For Quick Alerts
ALLOW NOTIFICATIONS  
For Daily Alerts

EPFO ಬಡ್ಡಿ ಪಾವತಿಯ 8.5% ಇಪಿಎಫ್ ಖಾತೆದಾರರಿಗೆ ಜಮೆ

|

ಇಪಿಎಫ್ ಒ ಚಂದಾದಾರ ಖಾತೆಗೆ 2019- 20ನೇ ಸಾಲಿನ ಬಡ್ಡಿ 8.15% ಜಮೆ ಮಾಡಲು ಬುಧವಾರ ನಡೆದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಬಾಕಿ 0.35% ಬಡ್ಡಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿ ಜಮೆ ಮಾಡಲು ತೀರ್ಮಾನ ಮಾಡಲಾಯಿತು.

 

ಈ ನಡೆಯಿಂದ 6 ಕೋಟಿ ಮಂದಿ ಇಪಿಎಫ್ ಚಂದಾದಾರರಿಗೆ ಅನುಕೂಲ ಆಗಲಿದೆ. ಬಾಕಿ 0.35% ಬಡ್ಡಿಯ ಕೊರತೆ ನೀಗಿಸಲು ಇಟಿಎಫ್ ಹೂಡಿಕೆಯನ್ನು ಮಾರಾಟ ಮಾಡುವುದಕ್ಕೆ ಇಪಿಎಫ್ ಒ ನಿರ್ಧಾರ ಮಾಡಿತ್ತು. ಅದು ಈ ವರ್ಷದ ಮಾರ್ಚ್ ನಲ್ಲೇ ಆಗಬೇಕಿತ್ತು. ಆದರೆ ಮಾರುಕಟ್ಟೆಯಲ್ಲಿನ ಏರಿಳಿತದ ಕಾರಣಕ್ಕೆ ಸಾಧ್ಯವಾಗಿರಲಿಲ್ಲ.

EPFO ಬಡ್ಡಿ ಪಾವತಿಯ 8.15% ಇಪಿಎಫ್ ಖಾತೆದಾರರಿಗೆ ಜಮೆ

ಕಳೆದ ಆರ್ಥಿಕ ವರ್ಷದ ಬಡ್ಡಿ ಪಾವತಿ ವಿಚಾರದ ಬಗ್ಗೆ ತೀರ್ಮಾನ ಮಾಡಲು ಟ್ರಸ್ಟಿಗಳ ಸಭೆಯು ಮತ್ತೊಮ್ಮೆ ಸೇರಲಿದೆ. ಈ ಮಂಡಳಿಯ ಅಧ್ಯಕ್ಷತೆಯನ್ನು ಕಾರ್ಮಿಕ ಸಚಿವ ಸಂತೋಷ್ ಗಂಗ್ವರ್ ವಹಿಸಿದ್ದು, 2019- 20ನೇ ಸಾಲಿಗೆ 8.5% ಬಡ್ಡಿ ಪಾವತಿಗೆ ಈ ವರ್ಷದ ಮಾರ್ಚ್ ನಲ್ಲಿ ನಡೆದ ಸಭೆಯಲ್ಲೇ ತೀರ್ಮಾನಿಸಲಾಗಿದೆ.

English summary

Good News: EPFO To Part Credit Interest Into EPF Subscribers Account For FY 2020

EPFO Central Board of Trustees meet held today, the decision has been taken to credit 8.15% interest to subscribers account for the FY 2019-20. Remaining 0.35% interest shall be credited in December.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X