ಬೆಂಗಳೂರಿನಿಂದ ಮುಂಬೈ (Bengaluru-Mumbai), ಹುಬ್ಬಳ್ಳಿ ಹೋಗುವ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಇದೀಗ ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಪ್ರಯಾಣಿಕರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದೀಗ ಹೊಸ ಸೂಪರ್‌ಫಾಸ್ಟ್ ರೈಲು (Superfast Train) ಎಂಟ್ರಿ ಕೊಡಲಿದೆ. ಈ ಬಗ್ಗೆ ಭಾರತೀಯ ರೈಲ್ವೇ ಬೆಂಗಳೂರು ಮತ್ತು ಮುಂಬೈ ನಡುವೆ ಸೂಪರ್‌ಫಾಸ್ಟ್ ರೈಲು ಹುಬ್ಬಳ್ಳಿ ಮೂಲಕ ಹಾದು ಹೋಗಲಿದ್ದು, ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಖಚಿತಪಡಿಸಿದ್ದಾರೆ.

ಇನ್ನು ಈ ಸೂಪರ್‌ಫಾಸ್ಟ್ ರೈಲು ಸೇವೆಯು ಎರಡು ಪ್ರಮುಖ ನಗರಗಳ ನಡುವಿನ ರೈಲು ಪ್ರಯಾಣದಲ್ಲಿ ಹೊಸ ಸಂಚಲನ ಸೃಷ್ಟಿಸಲಿದ್ದು, ಪ್ರಯಾಣದ ಸಮಯವನ್ನು ಸುಮಾರು 23 ರಿಂದ 18 ಗಂಟೆಗಳವರೆಗೆ ಕಡಿಮೆ ಮಾಡಲಿದೆ. ಈ ರೈಲು ಹುಬ್ಬಳ್ಳಿ ಮೂಲಕ ಸಂಚರಿಸಲಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಉದ್ಯಾನ್ ಎಕ್ಸ್‌ಪ್ರೆಸ್‌ಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಪತ್ರ ಬರೆದು, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮೂಲಕ ಹೊಸ ರೈಲು ಸೇವೆಯನ್ನು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಹೊಸ ಸೂಪರ್‌ಫಾಸ್ಟ್ ರೈಲು, ಬೆಂಗಳೂರಿನಿಂದ ಹೊರಟು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಂತಹ ಪ್ರಮುಖ ನಿಲ್ದಾಣಗಳನ್ನು ಹಾದು ಹೋಗಲು ಸಜ್ಜಾಗುತ್ತಿದೆ. ಮಧ್ಯ ಕರ್ನಾಟಕವನ್ನು ಹಾದುಹೋಗುವ ಜೊತೆಗೆ, ಈ ಸೂಪರ್‌ಫಾಸ್ಟ್ ರೈಲು ಮುಂಬೈ ಕಡೆಗೆ ಪ್ರಯಾಣ ಬೆಳೆಸುವ ಮುನ್ನ ರಾಜ್ಯದೊಳಗೆ ಸುಮಾರು 600 ಕಿಲೋಮೀಟರ್‌ಗಳನ್ನು ಸಾಗುತ್ತದೆ.
ಕೊನೆಗೂ ಪ್ರಯಾಣಿಕರಿಗೆ ವರದಾನ ಕೊಟ್ಟ ರೈಲ್ವೇ ಇಲಾಖೆ!
ಪ್ರಸ್ತುತ, ಬೆಂಗಳೂರು-ಮುಂಬೈ ಮಾರ್ಗದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ಎಂಬ ಏಕೈಕ ಸೂಪರ್‌ಫಾಸ್ಟ್ ರೈಲು ಓಡಾಡುತ್ತಿದ್ದು, ಈ ರೈಲಿನ ಪ್ರಯಾಣಕ್ಕೆ ಸುಮಾರು 23 ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಮುಂಬರುವ ಈ ಹೊಸ ರೈಲು ಸೇವೆಯು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಒಂದು ರೈಲು, ಹಲವು ಪ್ರಯೋಜನ!
ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಈ ಸೂಪರ್‌ಫಾಸ್ಟ್ ಆರ್ಥಿಕ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಹಲವು ಪ್ರಯೋಜನಗಳನ್ನು ಪಡೆಯಲಾಗುತ್ತದೆ. ಬೆಂಗಳೂರು ಮತ್ತು ಮುಂಬೈ ನಡುವಿನ ಸಂಪರ್ಕವನ್ನು ಸುಧಾರಿಸುವ ಮೂಲಕ, ಈ ರೈಲು ಸರಕು ಸಾಗಾಟಕ್ಕೆ, ಜನರ ಪ್ರಯಾಣಿಕರಿಗಾಗಿ ಸುಲಭವಾಗಲಿದೆ. ಅಷ್ಟೇ ಅಲ್ಲದೇ ವ್ಯಾಪಾರದ ದೃಷ್ಟಿಯಿಂದಲೂ ಭಾರೀ ಉಪಯೋಗವಾಗಲಿದೆ. ವಿಶೇಷವಾಗಿ, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ಪ್ರಮುಖ ಪ್ರವಾಸಿ ತಾಣಗಳ ಮೂಲಕ ಹಾದುಹೋಗುವ ಮೂಲಕ ಪ್ರಯಾಣಿಕರನ್ನು ಮತ್ತಷ್ಟು ಆಕರ್ಷಿಸುವ ನಿರೀಕ್ಷೆಯಿದೆ.
ಸರ್ಕಾರದಿಂದ ಬೆಂಬಲ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ಈ ಹೊಸ ರೈಲು ಸೇವೆಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಂಗಳೂರು ಮತ್ತು ಮುಂಬೈ ನಡುವಿನ ಭಾರೀ ದಶಕಗಳ ಬೇಡಿಕೆಗಾಗಿ ಇದು ಬೆಂಬಲ ನೀಡಲಿದೆ ಎನ್ನಲಾಗಿದೆ. ಈ ರೈಲಿನಿಂದಾಗಿ ಪ್ರಯಾಣ ಸಮಯ ಕೂಡಾ 18 ಗಂಟೆಗಳು ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ ಎಂದು ವರದಿಯಾಗಿದೆ. ಇದು ಕರ್ನಾಟಕದೊಳಗೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನಿಲ್ದಾಣಗಳನ್ನು ಹೊಂದಿದ್ದು, ಈ ಭಾಗದ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.


Click it and Unblock the Notifications