ಚಿನ್ನದ ಬೆಲೆ ಇಳಿಕೆ: ಮೂರು ತಿಂಗಳ ಕನಿಷ್ಠ ಮಟ್ಟದ ಸಮೀಪ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯತ್ತ ಮುಖಮಾಡಿದೆ. ಚಿನ್ನದ ಬೆಲೆ ಮತ್ತಷ್ಟು ಒತ್ತಡದಲ್ಲಿ ಮುಂದುವರೆದಿದ್ದು, ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಎಂಸಿಎಕ್ಸ್‌ನಲ್ಲಿ ಆಗಸ್ಟ್‌ನ ಚಿನ್ನದ ಭವಿಷ್ಯವು 10 ಗ್ರಾಂಗೆ, 46,518 ರೂಪಾಯಿಗೆ ಇಳಿದಿದ್ದರೆ, ಬೆಳ್ಳಿ ಅಲ್ಪ ಲಾಭ ಗಳಿಸಿದೆ. ಬೆಳ್ಳಿ ಶೇಕಡಾ 0.16ರಷ್ಟು ಏರಿಕೆಯಾಗಿ ಕೆಜಿಗೆ 68,381 ರೂಪಾಯಿಗೆ ತಲುಪಿದೆ. ಎಂಸಿಎಕ್ಸ್‌ ಚಿನ್ನವು ಸುಮಾರು 46,000 ರೂಪಾಯಿ ಬೆಂಬಲವನ್ನ ಹೊಂದಿದ್ದು, 47,600ರ ಪ್ರತಿರೋಧವನ್ನು ಎದುರಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಚಿನ್ನದ ಬೆಲೆ ಇಳಿಕೆ: ಮೂರು ತಿಂಗಳ ಕನಿಷ್ಠ ಮಟ್ಟದ ಸಮೀಪ

ಈ ತಿಂಗಳು ಇಲ್ಲಿಯವರೆಗೆ ಚಿನ್ನವು ಸುಮಾರು 2,700 ರೂಪಾಯಿನಷ್ಟು ಕುಸಿದಿದ್ದು, ಕಳೆದ ವರ್ಷದ ಗರಿಷ್ಠ 56,200 ರೂಪಾಯಿನಿಂದ 10 ಗ್ರಾಂಗೆ 10,000 ರೂಪಾಯಿನಷ್ಟು ಕಡಿಮೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನದ ದರವು ಔನ್ಸ್‌ಗೆ 1,763.63 ಡಾಲರ್‌ಗೆ ಇಳಿದಿದೆ. ಇದು ನಾಲ್ಕು ವರ್ಷಗಳಲ್ಲಿ ಅದರ ಅತಿದೊಡ್ಡ ಮಾಸಿಕ ಕುಸಿತಕ್ಕೆ ಕಾರಣವಾಗಿದೆ. ಅಮೂಲ್ಯವಾದ ಲೋಹದ ಬೆಲೆಗಳು ತಿಂಗಳಿಗೆ ಶೇಕಡಾ 7.5ರಷ್ಟು ಕಡಿಮೆಯಾಗಿದೆ.

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.3ರಷ್ಟು ಏರಿಕೆ ಕಂಡು 25.82 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.3ರಷ್ಟು ಏರಿಕೆ ಕಂಡು 1,070.38 ಡಾಲರ್‌ಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+