Gold Price: ಸಂಕ್ರಾಂತಿ ಮುನ್ನ ದಿನ ಚಿನ್ನ ಬೆಲೆ ಗಗನಕ್ಕೇದ್ದು, ಚಿನ್ನದ ಮಾರುಕಟ್ಟೆ ಬಂಗಾರದ ಪ್ರಿಯರಿಗೆ ಶಾಕ್ ಕೊಟ್ಟಿದೆ, ಮಕರ ಸಂಕ್ರಾಂತಿಗೆ ಚಿನ್ನ ಖರೀದಿ ಮಾಡಬೇಕು ಅಂದುಕೊಂಡವರಿಗೆ ನಿರಾಸೆಯಾಗಿದೆ. ಚಿನ್ನದ ಬೆಲೆ ಜೊತೆಗೆ ಬೆಳ್ಳಿಯ ಬೆಲೆ ಕೂಡ ಏರಿಕೆ ಕಂಡಿದೆ. ಹಾಗಿದ್ರೆ ಚಿನ್ನದ ಮಾರುಕಟ್ಟೆಯಲ್ಲಿ ವಾರದ ಮೊದಲ ದಿನ ಸೋಮವಾರದಂದು( ಜ.13 ) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ
ಹೌದು,ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಏರಿಕೆಯಾಗಿರುವುದರಿಂದ ಆಭರಣ ಪ್ರಿಯರಿಗೆ ನಿರಾಸೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ಕ್ಕೆ 73,400 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್ನ ಚಿನ್ನದ ಬೆಲೆ 80,070 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಬಂಗಾರದ ಬೆಲೆ ಇಂದು ಏರಿಕೆ ಕಂಡಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಇಂದು ಭಾರತದಲ್ಲಿ ಚಿನ್ನದ ದರ ಇಂದು ಕಡಿಮೆಯಾಗಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,340 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,007ರೂ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 73,400ಇಂದು ರೂಪಾಯಿ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 80,070 ರೂ ಇದೆ.
ಇಂದು 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,34,000 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,00,700 ರೂ.ಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ 4,300ಏರಿಕೆ ಕಂಡಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 60,060 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಯಾವುದೇ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 94,500 ರೂಪಾಯಿಗಳ ವಹಿವಾಟುವಿದೆ.ಒಂದು ಗ್ರಾಂ ಗೆ ಬೆಳ್ಳಿಗೆ 94.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 945 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,450 ರೂ ಗಳು ಇದೆ. ಇಂದು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.21%ನಷ್ಟು ಇಳಿಕೆಯಾಗಿ 77,155ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.04%ನಷ್ಟು ಇಳಿಕೆಯಾಗಿ 89,188 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಸ್ಪಾಟ್ ಗೋಲ್ಡ್ ರೇಟ್ ?
ರಾಯಿಟರ್ಸ್ ವರದಿ ಪ್ರಕಾರ ಸ್ಪಾಟ್ ಚಿನ್ನವು 02:07ಗೆ ಪ್ರತಿ ಔನ್ಸ್‌ಗೆ $2,648.76 ಕ್ಕೆ ಶೇ.0.5 ರಷ್ಟು ಏರಿಕೆಯಾಯಿತು, ನಂತರ ಗೋಲ್ಡ್ ಸೇಷನ್ ನಲ್ಲಿ ಶೇ.1 ರಷ್ಟು ಏರಿಕೆಯಾಯಿತು. ಯುಎಸ್ ಚಿನ್ನದ ಮೌಲ್ಯವು ಶೇ.0.7% ಹೆಚ್ಚಿನ $2,665.40 ತಲುಪಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22 ಕ್ಯಾರೆಟ್ | 24k ಕ್ಯಾರೆಟ್ |
| ಬೆಂಗಳೂರು | 7,340 | 8,007 |
| ಚೆನ್ನೈ | 7,340 | 8,007 |
| ಮುಂಬೈ | 7,340 | 8,007 |
| ದೆಹಲಿ | 7,355 | 8,022 |
| ಕೋಲ್ಕತಾ | 7,340 | 8,007 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,450 ರೂ
ಚೆನ್ನೈ: 10,200 ರೂ
ಮುಂಬೈ: 9,450ರೂ
ದೆಹಲಿ: 9,450 ರೂ
ಕೋಲ್ಕತಾ: 9,450 ರೂ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications