ಗೋಲ್ಡ್‌ಮನ್ ಸ್ಯಾಚ್ಸ್ ಜಿಕ್ಯೂಜಿ ಪಾರ್ಟ್‌ನರ್ಸ್ ಇಂಟರ್‌ನ್ಯಾಶನಲ್ ಆಪರ್ಚುನಿಟೀಸ್ ಫಂಡ್ ಅದಾನಿ ಪವರ್ ಲಿಮಿಟೆಡ್‌ನಲ್ಲಿ ಷೇರುಗಳನ್ನು ಖರೀದಿ ಮಾಡಿದೆ. ಭಾರತೀಯ ಷೇರು ಮಾರುಕಟ್ಟೆ ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಯುಎಸ್ ಮೂಲದ ಹೂಡಿಕೆದಾರರು 10,30,30,127 ಅದಾನಿ ಪವರ್ ಷೇರುಗಳನ್ನು ತಲಾ 279.15 ರೂಪಾಯಿ ಪಾವತಿಸಿ ಖರೀದಿಸಿದ್ದಾರೆ.
ಇದರರ್ಥ, ಗೋಲ್ಡ್‌ಮನ್ ಸ್ಯಾಕ್ಸ್ ಫಂಡ್ ಅದಾನಿ ಪವರ್‌ನಲ್ಲಿ 28,76,08,59,952.05 ರೂಪಾಯಿ ಅಥವಾ 2,876 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಸ್ಟಾಕ್ ಖರೀದಿಯ ಸುದ್ದಿಯ ಬೆನ್ನಲ್ಲೇ ಅದಾನಿ ಪವರ್ ಷೇರುಗಳು ದಲಾಲ್ ಸ್ಟ್ರೀಟ್‌ನಲ್ಲಿ ಲಾಭವನ್ನು ಕಂಡಿದೆ. ಅದಾನಿ ಪವರ್ ಷೇರು ಏರಿಕೆಗೊಂಡು ಇಂಟ್ರಾಡೇಯಲ್ಲಿ 288.5 ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಅದಾನಿ ಪವರ್‌ನ ಇತ್ತೀಚಿನ ಡೀಲ್ ವಿವರ
ಭಾರತೀಯ ವಿನಿಮಯ ಕೇಂದ್ರಗಳೊಂದಿಗೆ ಅದಾನಿ ಪವರ್ ಹಂಚಿಕೊಂಡಿರುವ ಬೃಹತ್ ಡೀಲ್ ವಿವರಗಳ ಪ್ರಕಾರ, ಗೋಲ್ಡ್‌ಮನ್ ಸ್ಯಾಚ್ಸ್ ಜಿಕ್ಯೂಜಿ ಪಾರ್ಟ್‌ನರ್ಸ್ ಇಂಟರ್‌ನ್ಯಾಶನಲ್ ಆಪರ್ಚುನಿಟೀಸ್ ಫಂಡ್ ಈ ಸಿಂಗಲ್ ಸೇಲರ್ ಸಿಂಗಲ್ ಬೈಯರ್ ಡೀಲ್ ಅನ್ನು 16ನೇ ಆಗಸ್ಟ್ 2023 ರಂದು ಮಾಡಿದೆ. 2,876 ಕೋಟಿ ರೂಪಾಯಿಯ ಡೀಲ್ ಇದಾಗಿದೆ.
ಅದಾನಿ ಪವರ್ ಷೇರುಗಳಲ್ಲಿ 16ನೇ ಆಗಸ್ಟ್ 2023 ರಂದು ಇನ್ನೂ ಕೆಲವು ಬೃಹತ್ ವ್ಯವಹಾರಗಳು ನಡೆದಿವೆ. ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಬೃಹತ್ ಡೀಲ್ ಮಾಹಿತಿಯ ಪ್ರಕಾರ, ಇತರ ಯುಎಸ್ ಮೂಲದ ಹೂಡಿಕೆದಾರ ಜಿಕ್ಯೂಜಿ ಪಾರ್ಟ್‌ನರ್ಸ್ ಎಮರ್ಜಿಂಗ್ ಮಾರ್ಕೆಟ್ಸ್ ಇಕ್ವಿಟಿ ಫಂಡ್ ಪ್ರತಿ ಷೇರಿಗೆ 279.15 ರೂಪಾಯಿ ಪಾವತಿಸಿ 4,90,30,009 ಅದಾನಿ ಪವರ್ ಷೇರುಗಳನ್ನು ಖರೀದಿಸಿದೆ. ಅಂದರೆ ಯುಎಸ್ ಮೂಲದ ಹೂಡಿಕೆದಾರರು 13,68,67,27,012.35 ರೂಪಾಯಿ ಅಥವಾ 1,368 ಕೋಟಿ ರೂಪಾಯಿ ಅದಾನಿ ಗ್ರೂಪ್‌ನ ಷೇರುಗಳನ್ನು ಖರೀದಿ ಮಾಡಿದ್ದಾರೆ.
ಅದಾನಿ ಪವರ್ ಷೇರುಗಳಲ್ಲಿ 16ನೇ ಆಗಸ್ಟ್ 2023 ರಂದು ಲಾಭವನ್ನು ಕಂಡಿದೆ. ಆಫ್ರೋ ಏಷ್ಯನ್ ಟ್ರೇಡ್ ಅಂಡ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಪ್ರತಿ ಷೇರಿಗೆ 279.18 ರೂಪಾಯಿಯಂತೆ 26,54,85,675 ಅದಾನಿ ಪವರ್ ಷೇರುಗಳನ್ನು ಮಾರಾಟ ಮಾಡಿದೆ. ಇದರರ್ಥ ಸಾಂಸ್ಥಿಕ ಹೂಡಿಕೆದಾರರು 74,11,82,90,746.5 ಅಥವಾ ಸುಮಾರು 7,412 ಕೋಟಿ ರೂಪಾಯಿಯ ಅದಾನಿ ಪವರ್ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಅದಾನಿ ಸಂಸ್ಥೆಯ ಇತರೆ ಷೇರುಗಳು ಹೇಗಿದೆ ನೋಡಿ
ಈ ವರದಿಯನ್ನು ಬರೆಯುವ ಸಂದರ್ಭದಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಸುಮಾರು ಶೇಕಡ 1.33ರಷ್ಟು ಏರಿಕೆಯಾಗಿ 2,477.50 ರೂಪಾಯಿ ಆಗಿದೆ. ಅದಾನಿ ಪೋರ್ಟ್ಸ್ ಶೇಕಡ 4.43ರಷ್ಟು ಹೆಚ್ಚಳವಾಗಿ 810.50 ರೂಪಾಯಿಗೆ ತಲುಪಿದೆ. ಅದಾನಿ ಪವರ್ ಶೇಕಡ 2.02 ರಷ್ಟು ಜಿಗಿದು, 285.55 ಬೆಲೆಯಲ್ಲಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 0.23ರಷ್ಟು ಏರಿಕೆಯಾಗಿ 820.00 ರೂಪಾಯಿ ಆಗಿದೆ. ಅದಾನಿ ಟೋಟಲ್ ಗ್ಯಾಸ್ ಶೇಕಡ 0.32ರಷ್ಟು ಇಳಿಕೆಯಾಗಿ 633.50 ರೂಪಾಯಿ ಆಗಿದೆ.
ಅದಾನಿ ಗ್ರೀನ್ ಎನರ್ಜಿ ಶೇಕಡ 1.80ರಷ್ಟು ಕುಸಿತ ಕಂಡಿದ್ದು, 931.45 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮರ್ ಸುಮಾರು ಶೇಕಡ 0.86ರಷ್ಟು ಇಳಿಕೆಯಾಗಿ 366.90 ರೂಪಾಯಿ ಆಗಿದೆ. ಸಮೂಹದ ಮಾಧ್ಯಮ ಸ್ಟಾಕ್ ಎನ್‌ಡಿಟಿವಿ ಶೇಕಡ 0.92ರಷ್ಟು ಹೆಚ್ಚಳವಾಗಿ 220.05 ರೂಪಾಯಿ ಆಗಿದೆ. ಎರಡು ಸಿಮೆಂಟ್ ಸ್ಟಾಕ್‌ಗಳಾದ ಎಸಿಸಿ ಶೇಕಡ 0.30ರಷ್ಟು ಜಿಗಿದು 1,897.80 ರೂಪಾಯಿ ಆಗಿದೆ. ಅಂಬುಜಾ ಸಿಮೆಂಟ್ಸ್ ಶೇಕಡ 1.82ರಷ್ಟು ಏರಿಕೆಯಾಗಿ, 445.15 ರೂಪಾಯಿ ಆಗಿದೆ.


Click it and Unblock the Notifications