ಚಿನ್ನದ ಬೆಲೆ ಸತತ 3ನೇ ದಿನ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 8,000 ರೂಪಾಯಿ ಕಡಿಮೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿಯಲಾರಂಭಿಸಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 48493 ರೂಪಾಯಿಗೆ ಇಳಿದು, ಮೂರನೇ ದಿನವು ನಷ್ಟವನ್ನು ಮುಂದುವರಿಸಿದೆ.

ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯು ಶೇಕಡಾ 0.8ರಷ್ಟು ಕುಸಿದು ಪ್ರತಿ ಕೆಜಿಗೆ 71301 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.8ರಷ್ಟು ಕುಸಿದಿದ್ದರೆ, ಬೆಳ್ಳಿ ಬೆಲೆಯು ಶೇಕಡಾ 0.56ರಷ್ಟು ಇಳಿಕೆಯಾಗಿದೆ.

ಚಿನ್ನದ ಬೆಲೆ ಸತತ 3ನೇ ದಿನ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 8,000 ಕಡಿಮೆ

ಈ ತಿಂಗಳ ಆರಂಭದಲ್ಲಿ 5 ತಿಂಗಳ ಗರಿಷ್ಠ 49,700 ರೂಪಾಯಿ ಮುಟ್ಟಿದ ನಂತರ ಚಿನ್ನವು ತನ್ನ ಲಾಭವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನವು ದಾಖಲೆಯ ಗರಿಷ್ಠ, 56,200 ಕ್ಕೆ ಮುಟ್ಟಿತ್ತು. ಅಂದಿಗೆ ಹೋಲಿಸಿದರೆ ಚಿನ್ನವು ಗರಿಷ್ಠ ಮಟ್ಟಕ್ಕಿಂತ 8,000 ರೂಪಾಯಿ ಕಡಿಮೆಯಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಯುಎಸ್ ಡಾಲರ್ ಬಲವರ್ಧನೆಯ ಮಧ್ಯೆ ಚಿನ್ನದ ಬೆಲೆ ಔನ್ಸ್‌ಗೆ ಶೇಕಡಾ 0.2ರಷ್ಟು ಕುಸಿದು 1,861 ಡಾಲರ್‌ಗೆ ತಲುಪಿದೆ. ಬೆಳ್ಳಿ ಸಹ ದುರ್ಬಲವಾಗಿದ್ದು, ಔನ್ಸ್‌ಗೆ ಶೇಕಡಾ 0.7ರಷ್ಟು ಇಳಿದು 27.64 ಡಾಲರ್‌ಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+