೆಲೆ 78,710 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿಯಲ್ಲಿ ಇದೆ. ಇನ್ನೇನು ಮುಂದಿನ ವಾರ ಹಬ್ಬದ ಸೀಸನ್‌ ಇರುವುದರಿಂದ ಚಿನ್ನ ಖರೀದಿಸುವವರಿಗೆ ಸಮಾಧಾನ ತಂದಿದೆ.

 ಬಂಗಾರ ಮತ್ತಷ್ಟು ಅಗ್ಗ.. 22k ಚಿನ್ನದ ಬೆಲೆ ಎಷ್ಟು?

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?

ಇಂದು ಭಾರತದಲ್ಲಿ ಚಿನ್ನದ ದರ ಇಂದು ಕಡಿಮೆಯಾಗಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,215 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,871 ರೂ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 72,150 ಇಂದು ರೂಪಾಯಿ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 78,710 ರೂ ಇದೆ.

ಇಂದು 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,21,500 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 7,87,100 ರೂ.ಗಳ ವಹಿವಾಟುವಿದೆ. 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 59,030 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟಿದೆ?

ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 91,500 ರೂಪಾಯಿಗಳ ವಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 91.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 915 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,150 ರೂ ಗಳು ಇದೆ. ಇಂದು ಬೆಳ್ಳಿಯ ಬೆಳೆಯಲ್ಲೂ ಸಹ ಇಳಿಕೆ ಕಂಡಿದೆ.

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ಭವಿಷ್ಯ ನೋಡೋದಾದ್ರೆ 77700 ಅನ್ನು ಮುಚ್ಚಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ಅನ್ನು ರೂಪಿಸಿತು. ಚಿನ್ನದ ಬೆಲೆ ಬೆಂಬಲಿತವಾದ ಮೇಲ್ಮುಖವಾದ ಪ್ರವೃತ್ತಿಯಿಂದ ಮರುಕಳಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ. MCX ಗೋಲ್ಡ್ 77850/78200 ಮಟ್ಟಗಳಲ್ಲಿ ಪ್ರತಿರೋಧವನ್ನು ವೀಕ್ಷಿಸಬಹುದು 78200 ಕ್ಕಿಂತ ಹೆಚ್ಚಿನ ವಿರಾಮದೊಂದಿಗೆ ಹೆಚ್ಚಿನ ಲಾಭಗಳಿಗೆ ಬಾಗಿಲು ತೆರೆದಿದೆ. 78700/79000 ಮಟ್ಟಗಳಿಗೆ ವ್ಯತಿರಿಕ್ತವಾಗಿ, 77420/77000 ಮಟ್ಟಗಳಲ್ಲಿ ವ್ಯಾಪಾರದ ಬೆಂಬಲವನ್ನು ಗಮನಿಸಲಾಗಿದೆ ಏಕೆಂದರೆ ನಡೆಯುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಯಿಂದಾಗಿ ಚಂಚಲತೆಯು ಹೆಚ್ಚಾಗಬಹುದು ಬ್ರೋಕರ್ಸ್ ಪ್ರೈ. ಲಿಮಿಟೆಡ ಸಂಸ್ಥೆ ಹೇಳಿದೆ.

ಸ್ಪಾಟ್ ಗೋಲ್ಡ್ ರೇಟ್ ?

ಸ್ಪಾಟ್ ಚಿನ್ನದ ದರವು ಪ್ರಸ್ತುತ ಪ್ರತಿ ಔನ್ಸ್‌ಗೆ $ 2638 ನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ, ಸ್ಪಾಟ್ ಬೆಳ್ಳಿ ದರವು ಪ್ರತಿ ಔನ್ಸ್‌ಗೆ 29.64 ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ 85.800ಕ್ಕೆ ಕುಸಿದಿದೆ. ಚಿನ್ನದ ಬೆಲೆ ಹಿಂದಿನ ದಿನಕ್ಕೆ ಹೋಲಿಸಿದರೆ ಇಂದು ಸ್ಥಿರವಾಗಿದೆ.

ಚಿನ್ನದ ಬೆಲೆ ಇಳಿಕೆಗೆ ಕಾರಣವೇನು?

ಚಿನ್ನದ ಬೆಲೆಗಳು ಜಾಗತಿಕ ಮಟ್ಟದಲ್ಲಿ ಇನ್ನೂ ಸಹ ರಾಜಕೀಯ ಅಶಾಂತಿ ವಾತಾವರಣ ಮುಂದುವರೆದಿದೆ. ಇದ್ರ ಜೊತೆಗೆ ಯುಎಸ್‌ ಫೆಡರಲ್ ರಿಸರ್ವ್ 25 ಬಿಪಿಎಸ್‌ನಷ್ಟು ಬಡ್ಡಿ ದರ ತಗ್ಗಿಸಿದ ಬಳಿಕ ಹೂಡಿಕೆದಾರರ ಗಮನ ಮತ್ತು ಹೂಡಿಕೆಯ ಆಯ್ಕೆಯು ಸಹ ಬದಲಾಗಿದೆ. ವಿಪರೀತ ಹಣದುಬ್ಬರ ಏರಿಕೆಗೊಳ್ಳುತ್ತಿರುವುದು ಸಹ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ರೂಪಾಯಿ ದುರ್ಬಲಗೊಂಡು ಡಾಲರ್ ಬಲಗೊಂಡಿರುವುದು ಹಳದಿ ಲೋಹದ ಬೆಲೆ ಮೇಲೆ ನಕಾರಾತ್ಕಕ ಪರಿಣಾಮ ಬೀರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಸ್ಥಿರವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಯಾಗಿದ್ದು, ಇದೂ ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ

ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ

ಕ್ರಮ
ಸಂಖ್ಯೆ
ನಗರಗಳು24 ಕ್ಯಾರೆಟ್22 ಕ್ಯಾರೆಟ್
1ದೆಹಲಿ7,230 ರೂ7,886 ರೂ
2ಮುಂಬೈ7,215 ರೂ7,871 ರೂ
3ಚೆನ್ನೈ7,215 ರೂ7,871 ರೂ
4ಕೋಲ್ಕತ್ತಾ7,215 ರೂ7,871 ರೂ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 9,150 ರೂ

ಚೆನ್ನೈ: 9,900 ರೂ

ಮುಂಬೈ: 9,150 ರೂ

ದೆಹಲಿ: 9,150 ರೂ

ಕೋಲ್ಕತಾ: 9,150 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+