ಹಿರಿಯ ನಾಗರಿಕರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ಕೊಟ್ಟಿದೆ. ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಹೌದು,ಕೇಂದ್ರ ಬಜೆಟ್ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿರಿಯ ನಾಗರೀಕರಿಗೆ ಟಿಡಿಎಸ್ ವಿನಾಯಿತಿ ನೀಡಿದೆ. ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ 50,000 ರೂ.ಗಳಿಂದ 100,000 ರೂ.ಗೆ ದ್ವಿಗುಣಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಿರಿಯ ನಾಗರಿಕರಿಗೆ ಬಜೆಟ್‌ನಲ್ಲಿ ಸಿಕ್ಕ ಪರಿಹಾರಗಳೇನು?
* ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ವಿನಾಯಿತಿಯನ್ನು ನೀಡಲಾಗಿದೆ.
* 36 ಜೀವ ರಕ್ಷಕ ಔಷಧಿಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ
* ದೇಶದಲ್ಲಿ 200 ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ನಿರ್ಮಾಣ
* ವೈದ್ಯಕೀಯ ಉಪಕರಣಗಳು ಮತ್ತು ಕ್ಯಾನ್ಸರ್ ಔಷಧಿಗಳು ದರ ಕಡಿಮೆ
* ಆರು ಜೀವರಕ್ಷಕ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.5 ಕಡಿತಗೊಳಿಸಲಾಗಿದೆ.
ಸೇವಿಂಗ್ಸ್ ಪ್ಲಾನ್ಗಳಿಗೆ ಇಂಟ್ರೆಸ್ಟ್ ಇನ್ಕಮ್ ನಿಯಮಗಳ ಮೇಲೆ ಹೆಚ್ಚಿನ ತೆರಿಗೆ ನೀಡಬೇಕಾಗಿತ್ತು.ಈ ತೆರಿಗೆ ಮೇಲಿನ ವಿನಾಯಿತಿ ಮಿತಿಯನ್ನು ಸಚಿವರು ಕಡಿಮೆ ಮಾಡಿದ್ದಾರೆ.ಇದರಿಂದ ಅನೇಕ ಹಿರಿಯ ನಾಗರಿಕರಿಗೆ ಅನುಕೂವಾಗುತ್ತದೆ.
ಈಗ 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕಟ್ಟಂಗಿಲ್ಲ
ಬಜೆಟ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಬಜೆಟ್ ದೊಡ್ಡ ಪರಿಹಾರವನ್ನು ನೀಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯ ಪ್ರಕಾರ, ವಾರ್ಷಿಕ ಆದಾಯ 12 ಲಕ್ಷದವರೆಗಿನ ಉದ್ಯೋಗಿಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
ಈ ಬಾರಿ ಯಾವುದು ಅಗ್ಗವಾಗಲಿದೆ?
ಈ ವರ್ಷ ಎಲ್ಇಡಿ ಟಿವಿಗಳ ಮೇಲಿನ ಸುಂಕಗಳು ಇಳಿಕೆಯಾಗಿವೆ.ಹಾಗೆ ಈ ಬಾರಿ ಪ್ರಮುಖವಾಗಿ ಕ್ಯಾನ್ಸರ್ ಔಷಧಗಳ ಮೆಲಿನ ತೆರಿಗೆಗಳು ಇಳಿಕೆಯಾಗಿವೆ. ಕ್ಯಾನ್ಸರ್ ಕಾಯಿಲೆ ಹೆಚ್ಚುತ್ತಿರುವ ಸಮಯದಲ್ಲಿ ಇದು ಮಹತ್ವದ ಬದಲಾವಣೆಯಾಗಿದೆ. ಕ್ಯಾನ್ಸರ್‌ನ 36 ಜೀವ ರಕ್ಷಕ ಔಷಧಿಗಳ ಮೇಲಿನ ಕಸ್ಟಮ್ ಸುಂಕಗಳ ಮೇಲೆ ಸಂಪೂರ್ಣ ವಿನಾಯಿತಿ ನೀಡಲಾಗದೆ.
ಅಲ್ಲದೆ ಈ ಬಾರಿ ಮೊಬೈಲ್ ಮತ್ತು ಚಾರ್ಜರ್ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಕೂಡ ಇಳಿಕೆಯಾಗಿದೆ. -ಹಾಗೆ ಸ್ವದೇಶಿ ಬಟ್ಟೆಗಳ ಮೇಲಿನ ತೆರಿಗೆಯನ್ನ ಇಳಿಕೆ ಮಾಡಲಾಗಿದೆ. ಜೊತೆಗೆ ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆಗಳು ಕೂಡ ಕಡಿಮೆಯಾಗಿವೆ.
ಹೆಪ್ಪುಗಟ್ಟಿದ ಮೀನಿನ ವಹಿವಾಟಿನ ಮೇಲೆ ಕಸ್ಟಮ್ ಸುಂಕವನ್ನ 15 ರಿಂದ 5 ಕ್ಕೆ ಇಳಿಸಲಾಗಿದೆ. ಜೊತೆಗೆ ಮೀನಿನ ಮೇಲಿನ ತೆರಿಗೆ ಕೂಡ ಈ ಬಾರಿ ಇಳಿಕೆಯಾಗಿದೆ. ಚರ್ಮದ ವಸ್ತುಗಳ ಮೇಲಿನ ಕಸ್ಟಮ್ಸ್ ಸಂಪೂರ್ಣ ಇಳಿಕೆಯಾಗಿದೆ. ಒದರ ಜೊತೆಗೆ ಎತರ್ನೆಟ್ ಸ್ವಿಚ್ ಮೇಲಿನ ಟ್ಯಾಕ್ಸ್ ಇಳಿಕೆಯಾಗಿದೆ. ಸಾಗರ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು 30 ರಿಂದ 5 ಪ್ರತಿಶತಕ್ಕೆ ಇಳಿಸಲಾಗಿದೆ. ಅಂದರೆ ದೋಣಿ, ಹಡಗು ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನ ಇಳಿಕೆ ಮಾಡಿದೆ.
ಸಾಗರ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು 30 ರಿಂದ 5 ಪ್ರತಿಶತಕ್ಕೆ ಇಳಿಸಲಾಗಿದೆ. ಅಂದರೆ ದೋಣಿ, ಹಡಗು ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನ ಇಳಿಕೆ ಮಾಡಿದೆ.
ಈ ಭಾರಿ ಖನಿಜಗಳ ಮೇಲಿನ ತೆರಿಗೆಯನ್ನ ಇಳಿಕೆಮಾಡಿದೆ. ಹಾಗೆ ಓಪನ್ ಸೆಲ್ ಮೇಲಿನ ತೆರಿಗೆ ಇಳಿಕೆಯಾಗಿದೆ. ಕೋಬಲಲ್ಟ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ ಸೇರಿದಂತೆ 12 ನಿರ್ಣಯಕ ಖನಿಜಗಳ ಮೇಲಿನ ಸುಂಕಗಳನ್ನ ಇಳಿಕೆ ಮಾಡಿದೆ. ಜೊತೆಗೆ ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳು ಜೊತೆಗೆ ಇವಿ ಬ್ಯಾಟರಿಗಳ ಮೇಲಿನ ತೆರಿಗೆ ಇಳಿಕೆಯಾಗಿದೆ.
EV ಮತ್ತು EV ಬ್ಯಾಟರಿ ತಯಾರಿಕೆಗಾಗಿ 35 ಹೆಚ್ಚುವರಿ ಸರಕುಗಳನ್ನ ಮತ್ತು ಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಗಾಗಿ 28 ಹೆಚ್ಚುವರಿ ಸರಕುಗಳನ್ನ ಮೇಲೆ ಈ ಬಾರಿ ವಿನಾಯಿತಿ ಬಂಡವಾಳ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications