ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಸಾಗುವ ಮುನ್ಸೂಚನೆ ನೀಡಿದ್ದು, ಇದೀಗ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಸಮೀಪಿಸಿದೆ.
ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನವು ಶೇಕಡಾ 0.24ರಷ್ಟು ಏರಿಕೆಯಾಗಿ ನಾಲ್ಕು ತಿಂಗಳ ಗರಿಷ್ಠ 48519 ಕ್ಕೆ ತಲುಪಿದೆ. ಇದೇ ವೇಳೆಯಲ್ಲಿ ಬೆಳ್ಳಿ ದರವು ಶೇಕಡಾ 0.5ನಷ್ಟು ಜಿಗಿದು ಪ್ರತಿ ಕೆಜಿಗೆ 71,440 ರೂಪಾಯಿಗೆ ತಲುಪಿದೆ.

ಕಳೆದ ವಹಿವಾಟುಗಳಲ್ಲಿ ಚಿನ್ನವು ಶೇಕಡಾ 0.22ರಷ್ಟು ಮತ್ತು ಬೆಳ್ಳಿ ಶೇಕಡಾ 1.7ರಷ್ಟು ಕುಸಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಕ್ರಿಪ್ಟೋಕರೆನ್ಸಿಗಳಲ್ಲಿನ ಕುಸಿತವು ಸುರಕ್ಷಿತ ಹೂಡಿಕೆ ಚಿನ್ನದ ಬೆಲೆ ಮತ್ತಷ್ಟು ಏರಿಕೆಗೆ ಕಾಣರವಾಗಿದ್ದು, ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು.
ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಶೇಕಡಾ 0.4ರಷ್ಟು ಏರಿಕೆ ಕಂಡು 27.64 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.6 ರಷ್ಟು ಏರಿಕೆ ಕಂಡು 1,173.03 ಡಾಲರ್‌ಗೆ ತಲುಪಿದೆ.
ಇನ್ನು ಸವರನ್ ಗೋಲ್ಡ್ ಬಾಂಡ್ ಎರಡನೇ ಕಂತಿನ ಚಂದಾದಾರಿಕೆಗಾಗಿ ಇಂದು ತೆರೆಯಲ್ಪಟ್ಟವಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಶ್ಯೂ ಬೆಲೆಯನ್ನು ಪ್ರತಿ ಗ್ರಾಂಗೆ, 4,842 ರೂಪಾಯಿ ನಿಗದಿಪಡಿಸಿದೆ.


Click it and Unblock the Notifications