Gold Price: ಸತತವಾಗಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಆಭರಣ ಪ್ರಿಯರಿಗೆ ನಿರಾಸೆಯಾಗುತ್ತದೆ. ಇಂದು ಚಿನ್ನದ ಬೆಲೆ ಜೊತೆಗೆ ಬೆಳ್ಳಿಯ ಬೆಲೆ ಕೂಡ ಇಂದು ಏರಿಕೆ ಕಂಡಿದೆ. ಹಾಗಿದ್ರೆ ಬಂಗಾರದ ಮಾರುಕಟ್ಟೆಯಲ್ಲಿ ಶುಕ್ರವಾರದಂದು( ಜ.17) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಹೌದು,ಇಂದು ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ಕ್ಕೆ74,500 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್ನ ಚಿನ್ನದ ಬೆಲೆ 81,270ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಬಂಗಾರದ ಬೆಲೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಭಾರತದಲ್ಲಿ ಬಂಗಾರದ ಬೆಲೆ ಎಷ್ಟಿದೆ?
ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,450 ರೂಪಯಿ ಆಗಿದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,127ರೂಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 74,500 ರೂಗಳ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 81,270 ರೂ ಇದೆ.
ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,45,000 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,12,700 ರೂ.ಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ6,500 ಏರಿಕೆ ಕಂಡಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 60,960 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 96,500 ರೂಪಾಯಿಗಳ ವಹಿವಾಟುವಿದೆ.ಒಂದು ಗ್ರಾಂ ಗೆ ಬೆಳ್ಳಿಗೆ 96.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 965 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,650ರೂ ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX)ಚಿನ್ನದ ಭವಿಷ್ಯ ನೋಡೋದಾದ್ರೆ, MCX ಗೋಲ್ಡ್ ಪ್ರಮುಖ ಪ್ರತಿರೋಧದ ಮಟ್ಟಗಳಲ್ಲಿ ಲಾಭದ ಬುಕಿಂಗ್‌ಗೆ ಸಾಕ್ಷಿಯಾಗಿದೆ. ಸರಕು ಪ್ರಸ್ತುತ ಅದರ ಪ್ರಮುಖ ಪೂರೈಕೆ ಹಂತಗಳಲ್ಲಿ ತೂಗಾಡುತ್ತಿದೆ ಮತ್ತು ಡೋಜಿ ಕ್ಯಾಂಡಲ್‌ಗಿಂತ ಕಡಿಮೆ ವಿರಾಮವನ್ನು ಹೊಂದಿದೆ. (78066) ಮತ್ತಷ್ಟು ಮಾರಾಟದ ಒತ್ತಡವನ್ನು ಆಹ್ವಾನಿಸಬಹುದು ಮತ್ತು 77700/77250 ಮಟ್ಟಗಳ ಕಡೆಗೆ ಸರಕುಗಳನ್ನು ತಳ್ಳಬಹುದು.
MCX ಗೋಲ್ಡ್ 78200- 79000 ರ ಶ್ರೇಣಿಯನ್ನು ಉಳಿಸಿಕೊಂಡಿದೆ, ಇದು 79280/79800 ಹಂತಗಳ ಕಡೆಗೆ ಮುನ್ನಡೆಯಬಹುದು, ಏಕೆಂದರೆ ಈ ವಾರದ ನಂತರ ಅನೇಕ ಸ್ಥೂಲ ಆರ್ಥಿಕ ಡೇಟಾ ಬಿಡುಗಡೆಗಳಿಂದ ಚಂಚಲತೆಯು ಹೆಚ್ಚಾಗಬಹುದು. ನಡೆಯುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಗಳು ಎಂದು ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ಟ್ರೇಡಿಂಗ್ ಎಕನಾಮಿಕ್ಸ್ ಮಾಹಿತಿಯ ಪ್ರಕಾರ ಸ್ಪಾಟ್ ಚಿನ್ನವು ಗುರುವಾರ ಪ್ರತಿ ಔನ್ಸ್ ಮಾರ್ಕ್‌ಗೆ $ 2,715 ಕ್ಕೆ ಏರಿತು, ಫೆಡ್ ಈ ವರ್ಷ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ ಎಂಬ ಬೆಳೆಯುತ್ತಿರುವ ನಿರೀಕ್ಷೆಗಳ ಮಧ್ಯೆ ಎರಡು ತಿಂಗಳಿನಲ್ಲಿ ಅದರ ಗರಿಷ್ಠತೆಯನ್ನು ಹಿಂದಿನ ಅಧಿವೇಶನದಿಂದ ಲಾಭವನ್ನು ವಿಸ್ತರಿಸಿದೆ. ಜನವರಿಯಲ್ಲಿ ಆರಂಭಿಕ ನಿರುದ್ಯೋಗ ಹಕ್ಕುಗಳು ತೀವ್ರವಾಗಿ ಮರುಕಳಿಸಿದಾಗ ಚಿಲ್ಲರೆ ಮಾರಾಟವು ಡಿಸೆಂಬರ್‌ನಲ್ಲಿ ನಿರೀಕ್ಷೆಗಿಂತ ಕಡಿಮೆ ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22ಕ್ಯಾರೆಟ್ | 24K ಕ್ಯಾರೆಟ್ |
| ಬೆಂಗಳೂರು | 7,450 | 8,127 |
| ಚೆನ್ನೈ | 7,450 | 8,127 |
| ಮುಂಬೈ | 7,450 | 8,127 |
| ದೆಹಲಿ | 7,465 | 8,142 |
| ಕೋಲ್ಕತಾ | 7,450 | 8,127 |
| ಹೈದರಾಬಾದ್ | 7,450 | 8,127 |
| ಪುಣೆ | 7,450 | 8,127 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,250 ರೂ |
| ಚೆನ್ನೈ | 10,400 ರೂ |
| ಮುಂಬೈ | 9,650 ರೂ |
| ದೆಹಲಿ | 9,650 ರೂ |
| ಕೋಲ್ಕತಾ | 9,650 ರೂ |
| ಹೈದರಾಬಾದ್ | 10,400ರೂ |
| ಪುಣೆ | 10,400ರೂ |
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ. ಆದರಲ್ಲೂ ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಆದರೆ ಬಂಗಾರದ ಬೆಲೆ ಏರಿಕೆಯಾಗಿರುವುದರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.


Click it and Unblock the Notifications