ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ (New Year) ಬರಲಿದೆ. 2025 ಕಳೆದು 2026ರ ಆಗಮನಕ್ಕೆ ಇನ್ನೇನು 10 ದಿನ ಮಾತ್ರ ಬಾಕಿದೆ. ಈ ಮಧ್ಯೆ ಕ್ರಿಸ್‌ಮಸ್ ಹಬ್ಬ ಕೂಡಾ ಬರಲಿದೆ. ಹಬ್ಬ ಬರುತ್ತಿದ್ದಂತೆ ಇಕಾಮರ್ಸ್ ಕಂಪನಿಗಳು ಹೊಸ ಹೊಸ ಆಫರ್ಸ್ (KSRTC Offer) ಬಿಡುಗಡೆ ಮಾಡುತ್ತದೆ. ಆದ್ರೆ ಇದೀಗ ಕೆಎಸ್‌ಆರ್‌ಟಿಸಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ರಸ್ತೆಗಿಳಿಯಲಿದೆ 1000 ವಿಶೇಷ ಬಸ್‌ಗಳು!
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ಕೆಎಸ್‌ಆರ್‌ಟಿಸಿ 1000 ವಿಶೇಷ ಬಸ್‌ಗಳನ್ನು ನೀಡುತ್ತಿದೆ. ಕೆಎಸ್‌ಆರ್‌ಟಿಸಿ ನಿರ್ಧಾರದ ಪ್ರಕಾರ, ಡಿಸೆಂಬರ್ 19, 20 ಮತ್ತು 24 ರಂದು ಬೆಂಗಳೂರಿನಿಂದ ವಿವಿಧ ನಗರಗಳಿಗೆ ತೆರಳುವ ಹಾಗೂ ಡಿಸೆಂಬರ್ 26 ಮತ್ತು 28 ರಂದು ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳು ಸೇವೆ ಸಲ್ಲಿಸಲಿದೆ ಎಂದು ವರದಿಯಾಗಿದೆ.
ಎಲ್ಲೆಲ್ಲಿಗೆ ವಿಶೇಷ ಬಸ್ ಸಂಚಾರ
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರೋಡ್‌ನ ಬಸ್ ನಿಲ್ದಾಣಗಳಿಂದ ಬಸ್‌ಗಳು ಸಂಚರಿಸಲಿದೆ ಎಂದು ಹೇಳಲಾಗಿದೆ. ಆ ಪ್ರಕಾರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಶಿವಮೊಗ್ಗ, ಕುಂದಾಪುರ, ಮಂಗಳೂರು, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕರ್ಣ, ವಿಜಯಪುರ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೀದರ್, ಯಾದಗಿರಿ, ಪಿರಿಯಾಪಟ್ಟಣ, ಹುಣಸೂರು, ಮೈಸೂರು ಕುಶಾಲನಗರ, ತಿರುಪತಿ, ಹೈದರಾಬಾದ್, ವಿರಾಜಪೇಟೆ, ಮಡಿಕೇರಿ, ವಿಜಯವಾಡ ಸಹಿತ ವಿವಿಧೆಡೆ ಹೋಗುವ ಪ್ರಯಾಣಿಕರಿಗಾಗಿ ವಿಶೇಷ ಬಸ್‌ಗಳು ಸಂಚಾರ ಮಾಡಲಿದೆ ಎಂದು ಹೇಳಲಾಗಿದೆ.
ಪ್ರಯಾಣಿಕರಿಗೆ ಸಲಹೆ:
ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಿಬುಕ್ ಮಾಡಿ ಸೀಟುಗಳನ್ನು ಕಾಯ್ದಿರಿಸುವ ಅವಕಾಶ ನೀಡಲಾಗಿದೆ. ಅದಕ್ಕಾಗಿ www.ksrtc.karnataka.gov.in ವೆಬ್‌ಸೈಟ್ ಮೂಲಕ ಇ-ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನೂ ನೀಡಲಾಗಿದೆ.
ವಿಶೇಷ ಬಸ್, ವಿಶೇಷ ಆಫರ್
ಇನ್ನು ಕೆಎಸ್‌ಆರ್‌ಟಿಸಿ ವಿಶೇಷ ಬಸ್ ನೀಡಿದ್ದಲ್ಲದೇ, ವಿಶೇಷ ಆಫರ್ ಕೂಡ ನೀಡಲಾಗಿದೆ. ಅಂದರೆ 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಪ್ರಿ ಟಿಕೆಟ್ ಬುಕ್ ಮಾಡಿದರೆ, ಶೇ.5% ರಷ್ಟು ರಿಯಾಯಿತಿ ಸಿಗಲಿದೆ. ಅಲ್ಲದೇ ಹೋಗುವ ಮತ್ತು ರಿಟರ್ನ್ ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ, ರಿಟರ್ನ್ ಟಿಕೆಟ್‌ನಲ್ಲಿ ಶೇ.10% ರಷ್ಟು ರಿಯಾಯಿತಿ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಹೊಸ ವರ್ಷ, ಕ್ರಿಸ್‌ಮಸ್ ಹಬ್ಬದ ಸಂದರ್ಭಗಳಲ್ಲಿ ಬಹುತೇಕರು ದೂರದ ಊರಿಂದ ತಮ್ಮ ತಮ್ಮ ಊರುಗಳಿಗೆ ಅಥವಾ ಟ್ರಿಪ್ ಪ್ಲಾನ್ ಮಾಡುತ್ತಾರೆ. ಆದ್ರೆ ಇದೀಗ ಹೊಸ ವರ್ಷದ ಪ್ರಯುಕ್ತ ಕರ್ನಾಟಕದ ಟ್ರಾವೆಲರ್ಸ್‌ಗಳಿಗೆ ಕೆಎಸ್‌ಆರ್‌ಟಿಸಿ ಬಂಪರ್ ಸುದ್ದಿ ನೀಡಿದೆ. ಆ ಮೂಲಕ ಕಡಿಮೆ ದರದಲ್ಲಿ, ಕೆಎಸ್‌ಆರ್‌ಟಿಸಿ ಮೂಲಕ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಅಲ್ಲದೇ ಹಬ್ಬದ ಸಮಯದಲ್ಲಿ ಮಾತ್ರ ಈ ಸೇವೆ ಲಭ್ಯವಿರುವುದರಿಂದ ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿ ಪಡೆದುಕೊಂಡು ಹೋದರೆ ಉತ್ತಮ.


Click it and Unblock the Notifications