ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆಯತ್ತ ಮುಖ ಮಾಡಿದ್ದು, 47,000 ರೂಪಾಯಿ ಮಟ್ಟಕ್ಕಿಂತ ಕಡಿಮೆಯಾಗುತ್ತಿದೆ. ಎಂಸಿಎಕ್ಸ್‌ನಲ್ಲಿ ಹಿಂದಿನ ತಿಂಗಳ ತೀವ್ರ ಕುಸಿತದ ನಂತರ ಚಿನ್ನದ ಭವಿಷ್ಯವು 10 ಗ್ರಾಂಗೆ 46,927 ರೂಪಾಯಿನಷ್ಟಿದೆ.
ಎಂಸಿಎಕ್ಸ್ ಚಿನ್ನವು 45,970 ರೂಪಾಯಿ ಮತ್ತು 47600 ರೂಪಾಯಿ ನಡುವೆ ಪ್ರತಿರೋಧ ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಚಿನ್ನದ ಬೆಲೆ ಕಳೆದ ತಿಂಗಳು ಸುಮಾರು 2,500 ರೂಪಾಯಿ ಇಳಿಕೆಗೊಂಡಿತ್ತು. ತೀವ್ರ ಕುಸಿತದ ನಂತರ, ಚಿನ್ನವು ಕಳೆದ ವರ್ಷದ ದಾಖಲೆಯ ಮಟ್ಟವಾದ, 56,200 ರೂಪಾಯಿಗಳಿಂದ ಸುಮಾರು 9,000 ರೂಪಾಯಿ ಕಡಿಮೆಯಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿದಿದ್ದರಿಂದ ಭಾರತ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಬೆಲೆಯನ್ನು ಕಡಿತಗೊಳಿಸಿದೆ. ಭಾರತವು ತನ್ನ ಚಿನ್ನದ ಅಗತ್ಯದ ಬಹುಭಾಗವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಬೆಲೆಗಳಲ್ಲಿ ಶೇಕಡಾ 7.5ರಷ್ಟು ಆಮದು ಸುಂಕ ಮತ್ತು ಶೇಕಡಾ 3ರಷ್ಟು ಜಿಎಸ್‌ಟಿ ಸೇರಿವೆ.
ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಇಂದು ಬೆಳ್ಳಿ ದರವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 26.14 ಡಾಲರ್‌ಗೆ ತಲುಪಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,890 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 49,890 ರೂಪಾಯಿ ದಾಖಲಾಗಿದೆ.


Click it and Unblock the Notifications