ರೈಲಿನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಕಾಡುವ ಒಂದು ಸಮಸ್ಯೆ ಆಹಾರ. ಪ್ರಯಾಣಕ್ಕೂ ಮುನ್ನವೇ ಪ್ರಯಾಣಿಕ ತನ್ನ ಇಷ್ಟದ ಆಹಾರವನ್ನು ಪ್ಯಾಕ್ ಮಾಡಿಸಿಕೊಂಡು ಟ್ರೈನ್ ಹಿಡಿಯಬೇಕು. ಇಲ್ಲದೇ ಇದ್ದಲ್ಲಿ ಅಲ್ಲಿ ಏನು ಸಿಗುತ್ತದೋ ಅದನ್ನು ಸೇವಿಸಬೇಕಾದ ಪರಿಸ್ಥಿತಿ. ಆದರೆ ಈಗ ಪ್ರಯಾಣಿಕರಿಗೆ IRCTC ಸಿಹಿ ಸುದ್ದಿ ನೀಡಿದೆ.
ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಪ್ರಯಾಣಿಕರಿಗೆ ಪೂರ್ವ-ಆರ್ಡರ್ ಮಾಡಿದ ಆಹಾರವನ್ನು ತಲುಪಿಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸ್ವಿಗ್ಗಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. IRCTC ಯ ಈ ಹೆಜ್ಜೆಯೊಂದಿಗೆ, ಪ್ರಯಾಣಿಕರು ತಮ್ಮ ನೆಚ್ಚಿನ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಸೇವೆಗಳನ್ನು ಆರಂಭದಲ್ಲಿ ನಾಲ್ಕು ರೈಲು ನಿಲ್ದಾಣಗಳಲ್ಲಿ ಪರಿಚಯಿಸಲಾಗುತ್ತಿದೆ. ಇದರ ಸಾಧಾಕ ಬಾಧಕಗಳನ್ನು ಅರಿತ ನಂತರ ಇದನ್ನು ವಿಸ್ತರಿಸಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ. IRCTC ಪ್ರಕಾರ, ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಫುಡ್ಸ್‌ನ ಮಾತೃ ಸಂಸ್ಥೆಯಾದ ಬಂಡಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗಿನ ಒಪ್ಪಂದದ ಮಾಡಿಕೊಳ್ಳಲಾಗಿದೆ. ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ರೈಲು ನಿಲ್ದಾಣಗಳಲ್ಲಿ ಮುಂಗಡ ಬುಕ್ ಮಾಡಿದ ಊಟಗಳ ವಿತರಣೆಯ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.
ಮತ್ತೆ ಯಾರ ಜೊತೆ ಒಪ್ಪಂದ
Swiggy ಸಹಿ ಮಾಡಿದ ಒಪ್ಪಂದದ ಅಡಿಯಲ್ಲಿ, ಮೊದಲ ಹಂತ ಪೂರ್ಣಗೊಂಡ ನಂತರ, ಈ ಸೇವೆಗಳನ್ನು ಆಯ್ದ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು. ಕೆಲವು ತಿಂಗಳ ಹಿಂದೆ, IRCTC ವಿವಿಧ ರೈಲು ನಿಲ್ದಾಣಗಳಲ್ಲಿ ಮುಂಗಡ-ಆರ್ಡರ್ ಮಾಡಿದ ಆಹಾರವನ್ನು ಪೂರೈಸಲು ಮತ್ತು ತಲುಪಿಸಲು ಆಹಾರ ವಿತರಣಾ ಅಪ್ಲಿಕೇಶನ್ ಝೊಮಾಟೊ ಜೊತೆ ಪಾಲುದಾರಿಕೆ ಹೊಂದಿತ್ತು. ಅಕ್ಟೋಬರ್‌ನಲ್ಲಿ ಘೋಷಿಸಲಾದ ಪಾಲುದಾರಿಕೆಯ ಸಮಯದಲ್ಲಿ, ರೈಲು ಪ್ರಯಾಣಿಕರು ನವದೆಹಲಿ, ಪ್ರಯಾಗರಾಜ್, ಕಾನ್ಪುರ, ಲಕ್ನೋ ಮತ್ತು ವಾರಣಾಸಿ ಸೇರಿದಂತೆ ಆಯ್ದ ನಿಲ್ದಾಣಗಳಲ್ಲಿ ಸೇವೆಗಳನ್ನು ಲಭ್ಯ.
ಆಹಾರ ವಿತರಣಾ ಅಪ್ಲಿಕೇಶನ್ Swiggy ಮತ್ತು IRCTC ನಡುವಿನ ಒಪ್ಪಂದದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ವರ್ಷ ಷೇರು ಮಾರುಕಟ್ಟೆ ಪ್ರವೇಶಿಸಲು ಸ್ವಿಗ್ಗಿ ಸಿದ್ಧತೆ ನಡೆಸಿದೆ.

IRCTC ಇ-ಕ್ಯಾಟರಿಂಗ್ ಪೋರ್ಟಲ್ ಬಳಸಿ ಆಹಾರವನ್ನು ಆರ್ಡರ್ ಮಾಡಿ
ಮೊದಲನೆಯದಾಗಿ, ಪ್ರಯಾಣಿಕರು ತಮ್ಮ PNR ಅನ್ನು IRCTC ಇ-ಕ್ಯಾಟರಿಂಗ್ ಪೋರ್ಟಲ್‌ನಲ್ಲಿ ನಮೂದಿಸಿ ಒಂದು ಔಟ್ಲೆಟ್ ಆಯ್ಕೆಮಾಡಿ
ನಿಮ್ಮ ಆಯ್ಕೆಯ ಆಹಾರವನ್ನು ಆಯ್ಕೆ ಮಾಡುವ ಮೂಲಕ ಆರ್ಡರ್ ಅನ್ನು ಪೂರ್ಣಗೊಳಿಸಿ ಮತ್ತು ನಂತರ ಆನ್‌ಲೈನ್‌ನಲ್ಲಿ ಪಾವತಿಸಿ ಅಥವಾ ಕ್ಯಾಶ್ ಆನ್ ಡಿಲೇವರಿ ನಿಗದಿಪಡಿಸಿ
ನಿಮ್ಮ ಆಸನಕ್ಕೆ ಆಹಾರವನ್ನು ತಲುಪಿಸಲಾಗುತ್ತದೆ.


Click it and Unblock the Notifications