For Quick Alerts
ALLOW NOTIFICATIONS  
For Daily Alerts

Gold Rate Today; ಚಿನ್ನ- ಬೆಳ್ಳಿ ಇಳಿಕೆ, ಗರಿಷ್ಠದಿಂದ 7 ಸಾವಿರ ಇಳಿದ ಚಿನ್ನ

By ಅನಿಲ್ ಆಚಾರ್
|

ಭಾರತದ ಮಾರುಕಟ್ಟೆಯಲ್ಲಿ ಸೋಮವಾರ (ಡಿಸೆಂಬರ್ 7, 2020) ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಿಶ್ರ ಬೆಳವಣಿಗೆ ಕಂಡಿವೆ. ಕೊರೊನಾ ಲಸಿಕೆ ಬಗೆಗಿನ ಆಶಾಭಾವನೆ, ಈ ವಾರ ಯುಎಸ್ ಆರ್ಥಿಕ ಉತ್ತೇಜನದ ಭರವಸೆ ಜಾರಿ ಆಗಬಹುದು ಎಂಬ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 0.15% ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ 49,271 ರುಪಾಯಿಯಲ್ಲಿ ವಹಿವಾಟು ನಡೆಸಿದೆ. ಬೆಳ್ಳಿ ಬೆಲೆ ಕೇಜಿಗೆ 0.2%ನಷ್ಟು ಇಳಿದು, ರು. 63,684 ತಲುಪಿತು.

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಫ್ಯೂಚರ್ 0.2% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 49,209 ರುಪಾಯಿ ತಲುಪಿತ್ತು. ಇನ್ನು ಬೆಳ್ಳಿ ಬೆಲೆಯು 0.3% ಇಳಿಕೆ ಕಂಡಿತ್ತು. ಕಳೆದ ವಾರ ಚಿನ್ನದ ಬೆಲೆಯು 10 ಗ್ರಾಮ್ ಗೆ 1200 ರುಪಾಯಿ ಏರಿಕೆ ಕಂಡಿತ್ತು.

ಫೈಜರ್ ಕೊರೊನಾ ಲಸಿಕೆ ಹಾಕಿಸುವ ಯುಕೆ

ಫೈಜರ್ ಕೊರೊನಾ ಲಸಿಕೆ ಹಾಕಿಸುವ ಯುಕೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಈ ದಿನ ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1837 ಇದೆ. ಈ ವಾರ ಫೈಜರ್ ಕೊರೊನಾ ಲಸಿಕೆ ಹಾಕಿಸುವ ಮೊದಲ ದೇಶವಾಗಿ ಹೆಸರಾಗಲಿದೆ ಯುನೈಟೆಡ್ ಕಿಂಗ್ ಡಮ್. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನಿಂದ ಕೂಡ ಫೈಜರ್/ಬಯೋನ್ ಟೆಕ್ ಸಿದ್ಧಪಡಿಸಿರುವ ಲಸಿಕೆ ಖರಿದಿಗೆ ಮಾತುಕತೆ ನಡೆಯಲಿದೆ. ಒಂದು ವೇಳೆ ಲಸಿಕೆಗೆ ಅನುಮತಿ ಸಿಕ್ಕಲ್ಲಿ ಇಪ್ಪತ್ನಾಲ್ಕು ಗಂಟೆಯೊಳಗೆ ವಿತರಣೆ ಆರಂಭ ಆಗಬಹುದು ಎಂದು ಹೇಳಲಾಗಿದೆ. ಇನ್ನು ಕಳೆದ ಶುಕ್ರವಾರ ಯುಎಸ್ ವೇತನ ದತ್ತಾಂಶ ಹೊರಬಿದ್ದಿದ್ದು, ಅಂದಾಜು ಮಾಡಿದ್ದಕ್ಕಿಂತ ಏರಿಕೆ ಪ್ರಮಾಣ ಕಡಿಮೆ ಆಗಿದೆ. ಆದ್ದರಿಂದ ಕೊರೊನಾ ಉತ್ತೇಜನಾ ಕ್ರಮದ ಘೋಷಣೆ ಹೆಚ್ಚು ಉಜ್ವಲವಾಗಿದೆ. ಈ ಕ್ರಮದಿಂದ ಚಿನ್ನದ ಬೆಲೆ ಏರಿಕೆಗೆ ಸಹಾಯ ಆಗಲಿದೆ. ಅಂದಹಾಗೆ, ಚಿನ್ನದ ದರ ಇಳಿಕೆ ಆರಂಭಿಸುವ ಮುನ್ನ ಕಳೆದ ಆಗಸ್ಟ್ ನಲ್ಲಿ ಭಾರತದಲ್ಲಿ ಸಾರ್ವಕಾಲಿಕ ಎತ್ತರವಾದ 56,200 ರುಪಾಯಿ ಮುಟ್ಟಿತ್ತು.

ಯುರೋಪಿಯನ್ ಕೇಂದ್ರ ಬ್ಯಾಂಕ್ ಕಡೆ ಚಿತ್ತ

ಯುರೋಪಿಯನ್ ಕೇಂದ್ರ ಬ್ಯಾಂಕ್ ಕಡೆ ಚಿತ್ತ

ಚಿನ್ನದ ವಹಿವಾಟುದಾರರು ಯುರೋಪಿಯನ್ ಕೇಂದ್ರ ಬ್ಯಾಂಕ್ ನೀತಿ ನಿರ್ಧಾರ ಏನಾಗಬಹುದು ಎಂದು ಕಾಯುತ್ತಿದ್ದಾರೆ. ಯುರೋಪಿಯನ್ ಕೇಂದ್ರ ಬ್ಯಾಂಕ್ ನಿಂದ ಕೊರೊನಾ ಬಿಕ್ಕಟ್ಟು ಬಾಂಡ್ ಖರೀದಿ ಕಾರ್ಯಕ್ರಮದ ಹೆಚ್ಚಳ ಮತ್ತು ವಿಸ್ತರಣೆ ಆಗುವ ನಿರೀಕ್ಷೆ ಇದೆ. ಇನ್ನು ಇಟಿಎಫ್ ಹೊರಹರಿವಿನಲ್ಲಿ ಹೂಡಿಕೆದಾರರ ಆಸಕ್ತಿ ದುರ್ಬಲವಾಗಿರುವುದು ಕಂಡುಬರುತ್ತದೆ. ವಿಶ್ವದ ಅತಿ ದೊಡ್ಡ ಚಿನ್ನದ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಅಥವಾ ಚಿನ್ನದ ಇಟಿಎಫ್ ಆದ ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ ಕಳೆದ ಶುಕ್ರವಾರದಂದು 0.6% ಇಳಿಕೆ ಕಂಡು, 1,182.70 ಟನ್ ತಲುಪಿತು.

ಬೆಳ್ಳಿಗೆ ಸಿಕ್ಕಿದೆ ಬೆಂಬಲ

ಬೆಳ್ಳಿಗೆ ಸಿಕ್ಕಿದೆ ಬೆಂಬಲ

ಆದರೆ, ಬೆಳ್ಳಿಗೆ ಚೀನಾದ ಆರ್ಥಿಕತೆ ಮತ್ತು ಪ್ರಮುಖ ಆರ್ಥಿಕತೆಗಳಲ್ಲಿನ ಕೈಗಾರಿಕೆ ಚಟುವಟಿಕೆಗಳ ಚೇತರಿಕೆಯಿಂದ ಬೆಂಬಲ ಸಿಕ್ಕಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಪ್ರಮುಖ ಬೆಳವಣಿಗೆ ಅಂತ ಯಾವುದೂ ಇಲ್ಲವಾದ್ದರಿಂದ ಚಿನ್ನದ ಜತೆಗೆ ಬೆಳ್ಳಿಯ ವಹಿವಾಟಿನಲ್ಲೂ ಏರಿಳಿತ ಕಾಣಬೇಕಾಗುತ್ತದೆ. ಇಟಿಎಫ್ ಖರೀದಿ ಪ್ರಬಲವಾಗಿ ಆರಂಭವಾಗುವ ತನಕ ಸುಸ್ಥಿರವಾದ ಖರೀದಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕೊಟಕ್ ಸೆಕ್ಯೂರಿಟೀಸ್ ನಿಂದ ಅಭಿಪ್ರಾಯ ಪಡಲಾಗುತ್ತಿದೆ. ವಿಶ್ಲೇಷಕರು ಹೇಳುವ ಪ್ರಕಾರ, ಈಚಿನ ತಳಮಟ್ಟದಿಂದ ಚಿನ್ನವು ಚೇತರಿಸಿಕೊಂಡಿದೆ. ಅದಕ್ಕೆ ದುರ್ಬಲ ಯುಎಸ್ ಡಾಲರ್ ಬೆಂಬಲವೂ ಸಿಕ್ಕಿದೆ. ಉತ್ತೇಜನಾ ಕ್ರಮಗಳು ಗಟ್ಟಿಯಾದಷ್ಟೂ ಚಿನ್ನದ ಬೆಲೆ ಇನ್ನು ಮುಂದೆ ಏರಿಕೆ ಕಾಣುವಂತಾಗುತ್ತದೆ.

English summary

Gold, Silver Fall Today; Down Rs 7000 From Record High

Gold, silver fall today, December 7, 2020. Gold price down from Rs 7000 from all time high. Here is the details.
Story first published: Monday, December 7, 2020, 10:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X