ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ಶುಕ್ರವಾರ ಚಿನ್ನದ ಬೆಲೆ ಏರಿಕೆ ದಾಖಲಿಸಿದೆ. ಆದರೆ ಬೆಳ್ಳಿ ಬೆಲೆಯು ಕುಸಿತ ಕಂಡಿದೆ.
ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.35ರಷ್ಟು ಏರಿಕೆ ಕಂಡು 47,887 ಡಾಲರ್‌ಗೆ ತಲುಪಿದ್ದರೆ, ಈ ಮೂಲಕ ಚಿನ್ನದ ಬೆಲೆ 48,000 ಕಡೆಗೆ ದಾಪುಗಾಲಿಟ್ಟಿದೆ. ಆದರೆ
ಬೆಳ್ಳಿ ದರವು ಪ್ರತಿ ಕೆ.ಜಿ.ಗೆ ಶೇಕಡಾ 0.2ರಷ್ಟು ಇಳಿದು, 68,826 ರೂಪಾಯಿಗೆ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ ಸ್ಥಿರವಾಗಿದ್ದು, ಸ್ಪಾಟ್ ಚಿನ್ನವು ಔನ್ಸ್‌ಗೆ 1,800.85 ಡಾಲರ್‌ರಂತೆ ಸ್ಥಿರವಾಗಿದೆ. ಈ ವಾರ ಇಲ್ಲಿಯವರೆಗೆ ಬೆಲೆ ಶೇಕಡಾ 0.8ರಷ್ಟು ಏರಿಕೆಯಾಗಿದೆ.
ಯುಎಸ್ ಡಾಲರ್ ಮೌಲ್ಯದ ಏರಿಕೆಯು ಚಿನ್ನದ ಏರಿಕೆಗೆ ಕಾರಣವಾಯಿತು. ಯುಎಸ್ ಬಾಂಡ್ ಇಳುವರಿ ನಾಲ್ಕು ತಿಂಗಳ ಕನಿಷ್ಠ ಮಟ್ಟದಲ್ಲಿದೆ, ಇದು ಬಡ್ಡಿರಹಿತ ಚಿನ್ನವನ್ನು ಹೊಂದಿರುವ ಅವಕಾಶದ ವೆಚ್ಚವನ್ನು ಕಡಿಮೆ ಮಾಡುತ್ತದೆ.
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 46,800 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,850 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 22 & 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ 44,750 ರೂ. ಮತ್ತು 48,820 ರೂಪಾಯಿಗೆ ಮುಟ್ಟಿದೆ.


Click it and Unblock the Notifications