Gold Price: ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿ ಇದೆ.ಹೊಸ ವರ್ಷದ ಆರಂಭದಿಂದ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇತ್ತು. ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆಭರಣ ಪ್ರಿಯರು ಕಂಗಾಲಾಗಿದ್ದರು. ಇದೀಗ ಆಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೌದು ನಿನ್ನೆಯಿಂದ ಚಿನ್ನದ ಬೆಲೆ ಕಡಿವೆಯಾಗಿದ್ದು, ಬೆಳ್ಳಿ ಬೆಲೆಗಳು ಏರಿಕೆಯಾಗಿದೆ.ಹಾಗಿದ್ರೆ ಮಂಗಳವಾರ ( ಜ.7) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ
ಹೌದು, ಹೊಸ ವರ್ಷ 2025 ರಲ್ಲಿ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ.ಗೋಲ್ಡ್ ಪ್ರಿಯರ ಖುಷಿ ದುಪ್ಪಟ್ಟು ಮಾಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,150 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್ನ ಚಿನ್ನದ ಬೆಲೆ 78,710 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿಯಲ್ಲಿ ಇದೆ. ಇನ್ನೇನು ಮುಂದಿನ ವಾರ ಹಬ್ಬದ ಸೀಸನ್ ಇರುವುದರಿಂದ ಚಿನ್ನ ಖರೀದಿಸುವವರಿಗೆ ಸಮಾಧಾನ ತಂದಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಇಂದು ಭಾರತದಲ್ಲಿ ಚಿನ್ನದ ದರ ಇಂದು ಕಡಿಮೆಯಾಗಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,215 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,871 ರೂ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 72,150 ಇಂದು ರೂಪಾಯಿ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 78,710 ರೂ ಇದೆ.
ಇಂದು 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,21,500 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 7,87,100 ರೂ.ಗಳ ವಹಿವಾಟುವಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 59,030 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಕೊಂಚ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,500 ರೂಪಾಯಿಗಳ ವಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ 1,000 ರೂ ಏರಿಕೆಯಾಗಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 92.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 925 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,250ರೂ ಗಳು ಇದೆ. ಇಂದು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.21%ನಷ್ಟು ಇಳಿಕೆಯಾಗಿ 77,155ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.04%ನಷ್ಟು ಇಳಿಕೆಯಾಗಿ 89,188 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಸ್ಪಾಟ್ ಗೋಲ್ಡ್ ರೇಟ್ ?
ರಾಯಿಟರ್ಸ್ ವರದಿ ಪ್ರಕಾರ ಫೆಡರಲ್ ರಿಸರ್ವ್‌ನ ಬಡ್ಡಿದರದ ಪಥವನ್ನು ಅಳೆಯಲು ಮಾರುಕಟ್ಟೆ ಭಾಗವಹಿಸುವವರು ಯುಎಸ್ ಆರ್ಥಿಕ ದತ್ತಾಂಶಕ್ಕಾಗಿ ಕಾಯುತ್ತಿದ್ದ ಕಾರಣ, ಮಂಗಳವಾರ ಚಿನ್ನದ ಬೆಲೆಗಳು ಹೆಚ್ಚಾದವು. 0242 GMT ನಂತೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $2,638.09 ಕ್ಕೆ ಶೇ.0.1 ಹೆಚ್ಚಾಗಿದೆ. ಯುಎಸ್ ಚಿನ್ನದ ಭವಿಷ್ಯವು $2,648.60 ನಲ್ಲಿ ಸ್ವಲ್ಪ ಮಟ್ಟದಲ್ಲಿ ಬದಲಾವಣೆಯಾಗಿದೆ.
ಚಿನ್ನದ ಬೆಲೆ ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಗಳು ಜಾಗತಿಕ ಮಟ್ಟದಲ್ಲಿ ಇನ್ನೂ ಸಹ ರಾಜಕೀಯ ಅಶಾಂತಿ ವಾತಾವರಣ ಮುಂದುವರೆದಿದೆ. ಇದ್ರ ಜೊತೆಗೆ ಯುಎಸ್ ಫೆಡರಲ್ ರಿಸರ್ವ್ 25 ಬಿಪಿಎಸ್‌ನಷ್ಟು ಬಡ್ಡಿ ದರ ತಗ್ಗಿಸಿದ ಬಳಿಕ ಹೂಡಿಕೆದಾರರ ಗಮನ ಮತ್ತು ಹೂಡಿಕೆಯ ಆಯ್ಕೆಯು ಸಹ ಬದಲಾಗಿದೆ. ವಿಪರೀತ ಹಣದುಬ್ಬರ ಏರಿಕೆಗೊಳ್ಳುತ್ತಿರುವುದು ಸಹ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ರೂಪಾಯಿ ದುರ್ಬಲಗೊಂಡು ಡಾಲರ್ ಬಲಗೊಂಡಿರುವುದು ಹಳದಿ ಲೋಹದ ಬೆಲೆ ಮೇಲೆ ನಕಾರಾತ್ಕಕ ಪರಿಣಾಮ ಬೀರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಸ್ಥಿರವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಯಾಗಿದ್ದು, ಇದೂ ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ಕ್ರಮ ಸಂಖ್ಯೆ | ನಗರಗಳು | 22 ಕ್ಯಾರೆಟ್ | 24 ಕ್ಯಾರೆಟ್ |
| 1 | ಬೆಂಗಳೂರು | ರೂ.7215 | ರೂ.7,871 |
| 2 | ಚೆನ್ನೈ | ರೂ.7215 | ರೂ.7,871 |
| 3 | ಮುಂಬೈ | ರೂ.7215 | ರೂ.7,871 |
| 4 | ದೆಹಲಿ | ರೂ.7230 | ರೂ.7,886 |
| 5 | ಕೋಲ್ಕತ್ತಾ | ರೂ.7215 | ರೂ.7,871 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,250 ರೂ
ಚೆನ್ನೈ: 10,000 ರೂ
ಮುಂಬೈ: 9,150 ರೂ
ದೆಹಲಿ: 9,250 ರೂ
ಕೋಲ್ಕತಾ: 9,250


Click it and Unblock the Notifications