ಭಾರತೀಯ ರೈಲ್ವೇ ಇಲಾಖೆ (Indian Railways), ಗ್ರಾಹಕರ ಅನುಕೂಲಕ್ಕಾಗಿ ಸದಾ ಏನಾದರೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಇರುತ್ತೆ. ಇದೀಗ ರೈಲು ಪ್ರಯಾಣಿಕರಿಗೆ ಬಂಪರ್ ಸುದ್ದಿಯೊಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಪ್ರಯಾಣ ಮಾಡೋರಿಗೆ ಅಗತ್ಯವಾಗಿ ಬೇಕಾದ ಸೇವೆ ಇದು. ಹೌದು, ಇದೀಗ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ (Bengaluru-Hubballi) ಪ್ರತಿದಿನ ಸಂಚಾರ ಮಾಡುತ್ತಿದ್ದ ವಿಶೇಷ ರೈಲುಗಳು, ಇನ್ಮುಂದೆ ಖಾಯಂ ರೈಲುಗಳಾಗಿ ಸಂಚಾರ ನಡೆಸಲಿದೆ. ಅಷ್ಟೇ ಅಲ್ಲದೇ ಈ ರೈಲುಗಳ ಟಿಕೆಟ್ ದರವೂ ಕಡಿಮೆಯಾಗಲಿದೆ.

ಬೆಂಗಳೂರು ಬರುವವರಿಗೆ ಗುಡ್ ನ್ಯೂಸ್!
ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಇದೀಗ ಭಾರತೀಯ ರೈಲ್ವೇ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜಧಾನಿ ಬೆಂಗಳೂರಿಗೆ ಬರುವ ಜನರಿಗಾಗಿ ಅಥವಾ ಬೆಂಗಳೂರಿನಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರಯಾಣ ಮಾಡುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸೂಪರ್‌ಫಾಸ್ಟ್ ರೈಲುಗಳು ಖಾಯಂ ರೈಲುಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.
ವಿಶೇಷ ಸೇವೆಯಲ್ಲ, ಖಾಯಂ ಸೇವೆ!
ಕಳೆದ ಕೆಲವು ವರ್ಷಗಳಿಂದ ವಿಶೇಷ ಸೇವಾ ಕೋಟಾದಡಿ ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ರೈಲುಗಳು ಸೇವೆ ಸಲ್ಲಿಸುತ್ತಿತ್ತು. ಅಲ್ಲದೇ ಇದರ ಟಿಕೆಟ್ ದರ ಕೂಡಾ ಸಾಮಾನ್ಯ ಟಿಕೆಟ್‌ಗಿಂದ ಹೆಚ್ಚಿತ್ತು. ಆದ್ರೆ ಇದೀಗ ಟಿಕೆಟ್ ದರವೂ ಇಳಿಕೆಯಾಗಲಿದೆ, ಅಲ್ಲದೆ ಜನರಿಗೆ ನಿತ್ಯ ಸವೆ ನೀಡಲಿದೆ.
ಪ್ರಯಾಣಿಕರ ಬೇಡಿಕೆಗೆ ಅಸ್ತು ಎಂದು ರೈಲ್ವೇ ಇಲಾಖೆ!
ಬೆಂಗಳೂರು ಮತ್ತು ಹುಬ್ಬಳ್ಳಿ ಸಂಪರ್ಕಿಸುವ ಸೂಪರ್ ಫಾಸ್ಟ್ ರೈಲನ್ನು ಖಾಯಂ ಸೇವೆ ನೀಡುವಂತೆ ಮಾಡಬೇಕೆಂದು ಹಲವು ದಿನಗಳಿಂದ ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಕೊನೆಗೂ ಪ್ರಯಾಣಿಕರ ಬೇಡಿಕೆಗೆ ಅಸ್ತು ಎಂದ ರೈಲ್ವೇ ಇಲಾಖೆ, ಡಿಸೆಂಬರ್ 9 ರಿಂದ ಖಾಯಂ ಸೇವೆಯನ್ನು ನೀಡಲಿದೆ ಎಂದು ಹೇಳಿದೆ
ಬೆಂಗಳೂರು-ಹುಬ್ಬಳ್ಳಿ ಸೂಪರ್‌ಫಾಸ್ಟ್ ರೈಲಿನ ನಿಲುಗಡೆ ಸ್ಥಳಗಳು!
- ಬೆಂಗಳೂರು-ಹುಬ್ಬಳ್ಳಿ (ಆರಂಭ-ಅಂತ್ಯ)
- ತುಮಕೂರು
- ಅರಸೀಕೆರೆ
- ಬೀರೂರು
- ದಾವಣಗೆರೆ
- ರಾಣಿಬೆನ್ನೂರು
- ಹಾವೇರಿ
ರೈಲಿನ ವೇಳಾಪಟ್ಟಿ
- ಇನ್ನು ಕೆಎಸ್‌ಆರ್ ಬೆಂಗಳೂರು ರೈಲ್ವೇ ನಿಲ್ದಾಣದಿಂದ ರಾತ್ರಿ 11:55 ಕ್ಕೆ ಹೊರಟರೆ, ಮುಂಜಾನೆ 4:10 ಕ್ಕೆ ದಾವಣಗೆರೆ, 5:10 ಕ್ಕೆ ಹಾವೇರಿ, 7:30 ಕ್ಕೆ ಹುಬ್ಬಳ್ಳಿಗೆ ರೀಚ್ ಆಗುತ್ತದೆ.
- ಅದೇ ರೀರತಿ ಹುಬ್ಬಳ್ಳಿ ರೈಲ್ವೇ ನಿಲ್ದಾಣದಿಂದ ರಾತ್ರಿ 11:15 ಕ್ಕೆ ಹೊರಟರೆ, ಮಧ್ಯರಾತ್ರಿ 1:10 ಕ್ಕೆ ದಾವಣಗೆರೆ, 2:45ಕ್ಕೆ ಬೀರೂರು, ಬೆಳಿಗ್ಗೆ 6:50 ಕ್ಕೆ ಬೆಂಗಳೂರು ತಲುಪುತ್ತದೆ.
ಇನ್ನು ರೈಲು ಸಂಖ್ಯೆಯಲ್ಲೂ ಬದಲಾವಣೆಯ ಮಾಡಲಾಗಿದ್ದು, ಹಿಂದೆ 07340-07339 ನಂಬರ್ ಹೊಂದಿದ್ದ ಈ ಸೂಪರ್‌ಫಾಸ್ಟ್ ರೈಲು, ಇನ್ಮುಂದೆ 20687-20688 ನಂಬರ್ ಹೊಂದಿರಲಿದೆ ಎಂದು ಹೇಳಲಾಗಿದೆ.
ಸೂಪರ್ ಫಾಸ್ಟ್ ಸ್ಲೀಪರ್ ರೈಲಿನ ದರ ಇಳಿಕೆ!
| ನಿಲ್ದಾಣಗಳು | ಹಳೆಯ ದರ | ಹೊಸ ದರ |
| ಬೆಂಗಳೂರು-ದಾವಣಗೆರೆ | 400 ರೂ. | 250 ರೂ. |
| ಬೆಂಗಳೂರು-ಹುಬ್ಬಳ್ಳಿ | 405 ರೂ. | 315 ರೂ. |
| ಬೆಂಗಳೂರು-ಹಾವೇರಿ | 405 ರೂ. | 280 ರೂ. |
| ಬೆಂಗಳೂರು-ರಾಣಿಬೆನ್ನೂರು | 400 ರೂ. | 270 ರೂ. |
| ಬೆಂಗಳೂರು-ಬೀರೂರು | 360 ರೂ. | 200 ರೂ. |
| ಬೆಂಗಳೂರು-ಅರಸೀಕೆರೆ | 280 ರೂ. | 180 ರೂ. |
| ಬೆಂಗಳೂರು-ತುಮಕೂರು | 250 ರೂ. | 180 ರೂ. |
ಎಸಿ ರೈಲಿನ ಟಿಕೆಟ್ ದರ!
| ನಿಲ್ದಾಣಗಳು | ಹಳೆಯ ಟಿಕೆಟ್ ದರ | ಹೊಸ ಟಿಕೆಟ್ ದರ |
| ಬೆಂಗಳೂರು - ದಾವಣಗೆರೆ | 1075 ರೂ. | 640 ರೂ. |
| ಬೆಂಗಳೂರು-ಹುಬ್ಬಳ್ಳಿ | 1050 ರೂ. | 810 ರೂ. |
| ಬೆಂಗಳೂರು-ಹಾವೇರಿ | 1050 ರೂ. | 725 ರೂ. |
| ಬೆಂಗಳೂರು-ರಾಣಿಬೆನ್ನೂರು | 1050 ರೂ. | 690 ರೂ. |
| ಬೆಂಗಳೂರು-ಬೀರೂರು | 750 ರೂ. | 560 ರೂ. |


Click it and Unblock the Notifications