ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದ ಗ್ರಾಹಕರಿಗೆ ಶುಭ ಸುದ್ದಿ ಇದು. MCLR ಅಥವಾ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ ಗೆ ಜೋಡಣೆಯಾದ ವಿವಿಧ ರೀಟೇಲ್ ಖಾತೆಗಳ ಇಎಂಐ ಇನ್ನೇನು ಕಡಿಮೆ ಆಗಲಿದೆ. ಸದ್ಯಕ್ಕೆ ಇರುವ 1 ವರ್ಷದ ದರವನ್ನು 6 ತಿಂಗಳ MCLR ಆಗಿ ಬದಲಾಯಿಸುವುದಕ್ಕೆ ನಿರ್ಧರಿಸಿದೆ.
ಈ ದರ ಕಡಿತದಿಂದ 8 ಲಕ್ಷ ಕೋಟಿ ರುಪಾಯಿ ಮೊತ್ತದ ಸಾಲದ ಪೋರ್ಟ್ ಫೋಲಿಯೋ ಮೇಲೆ ಪರಿಣಾಮ ಆಗಲಿದೆ. ಹೊಸದಾಗಿ ಸಾಲ ಪಡೆಯುವವರಿಗೆ ಈ ದರವು ಬಾಹ್ಯ ಬೆಂಚ್ ಮಾರ್ಕ್ ದರಕ್ಕೆ ಸೇರಿಕೊಳ್ಳುತ್ತದೆ. ಸತತವಾಗಿ ದರ ಕಡಿತ ಆಗುತ್ತಿರುವುದರ ಅನುಕೂಲ ಹೊಸ ಗ್ರಾಹಕರಿಗೆ ಸಿಗಲಿದ್ದು, ಈಗಿನ MCLR ಗ್ರಾಹಕರು ಬದಲಾವಣೆ ದಿನಾಂಕಕ್ಕೆ ಕಾಯಬೇಕಾಗುತ್ತದೆ ಎಂದು ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದ್ದಾರೆ.
ಎರಡು ತಿಂಗಳಿಗೊಮ್ಮೆ ದರ ಕಡಿತ
ಪ್ರತಿ ಎರಡು ತಿಂಗಳಿಗೊಮ್ಮೆ ದರ ಕಡಿತ ಆಗುವಾಗ ಗ್ರಾಹಕರು ದರ ಬದಲಾವಣೆ ದಿನಾಂಕಕ್ಕೆ ಕಾಯಬೇಕು. ಆದ್ದರಿಂದ ಬೆಂಚ್ ಮಾರ್ಕ್ ಅನ್ನು ಆರು ತಿಂಗಳ MCLRಗೆ ಬದಲಿಸಲಾಗಿದೆ. ಈ ಹಿಂದೆ ಎಸ್ ಬಿಐ ಗ್ರಾಹಕರಿಗೆ ಸಾಲದ ಬಡ್ಡಿ ದರವು ವರ್ಷಕ್ಕೆ ಒಂದೇ ಸಲ ಬದಲಾವಣೆ ಆಗುತ್ತಿತ್ತು.
ಯಾರಿಗೆ ಇದರಿಂದ ಅನುಕೂಲ?
ಇನ್ನು ಯಾರು ಫ್ಲೋಟಿಂಗ್ ಬಡ್ಡಿ ದರದ ಸಾಲ ಪಡೆದಿರುತ್ತಾರೋ ಅಂಥವರಿಗೆ ಈಗಿನ ಬದಲಾವಣೆಯಿಂದ ಅನುಕೂಲ ಆಗುತ್ತದೆ. ಆದರೆ ಅಲ್ಪಾವಧಿ ಸಾಲ ಪಡೆದವರು ಅಥವಾ ಫಿಕ್ಸೆಡ್ ದರದ ಸಾಲ ಪಡೆದಿರುತ್ತಾರೆ ಅಂಥವರಿಗೆ ಅನುಕೂಲ ಆಗುವುದಿಲ್ಲ. ರಿನೀವಲ್ ಗೆ ಆರು ತಿಂಗಳ MCLR ಅನುಸರಿಸಲಾಗುತ್ತದೆ. ಸಣ್ಣ ಪ್ರಮಾಣದ ವೆಚ್ಚದೊಂದಿಗೆ ಬದಲಾವಣೆ ಮಾಡಿಕೊಳ್ಳಬಹುದು.
ಸದ್ಯಕ್ಕೆ ಆರು ತಿಂಗಳ MCLR 6.95 ಪರ್ಸೆಂಟ್
ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರು ತಿಂಗಳ MCLR 6.95 ಪರ್ಸೆಂಟ್ ಇದೆ. ಒಂದು ವರ್ಷದ MCLR 7% ಇದೆ. ಆದ್ದರಿಂದ ಆರು ತಿಂಗಳ MCLR ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ನೇರವಾಗಿಯೇ ಸಾಲದ ಅವಧಿಯಲ್ಲಿ ಕಡಿಮೆ ಆಗುತ್ತದೆ. ಅಂದ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 70%ರಷ್ಟು ಗ್ರಾಹಕರ ಲೋನ್ MCLR ದರಕ್ಕೆ ಜೋಡಣೆ ಆಗಿದೆ. ಆ ಕಾರಣಕ್ಕೆ ದೊಡ್ಡ ಸಂಖ್ಯೆಯ ಗ್ರಾಹಕರಿಗೆ ಅನುಕೂಲ ಆಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications