ಭಾರತದಲ್ಲಿ ಗುರುವಾರ (ಅಕ್ಟೋಬರ್ 8, 2020) ಚಿನ್ನ- ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಸ್ತಬ್ಧವಾಗಿದ್ದು, ಅದನ್ನೇ ಇಲ್ಲಿನ ಚಿನ್ನ, ಬೆಳ್ಳಿ ದರಗಳು ಅನುಸರಿಸಿವೆ. ಎಂಸಿಎಕ್ಸ್ ನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ 0.15% ಇಳಿಕೆಯಾಗಿ 49,971 ರುಪಾಯಿಗೆ ವಹಿವಾಟು ನಡೆಸಿದೆ. ಆ ಮೂಲಕ ಮೂರನೇ ದಿನಕ್ಕೆ ನಷ್ಟವನ್ನು ವಿಸ್ತರಿಸಿಕೊಂಡಿದೆ.
ಎಂಸಿಎಕ್ಸ್ ನಲ್ಲಿ ಬೆಳ್ಳಿ ಫ್ಯೂಚರ್ಸ್ 0.23% ಇಳಿಕೆ ಕಂಡು, ಪ್ರತಿ ಕೇಜಿಗೆ 60,280 ರುಪಾಯಿಯಂತೆ ವಹಿವಾಟು ನಡೆಸಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರವು ಪ್ರತಿ 10 ಗ್ರಾಮ್ ಗೆ 500 ರುಪಾಯಿ ಇಳಿಕೆ ಕಂಡಿದ್ದರೆ, ಬೆಳ್ಳಿ ದರವು ಪ್ರತಿ ಕೇಜಿಗೆ 0.4 ಪರ್ಸೆಂಟ್ ಕುಸಿತ ಕಂಡಿತ್ತು.
ಸ್ಪಾಟ್ ಗೋಲ್ಡ್ ದರದಲ್ಲಿ ಸ್ವಲ್ಪ ಬದಲಾವಣೆ
ಜಾಗತಿಕ ಮಾರುಕಟ್ಟೆಯಲ್ಲಿ ಗುರುವಾರದಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಯುಎಸ್ ನಲ್ಲಿ ಕೊರೊನಾ ಆರ್ಥಿಕ ಪ್ಯಾಕೇಜ್ ನವೀಕರಣದ ಭರವಸೆ ಕಾರಣಕ್ಕೆ ಹಾಗೇ ನಿಂತುಕೊಂಡಿದೆ. ಇನ್ನು ಸ್ಪಾಟ್ ಗೋಲ್ಡ್ ದರದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಯಿತು. ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,886.69 ಇತ್ತು. ಅದಕ್ಕೂ ಮುನ್ನ, ಹಿಂದಿನ ಸೆಷನ್ ನಲ್ಲಿ 1.1% ಏರಿಕೆ ಕಂಡಿತ್ತು. ಕಳೆದ ರಾತ್ರಿ ಇಳಿಕೆ ಕಂಡ ನಂತರ ಪ್ರತಿಸ್ಪರ್ಧಿ ಕರೆನ್ಸಿಗಳ ವಿರುದ್ಧ ಡಾಲರ್ ಸೂಚ್ಯಂಕವು ಸ್ಥಿರವಾಗಿದೆ. ಇನ್ನು ಇತರ ಬೆಲೆ ಬಾಳುವ ಲೋಹಗಳ ಕಡೆಗೆ ನೋಡುವುದಾದರೆ, ಬೆಳ್ಳಿ ದರವು ಔನ್ಸ್ ಗೆ $ 23.83ರಲ್ಲಿ ಸ್ಥಿರವಾಗಿದೆ. ಪ್ಲಾಟಿನಂ 0.1% ಹೆಚ್ಚಳವಾಗಿ, $ 865.21 ಇದೆ. ಇನ್ನು ಪಲಾಡಿಯಂ $ 2,352.18 ಇದೆ.
ಟ್ರಂಪ್ ಘೋಷಣೆಯಿಂದ ಭರವಸೆ
ಯುಎಸ್ ಉತ್ತೇಜನಾ ಘೋಷಣೆಗಳ ಸಾಧ್ಯತೆ ಹೆಚ್ಚಾಗಿದೆ. ಯಾವಾಗ ಟ್ರಂಪ್ ಟ್ವೀಟ್ ಮಾಡಿ, ಏರ್ ಲೈನ್ಸ್, ಸಣ್ಣ ವ್ಯಾಪಾರಗಳಿಗೆ ಹಣ ನೀಡಬೇಕು ಮತ್ತು ಪ್ರತಿಯೊಬ್ಬರಿಗೆ ವೈಯಕ್ತಿಕವಾಗಿ $ 1200 ಅನ್ನು ಕಾಂಗ್ರೆಸ್ ಪಾಸ್ ಮಾಡಬೇಕು ಎಂದು ತಿಳಿಸಿದರೋ ಆಗಿನಿಂದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿದೆ. ನಾನಾ ಕಡೆಗಳಲ್ಲಿ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಿಸುತ್ತಿರುವುದರಿಂದ ಚಿನ್ನಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 15- 16ನೇ ತಾರೀಕಿನಂದು ನಡೆದಿದ್ದ ಯುಎಸ್ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸಭೆಯ ಮುಖ್ಯಾಂಶಗಳು ಬುಧವಾರ ಬಿಡುಗಡೆ ಆಗಿದೆ. ಫೆಡರಲ್ ರಿಸರ್ವ್ ನಿಂದ ಆಸ್ತಿ ಖರೀದಿ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಚರ್ಚೆ ಆಗಬೇಕು ಎಂದು ಯುಎಸ್ ಕೇಂದ್ರ ಬ್ಯಾಂಕ್ ನ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ತಾವು ಬಾಂಡ್ ಖರೀದಿ ಹೆಚ್ಚಿಸುವುದಕ್ಕೆ ಅಥವಾ ಬದಲಾವಣೆ ಮಾಡುವುದಕ್ಕೆ ಸಿದ್ಧರಿರುವುದಾಗಿ ಸೂಚನೆ ನೀಡಿದ್ದಾರೆ.
2020ರಲ್ಲಿ ಚಿನ್ನದ ದರವು 30% ಹೆಚ್ಚಳ
ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಹೇಳಿರುವ ಪ್ರಕಾರ, ಚಿನ್ನವು ಸರಿಯಾದ ದಿಕ್ಕು ಯಾವುದು ಎಂಬ ಕಡೆ ನೋಡುತ್ತಿದೆ. ಯುಎಸ್ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಣೆ ಬಗ್ಗೆ ಅನುಮಾನ- ಗೊಂದಲ ಇರುವುದರಿಂದ ಮಾರ್ಕೆಟ್ ನಲ್ಲಿ ಎಚ್ಚರಿಕೆ ನಡೆ ಕಾಣಿಸುತ್ತಿದೆ. 2020ರಲ್ಲಿ ಮೊದಲ ಎಂಟು ತಿಂಗಳಲ್ಲಿ ಚಿನ್ನದ ದರವು 30% ಹೆಚ್ಚಳ ಆಗಿದೆ. ಡಾಲರ್ ಮೌಲ್ಯಕ್ಕೆ ಬಲ ಬಂದ ಮೇಲೆ ಚಿನ್ನವು ಚಲನೆಯನ್ನು ಕಳೆದುಕೊಂಡಿತು. ಇನ್ನು ಈ ವಾರವಂತೂ ದರವು ಇಳಿಯುತ್ತಾ ಸಾಗಿದೆ. ವಿಶ್ಲೇಷಕರು ಹೇಳುವಂತೆ, ಚಿನ್ನದ ಬೆಲೆಗೆ ತಳಮಟ್ಟದಲ್ಲಿ ಬೆಂಬಲ ಸಿಗಲಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಮತ್ತು ಇನ್ನಷ್ಟು ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಣೆ ಮಾಡುವ ಸಾಧ್ಯತೆ ಇರುವುದು ಒಳ್ಳೆ ಸುದ್ದಿ ಆಗಲಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications